ನವದೆಹಲಿ : ಭಾರತದ ಕೋಗಿಲೆ ಲತಾ ಮಂಗೇಶ್ಕರ್ (Latra Mangeshkar), 92 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು, ಈ ಸುದ್ದಿಯಿಂದ ಇಡೀ ದೇಶವೇ ಸ್ತಬ್ಧವಾಗಿದೆ. ದೇಶವಷ್ಟೇ ಅಲ್ಲ, ಹೊರ ದೇಶಗಳಲ್ಲೂ ಲತಾ ಮಂಗೇಶ್ಕರ್ ಅಗಲಿಕೆಯಿಂದ ಅಭಿಮಾನಿಗಳು ನೋವಿನಲ್ಲಿದ್ದಾರೆ (Lata Mangeshkar Death). ಲತಾ ಮಂಗೇಶ್ಕರ್,  ತಮ್ಮ ಜೀವನದಲ್ಲಿ 36 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಸಂಗೀತದ ಜೊತೆಗೆ, ಅವರು ಕಾರುಗಳು ಮತ್ತು ಕ್ರಿಕೆಟ್ ಅನ್ನು ತುಂಬಾ ಇಷ್ಟಪಡುತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಲತಾ ಮಂಗೇಶ್ಕರ್ ಉತ್ತಮ ಕಾರು ಸಂಗ್ರಹವನ್ನು ಹೊಂದಿದ್ದಾರೆ (Lata Mangeshkar Car collection). 


COMMERCIAL BREAK
SCROLL TO CONTINUE READING

ತಮ್ಮ 13 ನೇ ವಯಸ್ಸಿನಲ್ಲಿಯೇ ಸಂಗೀತ ಲೋಕಕ್ಕೆ ಪಾದಾರ್ಪಣೆ ಮಾಡಿದವರು ಲತಾ ಮಂಗೇಶ್ಕರ್ (Lata Mangeshkar). ಅವರ ಮೊದಲ ಸಂಪಾದನೆ ಕೇವಲ 25 ರೂಪಾಯಿಗಳು. ಸದಾ ಸರಳ ಜೀವನ ನಡೆಸುತ್ತಿದ್ದ ಲತಾ ಮಂಗೇಶ್ಕರ್ , ಕಾರುಗಳನ್ನು ತುಂಬಾ ಇಷ್ಟಪಡುತ್ತಿದ್ದರು.  ಅವರ ಕಾರು ಗಳ ಕಲೆಕ್ಷನ್ (Lata Mangeshkar Car Collection)ಕೂಡ ತುಂಬಾ ಚೆನ್ನಾಗಿದೆ. ಮಾಹಿತಿ ಪ್ರಕಾರ ಲತಾ ಮಂಗೇಶ್ಕರ್ ಒಟ್ಟು ಆಸ್ತಿ 370 ಕೋಟಿ. ಮಂಗೇಶ್ಕರ್  ಮನೆ ಮುಂಬೈನ ಪೆಡ್ಡರ್ ರಸ್ತೆಯಲ್ಲಿದೆ.  ಆ ಮನೆಯ ಹೆಸರು ಪ್ರಭಾಕುಂಜ್ ಭವನ.


ಇದನ್ನೂ ಓದಿ : Lata Mangeshkar ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸಂಗತಿ ನಿಮಗೆ ಗೊತ್ತೇ?


 ಕಾರುಗಳು ಮತ್ತು ಕ್ರಿಕೆಟ್  ಬಗ್ಗೆಯೂ ಆಸಕ್ತಿ : 
ಲತಾ ಮಂಗೇಶ್ಕರ್ ಅವರು ತಮ್ಮ ಗ್ಯಾರೇಜ್‌ನಲ್ಲಿ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದರು. ತಮ್ಮ ಸಂದರ್ಶನವೊಂದರಲ್ಲಿಯೂ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು ಲತಾ ಮಂಗೇಶ್ಕರ್. ಒಂದು ಮಾಹಿತಿಯ ಪ್ರಕಾರ, ಲತಾ ಮಂಗೇಶ್ಕರ್ (Lata Mangeshkar) ಮೊದಲು ಷೆವರ್ಲೆ ಖರೀದಿಸಿದ್ದರು. ಈ ಕಾರನ್ನು ಅವರು ಮಧ್ಯಪ್ರದೇಶದ ಇಂದೋರ್‌ನಿಂದ ಖರೀದಿಸಿದ್ದರು. ಈ ಕಾರನ್ನು ಲತಾ ಮಂಗೇಶ್ಕರ್ ಅವರ ತಾಯಿಗಾಗಿ ಖರೀದಿಸಿದ್ದರು ಎನ್ನಲಾಗಿದೆ.  ಇದರ ನಂತರ ಹೊಸ ಬ್ಯೂಕ್‌ ಖರೀದಿಯಾಯಿತು. ನಂತರ ಕ್ರಿಸ್ಲರ್ ಕಾರೂ ಅವರ ಗ್ಯಾರೇಜ್ ನಲ್ಲಿ ಜಾಗ ಪಡೆಯಿತು. 


ಉಡುಗೊರೆಯಾಗಿ ಬಂದಿತ್ತು ಮರ್ಸಿಡಿಸ್  :
ವೀರ್ ಝರಾ (VeerZara) ಚಿತ್ರದ ಸಂಗೀತ ಬಿಡುಗಡೆಯ ಸಂದರ್ಭದಲ್ಲಿ, ಯಶ್ ಚೋಪ್ರಾ (Yash Chopra) ಅವರು ಲತಾ ಮಂಗೇಶ್ಕರ್ ಅವರಿಗೆ ಮರ್ಸಿಡಿಸ್ ಅನ್ನು ಉಡುಗೊರೆಯಾಗಿ ನೀಡಿದ್ದರು. ದಿವಂಗತ ಯಶ್ ಚೋಪ್ರಾ, ಲತಾ ಮಂಗೇಶ್ಕರ್ ಅವರನ್ನು ಸಹೋದರಿ ಎಂದೇ ಕರೆಯುತ್ತಿದ್ದರಂತೆ.  


ಇದನ್ನೂ ಓದಿ : "ಸಂಗೀತ ಜಗತ್ತನ್ನು ಆಳಿದ ಗಾಯಕಿ": ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ ಪಾಕ್ ಸಚಿವ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.