ಅಪ್ಪು ಅಂದ್ರೆ ಪವರ್‌, ಅಪ್ಪು ಅಂದ್ರೆ ಖದರ್.‌ ಹೀಗೆ ಪವರ್‌ ಸ್ಟಾರ್‌ ಮಾಡದ ಪಾತ್ರವಿಲ್ಲ, ಎಲ್ಲಾ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದ ನಮ್ಮ ಅಪ್ಪು ತಮ್ಮ ಕೊನೆಯ ಸಿನಿಮಾದಲ್ಲಿ ಸೈನಿಕನಾಗಿಯೂ ದೇಶಭಕ್ತಿಯ ಸಂಚಲನ ಹರಿಸಿದ್ದಾರೆ. ಹೀಗೆ ಅಪ್ಪು ಅವರ ಕೊನೆಯ ಸಿನಿಮಾಗೆ ಸಿಕ್ಕಾಪಟ್ಟೆ ದೊಡ್ಡ ಸಕ್ಸಸ್‌ ಸಿಕ್ಕಿದ್ದು, ಚಿತ್ರ ಬಿಡುಗಡೆಯಾದ 3ನೇ ದಿನವೂ ಅಬ್ಬರಿಸುತ್ತಾ ಸದ್ದು ಮಾಡುತ್ತಿದೆ.


COMMERCIAL BREAK
SCROLL TO CONTINUE READING

ಎಲ್ಲಿ ನೋಡಿದ್ರೂ ಜನ.. ಎಲ್ಲೆಲ್ಲೂ ಜನ.. ಅಂದಹಾಗೆ ಇದು ಅಪ್ಪು ಅವರ ಪವರ್.. ಖದರ್..‌ ಹೌದು, ಇನ್ನೇನು ಪವರ್‌ ಸ್ಟಾರ್‌(Puneeth Rajkumar) ನಮ್ಮನ್ನೆಲ್ಲಾ ಅಗಲಿ 5 ತಿಂಗಳು ಕಳೆಯಲಿದೆ. ಹೀಗೆ ಕನ್ನಡಿಗರನ್ನು ಬಿಟ್ಟು ದಿಢೀರ್‌ ಹೊರಟು ಹೋದ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು 'ಜೇಮ್ಸ್‌' ಮೂಲಕ ಮಾರ್ಚ್‌ 17ರಂದು ಸಿಡಿಲಿನಂತೆ ರೀ ಎಂಟ್ರಿ ಕೊಟ್ಟಿದ್ದರು. ಪವರ್‌ ಸ್ಟಾರ್‌ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್‌' ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. 3ನೇ ದಿನವೂ ಪವರ್‌ಫುಲ್‌ ಪ್ರದರ್ಶನ ಕಾಣುತ್ತಿದೆ.


ಇದನ್ನೂ ಓದಿ : James In Piracy: ಪವರ್‌ ಸ್ಟಾರ್ ಸಿನಿಮಾ 'ಜೇಮ್ಸ್‌'ಗೂ ಶುರುವಾಯ್ತು ಪೈರಸಿ ಕಾಟ


ಎಲ್ಲೆಲ್ಲೂ ಹೌಸ್‌ಫುಲ್


ಅಪ್ಪು 'ಜೇಮ್ಸ್‌' ಎಲ್ಲಾ ವಿಚಾರದಲ್ಲೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲೇ ಇದೆ. ಮತ್ತೊಂದು ಕಡೆ ಸಿನಿಮಂದಿರಕ್ಕೆ ಎಂಟ್ರಿ ಕೊಡುತ್ತಿರುವ ಪ್ರೇಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ವೀಕೆಂಡ್‌ ಕೂಡ ಬಂದಿದ್ದು, ಈಗಾಗಲೇ ಕೋಟಿ ಕೋಟಿ ಟಿಕೆಟ್‌ಗಳು ಪ್ರೀ ಬುಕಿಂಗ್‌ ಆಗಿವೆ. ಅಷ್ಟೇ ಅಲ್ಲ ಬಹುತೇಕ ಚಿತ್ರಮಂದಿರಗಳು ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿವೆ.


ಫ್ಯಾನ್ಸ್‌ ನಮನ


ಒಂದು ಕಡೆ ಅಪ್ಪು ಅವರ ಕೊನೆಯ ಸಿನಿಮಾ ಅಬ್ಬರ ಇದ್ದರೂ, ಅಪ್ಪು ನಮ್ಮೊಡನೆ ಇಲ್ಲ ಎಂಬ ನೋವು ಅಭಿಮಾನಿಗಳನ್ನ ಕಾಡುತ್ತಿದೆ. ಆದರೂ ತಮ್ಮ ನೋವು ಬದಿಗೊತ್ತಿ ಜೇಮ್ಸ್‌ ಸಿನಿಮಾ(James movie) ಕಣ್ತುಂಬಿಕೊಳ್ಳುತ್ತಿರುವ ಕೋಟಿ ಕೋಟಿ ಅಭಿಮಾನಿಗಳು, ತಮ್ಮ ನೆಚ್ಚಿನ ನಟನಿಗೆ ನಮಿಸುತ್ತಿದ್ದಾರೆ.


<iframe allow="accelerometer; autoplay; encrypted-media; gyroscope; picture-in-picture" allowfullscreen="" frameborder="0" height="350" src="https://vodakm.zeenews.com/vod/Y2Mate.is_-_700_Appu_Fans_Puneeth_Rajkumar_700_Ticket_Booked-JLXiFzKO4VU-720p-1647669005636.mp4/Y2Mate.is_-_700_Appu_Fans_Puneeth_Rajkumar_700_Ticket_Booked-JLXiFzKO4VU-720p-1647669005636.mp4"></iframe>


ದಾಖಲೆ ಪುಡಿ ಪುಡಿ


ಹೀಗೆ ಪ್ರೇಕ್ಷಕರು ಸಾಗರದಂತೆ ನುಗ್ಗಿ ಬರುತ್ತಿದ್ದು, ಚಿತ್ರಮಂದಿರಗಳು ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದ್ದರೆ, ಮತ್ತೊಂದು ಕಡೆ 'ಜೇಮ್ಸ್‌' ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಈಗಾಗಲೇ ಹಲವು ದಾಖಲೆಗಳನ್ನ 'ಜೇಮ್ಸ್‌' ಸಿನಿಮಾ ಉಡೀಸ್‌ ಮಾಡಿದೆ. ಮತ್ತಷ್ಟು ದಾಖಲೆಗಳನ್ನು ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್‌' ಪುಡಿ ಪುಡಿ ಮಾಡೋದು ಗ್ಯಾರಂಟಿ.


ಇದನ್ನೂ ಓದಿ : 100 ಕೋಟಿ ಕ್ಲಬ್‌ ಸೇರಿದ ಪವರ್‌ ಸ್ಟಾರ್‌ ಸಿನಿಮಾ 'ಜೇಮ್ಸ್‌'..!


ಒಟ್ಟಾರೆ ಹೇಳೋದಾದ್ರೆ 'ಜೇಮ್ಸ್‌'(James) ಸದ್ಯಕ್ಕೆ ಮುಗಿಯೋದಿಲ್ಲ. ಇನ್ನೂ ಹಲವು ತಿಂಗಳ ಕಾಲ 'ಜೇಮ್ಸ್‌' ಸಿನಿಮಾಗೆ ಇದೇ ರೀತಿ ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್‌ ಸಿಗಲಿದ್ದು, ಅಭಿಮಾನಿಗಳು 3-4 ಬಾರಿ ಸಿನಿಮಾ ಕಣ್ತುಂಬಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಟಿಕೆಟ್‌ ಕೂಡ ಸುಲಭವಾಗಿ ಸಿಗುತ್ತಿಲ್ಲ. ಇರುವ ಕೆಲವೇ ಟಿಕೆಟ್‌ಗೆ ಫ್ಯಾನ್ಸ್‌ ಪರದಾಡುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.