ಬೆಂಗಳೂರು: ಪೂಜಾ ಹೆಗ್ಡೆ... ಭಾರತ ಚಿತ್ರರಂಗದಲ್ಲಿ ಈ ಹೆಸರು ದೊಡ್ಡ ಕ್ರೇಜ್‌ ಕ್ರಿಯೇಟ್‌ ಮಾಡಿದೆ. ಪೂಜಾ ಹೆಗ್ಡೆ ನೋಡ ನೋಡುತ್ತಲೇ ದೊಡ್ಡ ಸ್ಟಾರ್‌ ಆಗಿ ಹೊರಹೊಮ್ಮಿದ್ದಾರೆ. ಪೂಜಾ ಹೆಗ್ಡೆ (Pooja Hegde) ಒಂದಾದ ನಂತರ ಒಂದು ಹಿಟ್ ಸಿನಿಮಾ ಕೊಟ್ಟು ಸೈ ಎನಿಸಿಕೊಂಡಿದ್ದಾರೆ. ಹೀಗೆ ಕೋಟಿ ಕೋಟಿ ಅಭಿಮಾನಿಗಳ ನಿದ್ದೆ ಕದ್ದಿರುವ ಚೆಲುವೆ ಪೂಜಾ ಹೆಗ್ಡೆ ಸದ್ಯ ಆಲಿಯಾ ಭಟ್‌ ಬಾಯ್‌ ಫ್ರೆಂಡ್‌ ಬಗ್ಗೆ ಒಂದು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಾಲಿವುಡ್‌, ಟಾಲಿವುಡ್‌, ಕಾಲಿವುಡ್..‌ ಹೀಗೆ ಎಲ್ಲೆಲ್ಲೂ ಪೂಜಾ ಹೆಗ್ಡೆ (Pooja Hegde) ಹವಾನೆ ಹವಾ. ಪೂಜಾ ಹೆಗ್ಡೆ ಮುಟ್ಟಿದ್ದೆಲ್ಲಾ ಚಿನ್ನ ಅನ್ನೋಹಾಗೆ ಆಗಿದೆ ಸದ್ಯ. ಯಾಕಂದ್ರೆ ಸಾಲು ಸಾಲು ಸಿನಿಮಾಗಳು ಸಕ್ಸಸ್‌ ಆಗುತ್ತಿರುವುದು ಪೂಜಾ ಹೆಗ್ಡೆಯವರನ್ನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.


ಏನಂದ್ರು ಪೂಜಾ..?
ಹಲವು ಹಿಟ್‌ ಸಿನಿಮಾಗಳನ್ನು ನೀಡಿದ ನಂತರ ಪೂಜಾ ಹೆಗ್ಡೆ ಫ್ರೀ ಆಗಿ ಇರೋದಕ್ಕೆ ಸಾಧ್ಯವೇ ಇಲ್ಲ. ಪೂಜಾ ಹೆಗ್ಡೆ ಈಗ ಫುಲ್‌ ಬ್ಯುಸಿ. ಒಂದು ಚಿತ್ರ ಮುಗಿಸಿದ ತಕ್ಷಣ ಮತ್ತೊಂದು ಚಿತ್ರಕ್ಕೆ ಅವರು ಸಜ್ಜಾಗಲೇಬೇಕು. ಸದ್ಯ ಪ್ರಭಾಸ್‌ ಜೊತೆ ‘ರಾಧೆ ಶ್ಯಾಮ್​’(Radhe Shyam)  ಸಿನಿಮಾದಲ್ಲಿ ನಟಿಸಿರುವ ಪೂಜಾ ಹೆಗ್ಡೆ, ಆ ಸಿನಿಮಾ ರಿಲೀಸ್‌ಗೆ ವೆಯ್ಟ್‌ ಮಾಡುತ್ತಿದ್ದಾರೆ. ಆದ್ರೆ ಈ ಹೊತ್ತಲ್ಲೇ ನಟಿ ಪೂಜಾ ಹೆಗ್ಡೆ ನೀಡಿರುವ ಆ ಒಂದು ಹೇಳಿಕೆ ಎಲ್ಲೆಲ್ಲೂ ಸೌಂಡ್‌ ಮಾಡುತ್ತಿದೆ.


ಇದನ್ನೂ ಓದಿ-  Kabzaa:ಬಿಗ್‌ ಸರ್ಪ್ರೈಸ್‌ ನೀಡಿದ 'ಕಬ್ಜ' ಟೀಂ.. ಕಿಚ್ಚ ಸುದೀಪ್‌ಗೆ ಇವರೇ ನಾಯಕಿ!


ಹೌದು, ಏನಪ್ಪಾ ಅಂದ್ರು ಈ ಕರಾವಳಿ ಬೆಡಗಿ..? ಅಂದ್ರೆ, ಆಲಿಯಾ ಭಟ್‌ ಬಾಯ್‌ ಫ್ರೆಂಡ್‌ ರಣಬೀರ್‌ ಕಪೂರ್‌ ಬಗ್ಗೆ ಒಂದು ಹೇಳಿಕೆ ನೀಡಿದ್ದಾರೆ.  ‘ರಾಧೆ ಶ್ಯಾಮ್​’ ಚಿತ್ರದ ಪ್ರಚಾರದ ವೇಳೆ ಪೂಜಾ ಹೆಗ್ಡೆಗೆ ಪ್ರಶ್ನೆಗಳು  ಸುರಿಮಳೆ ಎದುರಾಗಿತ್ತು. ಈ ಪ್ರಶ್ನೆಗಳಿಗೆ ಡಿಫರೆಂಟ್‌ ಆಗಿಯೇ ಪೂಜಾ ಹೆಗ್ಡೆ ಉತ್ತರ ನೀಡಿದ್ದರು. ಆದ್ರೆ ಈ ಉತ್ತರಗಳಲ್ಲಿ ರಣಬೀರ್‌ ಕಪೂರ್‌ (Ranbeer Kapoor) ಬಗ್ಗೆ ಪೂಜಾ ನೀಡಿದ ಹೇಳಿಕೆ ಹವಾ ಎಬ್ಬಿಸಿದೆ. ಆ ಹೇಳಿಕೆ ಈಗ ಎಲ್ಲೆಲ್ಲೂ ಸಂಚಲನ ಸೃಷ್ಟಿಸಿದ್ದು, ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಾಗಿದೆ. Viral Video: ರಣವೀರ್ ಸಿಂಗ್ ಕಾಲು ಹಿಡಿದ ರಾಖಿ ಸಾವಂತ್ ಮಾಡಿದ್ದೇನು..?


ಒಟ್ಟಾರೆ ಪೂಜಾ ಹೆಗ್ಡೆ ಸಿನಿ ರಂಗದಲ್ಲಿ ಬೆಟ್ಟದಷ್ಟು ಆಸೆಗಳನ್ನ ಹೊತ್ತು ಬಂದಿದ್ದು, ಸದ್ಯಕ್ಕೆ ‘ರಾಧೆ ಶ್ಯಾಮ್​’ ಜಗತ್ತಿನಾದ್ಯಂತ ಸಂಚಲ ಸೃಷ್ಟಿಸಲು ಸಜ್ಜಾಗಿದೆ. ಇದ್ರ ಜೊತೆಗೆ ಪೂಜಾ ಹೆಗ್ಡೆ ಮತ್ತಷ್ಟು ಮಹತ್ವದ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಬಗ್ಗೆ ಹಿಂಟ್‌ ಕೊಟ್ಟಿರೋದು ವಿಶೇಷ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.