ಆಟದ ಮಧ್ಯೆ ವಿರಾಟ್ ಕೊಹ್ಲಿ ಭಾವುಕ..! ಕಣ್ಣೀರಾಕುತ್ತಾ ಪತ್ನಿ ಅನುಷ್ಕಾ ಶರ್ಮಾಗೆ ಕರೆ ಮಾಡಿದ್ದೇಕೆ ಕಿಂಗ್..?
Virat Kohli Anushka Sharma Emotional moment: ನಟಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಿ-ಟೌನ್‌ನ ನೆಚ್ಚಿನ ಜೋಡಿಗಳಲ್ಲಿ ಒಬ್ಬರು . ಈ ಕಾರಣದಿಂದಲೇ ಅವರ ಹೆಸರು ದಿನವೂ ಜನಮನದಲ್ಲಿ ಉಳಿದಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿಗೆ ಕರೆ ಮಾಡಿ ಕಣ್ಣೀರಿಟ್ಟ ವಿಷಯದ ಕುರಿತು ಬಹಿರಂಗಪಡಿಸಿದ್ದಾರೆ.
Virat Kohli Anushka Sharma Emotional moment: ನಟಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಿ-ಟೌನ್‌ನ ನೆಚ್ಚಿನ ಜೋಡಿಗಳಲ್ಲಿ ಒಬ್ಬರು . ಈ ಕಾರಣದಿಂದಲೇ ಅವರ ಹೆಸರು ದಿನವೂ ಜನಮನದಲ್ಲಿ ಉಳಿದಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿಗೆ ಕರೆ ಮಾಡಿ ಕಣ್ಣೀರಿಟ್ಟ ವಿಷಯದ ಕುರಿತು ಬಹಿರಂಗಪಡಿಸಿದ್ದಾರೆ.
ಅನುಷ್ಕಾ ಶರ್ಮಾ ಮತ್ತು ಅವರ ಪತಿ ವಿರಾಟ್ ಕೊಹ್ಲಿ ಬಗ್ಗೆ ಅನೇಕ ರೀತಿಯ ಸುದ್ದಿಗಳು ಆಗಾಗ ಹೊರಬರುತ್ತಿರುತ್ತವೆ. ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಈ ಜೋಡಿ ಸದಾ ಸುದ್ದಿಯಲ್ಲಿರುತ್ತಾರೆ. ಇದು ಸಹಜ ಏಕೆಂದರೆ ವಿರಾಟ್ ಮತ್ತು ಅನುಷ್ಕಾ ಚಿತ್ರರಂಗದ ನೆಚ್ಚಿನ ಜೋಡಿಗಳಲ್ಲಿ ಒಬ್ಬರು.
ಒಂದೆಡೆ ವಿರಾಟ್ ಕೊಹ್ಲಿ ಕ್ರಿಕೆಟ್ ಮಾಸ್ಟರ್ ಆಗಿದ್ದರೆ, ಅವರ ಪತ್ನಿ ಅನುಷ್ಕಾ ಶರ್ಮಾ ಹಿಂದಿ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ, ಸಂದರ್ಶನವೊಂದರಲ್ಲಿ, ಕಿಂಗ್ ಕೊಹ್ಲಿ ಅವರು ಅನುಷ್ಕಾ ಮತ್ತು ಮಗಳು ವಾಮಿಕಾ ಅವರೊಂದಿಗೆ ಫೋನ್‌ನಲ್ಲಿ ಮಾತನಾಡುವಾಗ ಭಾವುಕರಾದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಕ್ರಿಕೆಟಿಗನಾಗಿ ವಿರಾಟ್ ಕೊಹ್ಲಿ ಕೂಡ ತಮ್ಮ ಜೀವನದಲ್ಲಿ ಕೆಟ್ಟ ಹಂತವನ್ನು ಎದುರಿಸಿದ್ದಾರೆ. ಆದರೆ ಈ ಸಮಯದಲ್ಲಿ, ಅವರ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ತುಂಬಾ ಬೆಂಬಲ ನೀಡಿದ್ದರು, ಜತಿನ್ ಸಪ್ರು ಅವರೊಂದಿಗಿನ ಸಂದರ್ಶನದಲ್ಲಿ, ಕೊಹ್ಲಿ ತಮ್ಮ ಸ್ಮರಣೀಯ ಶತಕದ ಕುರಿತಾದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡುತ್ತಾ ವಿರಾಟ್ ಕೊಹ್ಲಿ ಅವರು.."ಆ ಸಿಕ್ಸರ್ ಹೊಡೆದು ಶತಕ ಪೂರೈಸಿದ ತಕ್ಷಣ ಜೋರಾಗಿ ನಗುತ್ತಾ ಎರಡು ವರ್ಷಗಳಿಂದ ಇದಕ್ಕಾಗಿಯೇ ಕೊರಗುತ್ತಿದೆ ಎಂದು ಮನದಲ್ಲೆ ಅಂದುಕೊಲ್ಳುತ್ತಾ, ಅನುಷ್ಕಾ ಶರ್ಮಾ ಅವರಿಗೆ ಕರೆ ಮಾಡಿ ಮಾತನಾಡಿದೆ, ನನ್ನ ಮಗಳು ವಾಮಿಕಾ ಕೂಡ ಕರೆಯಲ್ಲಿದ್ದರು. ಅವರಿಬ್ಬರ ಜೊತೆ ಮಾತನಾಡುತ್ತಾ ನನ್ನ ಕಣ್ಣಂಚಲ್ಲಿ ನೀರು ಜಾರಿತ್ತು" ಎಂದು ಕೊಹ್ಲಿ ಆ ಅದಿನದ ಭಾವನಾತ್ಮಕ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಈ ಮೂಲಕ ವಿರಾಟ್ ಕೊಹ್ಲಿ ತಮ್ಮ ಮೊದಲ T20I ಅಂತರಾಷ್ಟ್ರೀಯ ಶತಕವನ್ನು ನೆನಪಿಸಿಕೊಳ್ಳುತ್ತಾ ಆಸಕ್ತಿದಾಯಕ ಉಪಾಖ್ಯಾನವನ್ನು ವಿವರಿಸಿದ್ದಾರೆ. ಕೊಹ್ಲಿಗೆ ಆ ಶತಕವೂ ಮಹತ್ವದ್ದಾಗಿತ್ತು. 3 ವರ್ಷಗಳ ಕೆಟ್ಟ ಕ್ರಿಕೆಟ್ ಹಂತದ ನಂತರ ಅವರು ಆ ದಿನ ತಮ್ಮ ಬ್ಯಾಟ್‌ನಿಂದ ಶತಕ ಸಿಡಿಸಿದ್ದರು. ಅಫ್ಘಾನಿಸ್ತಾನದ ಮುಂದೆ ಶತಕಕ್ಕಾಗಿ 1021 ದಿನಗಳ ಕಾಯುವಿಕೆಯನ್ನು ಕೊಹ್ಲಿ ಕೊನೆಗೊಳಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ