ಬೆಂಗಳೂರು : ಮಕ್ಕಳ ಕಳ್ಳರಿದ್ದಾರೆ ಎಂಬ ವದಂತಿಗೆ ಒಬ್ಬನ ಪ್ರಾಣವೇ ಹಾರಿ ಹೋಗಿದೆ.‌ ಇನ್ನೊಂದು ಕಡೆ ಈ ಸಾವಿಗೆ ಲಾಕಪ್‌ಡೆತ್ ಕಾರಣ ಎಂಬ ಅನುಮಾನ ಕಾಡಿತ್ತು. ಸದ್ಯ ಸಿಸಿಟಿವಿ ದೃಶ್ಯ ಪ್ರಕರಣದ ಅಸಲಿ ಸತ್ಯವನ್ನ ಬಿಚ್ಚಿಟ್ಟಿದೆ. ರಾಮಮೂರ್ತಿ ನಗರದ ಜನ ಭಾಷೆ ಬಾರದಿದ್ದವನನ್ನು ಹಿಡಿದು ಮಕ್ಕಳ ಕಳ್ಳ ಎಂದು ಗುಂಪು ಕಟ್ಟಿ ಹೊಡೆದು ಪೊಲೀಸರಿಗೆ ಒಪ್ಪಿಸಿದ ಮೇಲೆ ಆತ ಕೆ ಆರ್ ಪುರಂ ಬಳಿ ಶವವಾಗಿ ಪತ್ತೆಯಾಗಿದ್ದ. ಈ ಸಾವಿನ ಸುತ್ತ ಲಾಕಪ್‌ಡೆತ್ ಎಂಬ ಹುತ್ತ ಬೆಳೆಯುವ ಮುನ್ನವೇ ಠಾಣೆಯ ಸಿಸಿಟಿವಿ ಪ್ರಕರಣಕ್ಕೆ ಟ್ವಿಸ್ಟ್‌ ನೀಡಿದೆ. 


COMMERCIAL BREAK
SCROLL TO CONTINUE READING

ಜಾರ್ಖಂಡ್ ಮೂಲದ ಸಂಜಯ್ ನನ್ನು ಕರೆದುಕೊಂಡು ಹೋಗಿದ್ದ ರಾಮಮೂರ್ತಿ ನಗರ ಪೊಲೀಸರು ವಿಚಾರಣೆ ನಡೆಸಿದಾಗ ಆತ ಮೂಲತಃ ಜಾರ್ಖಂಡ್ ಮೂಲದವನಾಗಿದ್ದ. ಸಿಲಿಕಾನ್‌ ಸಿಟಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು, ರಾಮಮೂರ್ತಿ ನಗರದಲ್ಲೆ ವಾಸವಾಗಿದ್ದ ಎಂಬುದು ಗೊತ್ತಾಗಿತ್ತು, ಇನ್ನು ಠಾಣೆಯಲ್ಲಿ ಈ ಬಗ್ಗೆ ದೂರು ನೀಡುವಂತೆ ಪೊಲೀಸರು ಕೇಳಿದಾಗ ಸಂಜಯ್ ಬೇಡ ಎಂದಿದ್ದನಂತೆ. ಜೊತೆಗೆ ಠಾಣೆಯಿಂದ ನಡೆದುಕೊಂಡೆ ಹೋಗಿದ್ದಾನೆ. ಇದಕ್ಕೆ ಸಿಸಿಟಿವಿ ಕೂಡ ಸಾಕ್ಷಿಯಾಗಿದೆ.


ಇದನ್ನೂ ಓದಿ: ಚೈನೀಸ್​ ಲೋನ್​ ಆ್ಯಪ್‌ಗಳಿಂದ 100 ಕೋಟಿಗೂ ಹೆಚ್ಚು ಹಣ ಫ್ರೀಜ್ ​: ಸಿಸಿಬಿಯಿಂದ 70 ಕೋಟಿ ಜಪ್ತಿ


ಘಟನೆ ನಡೆದ ಮರುದಿನ ಕೆ ಆರ್ ಪುರಂ ಪೊಲೀಸ್ ಠಾಣೆ ಬಳಿಯ ಐಟಿಐ ಕಾಂಪೌಂಡ್ ಸಂಜಯ್ ಶವ ಪತ್ತೆಯಗಿದ್ದು, ಕೆಆರ್ ಪುರ ಪೊಲೀಸರು ತನಿಖೆ ಮಾಡಿ ಇವನ ಸಾವಿಗೆ ಹಲ್ಲೆ ಕಾರಣ ಎಂದು ಪತ್ತೆಹಚ್ಚಿದ್ದಾರೆ. ಸದ್ಯ ಕೊಲೆ ಕೇಸ್ ದಾಖಲಿಸಿಕೊಂಡಿರುವ ಕೆ ಆರ್ ಪುರಂ ಪೊಲೀಸರು ಘಟನೆ ಸಂಬಂಧ ಪಾರ್ತಿಭನ್, ಸೈಯದ್ ಖಾಜ, ಫಯಾಜ್ ಪಾಷ ಎಂಬುವವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.