Kranti Traiker Release : ಕ್ರಾಂತಿಯ ಹವಾ ಸದ್ಯ ಎಲ್ಲೆಡೆ ಬಲು ಜೋರಾಗಿದೆ. ಒಂದೊಂದು ಊರಲ್ಲಿ ಒಂದೊಂದು ಹಾಡನ್ನು ರಿಲೀಸ್‌ ಮಾಡುವ ಮೂಲಕ ಈಗಾಗಲೇ ಭರ್ಜರಿ ಪ್ರಚಾರ ನಡೆಸಿದ್ದಾರೆ. ಕ್ರಾಂತಿ ಸಿನಿಮಾದ ಥೀಮ್ ಸಾಂಗ್‌ನ್ನು ಮೈಸೂರಿನಲ್ಲಿ ರಿಲೀಸ್‌ ಮಾಡಿದ್ದರು. ಹೊಸಪೇಟೆಯಲ್ಲಿ ಮೆಲೋಡಿ ಹಾಡು ಬೊಂಬೆ ಬೊಂಬೆ ಲಿರಿಕಲ್ ಸಾಂಗ್‌ ಬಿಡುಗಡೆ ಮಾಡಿದರು. ನಿನ್ನೆ ಹುಬ್ಬಳ್ಳಿಯಲ್ಲಿ ಪುಷ್ಪಾವತಿ ಎಂಬ ಪಾರ್ಟಿ ಸಾಂಗ್ ರಿಲೀಸ್ ಆಗಿದೆ. ಇದೀಗ ಸಿನಿಮಾ ಬಿಡುಗಡೆ ದಿನ ಹತ್ತಿರವಾಗುತ್ತಿದ್ದು, ಚಿತ್ರದ ಟ್ರೇಲರ್‌ ಬಗ್ಗೆ ಕುತೂಹಲ ಹೆಚ್ಚಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಉರ್ಸೊಣ.. ಒಂದು ಹೆಜ್ಜೆ ಮುಂದೆ ಹೋಗಿ ಜಾಸ್ತಿ ಉರ್ಸೊಣ : ವಿರೋಧಿಗಳಿಗೆ DBoss ಟಾಂಗ್


ಕ್ರಾಂತಿ ಟ್ರೈಲರ್ ಎಲ್ಲಿ ಯಾವಾಗ ರಿಲೀಸ್ ಆಗುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈ ಬಗ್ಗೆ ಇದೀಗ ನಟ ದರ್ಶನ್ ದೊಡ್ಡ ಸುಳಿವು ನೀಡಿದ್ದಾರೆ. ನಟ ದರ್ಶನ್‌ ಅಭಿನಯದ ಕ್ರಾಂತಿ ಸಿನಿಮಾದ ಮೂರನೇ ಹಾಡು ನಿನ್ನೆ ಬಿಡುಗಡೆಯಾಗಿದೆ. ಇತ್ತೀಚಿಗೆ ನಡೆದ ಅವಮಾನದಿಂದ ಕುಗ್ಗದ ದಚ್ಚು ಕಚ್ಚೆದೆಯಿಂದ ಮುಂದೆ ಸಾಗುತ್ತಿದ್ದಾರೆ. ಕ್ರಾಂತಿ ಸಿನಿಮಾದ ಬಹುನಿರೀಕ್ಷಿತ ʼಪುಷ್ಪಾವತಿʼ ಸಾಂಗ್‌ನ್ನು ಹುಬ್ಬಳ್ಳಿ ನಗರದಲ್ಲಿ ರಿಲೀಸ್‌ ಆಗಿದೆ. 


ಸಿನಿಮಾದ ಪ್ರತಿ ಹಾಡನ್ನು ಒಂದೊಂದು ಜಿಲ್ಲೆಯಲ್ಲಿ ರಿಲೀಸ್ ಮಾಡಿರುವ ಕ್ರಾಂತಿ ಚಿತ್ರತಂಡ, ಟ್ರೇಲರ್ ಮಾತ್ರ ಬೆಂಗಳೂರಿನ ಮಾಲ್‌ನಲ್ಲಿ ರಿಲೀಸ್‌ ಆಗಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಜನವರಿ 26 ಕ್ಕೆ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ರಿಲೀಸ್‌ ಆಗಲಿದೆ. 


ಇದನ್ನೂ ಓದಿ : ಹಿಂದಿ ಹೇರಿಕೆ ವಿರುದ್ಧ ಗುಡುಗಿದ ನಟ ಕಮಲ್ ಹಾಸನ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.