ನವದೆಹಲಿ: ಬಾಲಿವುಡ್ ನ ಖ್ಯಾತ ಹಿರಿಯ ನಟ ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಶ್ರಾಫ್ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಹಸಿಬಿಸಿ ಚಿತ್ರಗಳನ್ನು ಹರಿಬಿದುತ್ತಲೇ ಇರುತ್ತಾರೆ. ಸದ್ಯ ಅವರು ತಮ್ಮ ಬಾಯ್ಫ್ರೆಂಡ್ ಎಬನ್ ಹೋಮ್ಸ್ ಜೊತೆ ತಮ್ಮ ಉತ್ತಮ ಕಾಲ ಕಳೆಯುವುದರಲ್ಲಿ ನಿರತರಾಗಿದ್ದಾರೆ. ಈ ಜೋಡಿಯ ಫೋಟೋಗಳೂ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತವೆ. ಇತ್ತೀಚೆಗಷ್ಟೇ ಕೃಷ್ಣಾ ಶ್ರಾಫ್ ತಾವು ಎಬನ್ ಜೊತೆಗೆ ಬಿಕಿನಿಯಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಇದಕ್ಕೆ ಅವರ ಸಹೋದರ ಟೈಗರ್ ಶ್ರಾಫ್ ಕೂಡ ಪ್ರತಿಕ್ರಿಯೇ ನೀಡಿದ್ದಾರೆ. ಈಮೊಜಿಗಳ ಮೂಲಕ ಪ್ರತಿಕ್ರಿಯೆ ನೀಡಿರುವ ಟೈಗರ್ ಶ್ರಾಫ್, ಸಹೋದರಿಯ ಕಾಲೆಳೆದಿದ್ದಾರೆ. ಮತ್ತೊಂದು ಫೋಟೋಗೆ ಕಾಮೆಂಟ್ ನೀಡಿರುವ ಟೈಗರ್ 'ಬಡಪಾಯಿ ಎಬನ್' ಎಂದಿದ್ದಾರೆ.



COMMERCIAL BREAK
SCROLL TO CONTINUE READING

ಕೃಷ್ಣಾ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಫೋಟೋಗಳಲ್ಲಿ ಅವರು ತಮ್ಮ ಬಾಯ್ಫ್ರೆಂಡ್ ಜೊತೆ ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿ ತುಂಬಾ ರೋಮ್ಯಾಂಟಿಕ್ ಆಗಿ ಕಂಡುಬಂದಿದ್ದಾರೆ. ಕಳೆದ ಹಲವು ದಿನಗಳಿಂದ ಕೃಷ್ಣಾ ಹಾಗೂ ಎಬೇನ್ ಪರಸ್ಪರ ಡೇಟ್ ನಡೆಸುತ್ತಿದ್ದಾರೆ. ಇಬ್ಬರು ವಿವಾಹವಾಗಿದ್ದಾರೆ ಎಂಬ ವದಂತಿಗಳೂ ಸಹ ಕೇಳಿಬಂದಿವೆ. ಇತ್ತೀಚೆಗಷ್ಟೇ ಫೋಟೋವೊಂದನ್ನು ಹರಿಬಿಟ್ಟಿದ್ದ ಎಬನ್ ಕೃಷ್ಣಾ ಅವಳನ್ನು ತಮ್ಮ ಪತ್ನಿ ಎಂದು ಹೇಳಿದ್ದರು. ಡಿನ್ನರ್ ಡೇಟ್ ಗೆ ತೆರಳಿದ್ದ ವೇಳೆ ಕ್ಲಿಕ್ಕಿಸಲಾಗಿದ್ದ ಫೋಟೋ ಹಂಚಿಕೊಂಡಿದ್ದ ಎಬನ್, wifey ಎಂಬ ಶೀರ್ಷಿಕೆ ನೀಡಿದ್ದರು.



ಟೈಗರ್ ಶ್ರಾಫ್ ಕುರಿತು ಹೇಳುವುದಾದರೆ, ಇತ್ತೀಚೆಗೆ ಹೃತಿಕ್ ರೋಶನ್ ಜೊತೆ ಅವರು ನಟಿಸಿರುವ ಚಿತ್ರ 'ವಾರ್' ಗಲ್ಲಾ ಪಟ್ಟಿಗೆಯಲ್ಲಿ ಭಾರಿ ಪ್ರದರ್ಶನ ಕಂಡಿದೆ. ಶೀಘ್ರದಲ್ಲಿಯೇ ಅವರು 'ಬಾಘಿ-3' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೊದಲ ಎರಡು ಚಾಪ್ಟರ್ ಗಳಾದ 'ಬಾಘಿ' ಹಾಗೂ 'ಬಾಘಿ-2' ಚಿತ್ರಗಳೂ ಕೂಡ ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ನಡೆಸಿವೆ. 'ಹೀರೋಪಂತಿ' ಚಿತ್ರದ ಮೂಲಕ ಟೈಗರ್ ಶ್ರಾಫ್ ಬಾಲಿವುಡ್ ನಲ್ಲಿ ಪದಾರ್ಪಣೆ ಮಾಡಿದ್ದರೆ. ತಮ್ಮ ವಿನೂತನ ನೃತ್ಯ ಶೈಲಿ, ಸಾಹಸ ದೃಶ್ಯಗಳ ಮೂಲಕ ಟೈಗರ್ ಶ್ರಾಫ್ ಅಭಿಮಾನಿಗಳಲ್ಲಿ ತನ್ನದೇ ಆದ ಸ್ಥಾನ ಸೃಷ್ಟಿಸಿದ್ದಾರೆ. ಟೈಗರ್ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಟೈಗರ್ ಜಿಮ್ ಗೆ ಭೇಟಿ ನೀಡಿದ್ದ ಖ್ಯಾತ ಚಿತ್ರ ನಟ ಅಮೀರ್ ಖಾನ್, ಮುಂದೊಂದು ದಿನ ಈ ಹುಡುಗ ಬಾಲಿವುಡ್ ನಲ್ಲಿ ಭಾರಿ ಹೆಸರು ಗಳಿಸಲಿದ್ದಾನೆ ಎಂದು ಭವಿಷ್ಯ ನುಡಿದಿದ್ದರು.