ನವದೆಹಲಿ: ಕೃತಿ ಸನೊನ್ ಬಾಲಿವುಡ್‍ನ ಜನಪ್ರಿಯ ನಟಿಯರಲ್ಲಿ ಒಬ್ಬರು. ದೊಡ್ಡ ದೊಡ್ಡ ಸ್ಟಾರ್ ನಟರ ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕೃತಿ ಅವರು ನಟ ಕಾರ್ತಿಕ್ ಆರ್ಯನ್ ಅವರೊಂದಿಗಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಬಳಿಕ ಇವರಿಬ್ಬರ ಡೇಟಿಂಗ್ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕೃತಿ ಮತ್ತು ಕಾರ್ತಿಕ್ ಡೇಟಿಂಗ್ ಮಾಡುತ್ತಿದ್ದಾರೆಂದು ನೆಟಿಜನ್ಸ್‍ಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಇದೇ ವಿಚಾರವಾಗಿ ಕೃತಿ ಮೌನ ಮುರಿದಿದ್ದಾರೆ.


COMMERCIAL BREAK
SCROLL TO CONTINUE READING

ಕಾರ್ತಿಕ್ ಜೊತೆಗಿನ ಡೇಟಿಂಗ್ ಸುದ್ದಿ ಬಗ್ಗೆ ನಟಿ ಹೇಳಿದ್ದೇನು?


ನಟ ಕಾರ್ತಿಕ್ ಜೊತೆಗಿನ ತಮ್ಮ ಸಂಬಂಧದ ಕುರಿತು ಸಂದರ್ಶನವೊಂದರಲ್ಲಿ ಕೃತಿ ಮಾತನಾಡಿದ್ದಾರೆ. ‘ಸೋಷಿಯಲ್ ಮೀಡಿಯಾ ನಮಗೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ನನಗೆ ತಿಳಿದಿಲ್ಲ. ಇಂತಹ ವಿಷಯಗಳನ್ನು ಕೇಳಿದಾಗ ನನಗೆ ಮಿಶ್ರ ಭಾವನೆಗಳು ಬರುತ್ತವೆ. ಇಂತಹ ಗಾಳಿಸುದ್ದಿಗಳ ಬಗ್ಗೆ ಕೇಳಿದರೆ ನನಗೇನೂ ಸಮಸ್ಯೆಯಾಗುವುದಿಲ್ಲ. ನನ್ನ ಜೀವನವು ಅಂದುಕೊಂಡಷ್ಟು ಆಸಕ್ತಿದಾಯಕವಾಗಿರಬೇಕೆಂದು ನಾನು ಬಯಸುತ್ತೇನೆ. ಈ ವದಂತಿಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ.  


ಇದನ್ನೂ ಓದಿ: ತೆರೆಮೇಲೆ ಅಬ್ಬರಿಸಲು ಸಜ್ಜಾದ 'ಮಾರ್ಟಿನ್‌'! ರಿಲೀಸ್‌ ಡೇಟ್‌ ಫಿಕ್ಸ್


‘ಯಶಸ್ಸು ಮತ್ತು ಸೋಲು ತಾತ್ಕಾಲಿಕ’


‘ನಮ್ಮ ಬಗ್ಗೆ ಏನೇ ಬರೆದರೂ ಜನರ ಮನಸ್ಸಿನಿಂದ ಅದು ಬೇಗನೆ ದೂರ ಹೋಗುತ್ತಿರುವುದಕ್ಕೆ ನನಗೆ ಖುಷಿಯಾಗಿದೆ. ಏಕೆಂದರೆ ಜನರು ಇಂತಹ ವಿಷಯಗಳನ್ನು ತುಂಬಾ ಹೊತ್ತು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಯಶಸ್ಸು ಮತ್ತು ಸೋಲು ತಾತ್ಕಾಲಿಕ. ಹಾಗೆಯೇ ಒಳ್ಳೆಯ ಮತ್ತು ಕೆಟ್ಟ ಪ್ರಚಾರ ಕೂಡ ತಾತ್ಕಾಲಿಕ. ಗಾಳಿಸುದ್ದಿಗಳನ್ನು ಜನರು ಹೆಚ್ಚಾಗಿ ನಂಬುವುದಿಲ್ಲ’ವೆಂದು ಹೇಳಿದ್ದಾರೆ. ಈ ಮೂಲಕ ಕೃತಿ ತಾವು ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ಮಾಡುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.


ಸದ್ಯ ನಟಿ ಕೃತಿ ಸನೊನ್ ಅವರು ಟೈಗರ್ ಶ್ರಾಫ್‍ರ ಆಕ್ಷನ್-ಥ್ರಿಲ್ಲರ್ ‘ಗಣಪತ್: ಪಾರ್ಟ್ 1’ ಮತ್ತು ‘ಭೇಲಿಯಾ’ ಸೇರಿ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೇ ಪ್ರಭಾಸ್ ಅಭಿನಯದ ‘ಆದಿಪುರುಷ’ ಚಿತ್ರದ ಶೂಟಿಂಗ್‍ನಲ್ಲಿಯೂ ಭಾಗಿಯಾಗುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ‘ಸೀತೆ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೃತಿ ಕೊನೆ ಬಾರಿಗೆ ‘ಬಚ್ಚನ್ ಪಾಂಡೆ’ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


ಇದನ್ನೂ ಓದಿ: Aishwarya Rajesh New Movie : ಐಶ್ವರ್ಯಾ ರಾಜೇಶ್ ನಟನೆಯ 'ಡ್ರೈವರ್ ಜಮುನಾ' ಸಿನಿಮಾದ ಫಸ್ಟ್ ಲುಕ್ ರಿಲೀಸ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.