Kriti Kharbanda Shocking Experience: ನಟಿ ಕೃತಿ ಖರ್ಬಂದಾ ಅವರು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಒಮ್ಮೆ ತಾನು ಉಳಿದುಕೊಂಡಿದ್ದ ಹೋಟೆಲ್ ಕೋಣೆಯಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಲಾಗಿತ್ತು ಎಂದು ಹೇಳಿದ್ದಾರೆ. ಈ ವಿಷಯವನ್ನು ಕೃತಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ತಾನು ಹೋಟೆಲ್‌ನಲ್ಲಿ ತಂಗಿದಾಗಲೆಲ್ಲಾ, ತಾನು ಮತ್ತು ತನ್ನ ತಂಡವು ಕೋಣೆಯಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಲಾಗಿದೆಯೇ ಎಂದು ಪರಿಶೀಲಿಸುತ್ತೇವೆ ಎಂದು ಕೃತಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೆಂಪು ಸೀರೆಯಲ್ಲಿ ಮಿಂಚಿದ ಕಿರುತೆರೆ ಸುಂದರಿ..ಪೋಟೋಸ್‌ ನೋಡಿ


ಕನ್ನಡ ಸಿನಿಮಾವೊಂದರ ಶೂಟಿಂಗ್ ವೇಳೆ ಇಂತಹದ್ದೊಂದು ಘಟನೆ ನಡೆದಿದೆ. ಹೋಟೆಲ್ ಸಿಬ್ಬಂದಿಯೊಬ್ಬರು ನನ್ನ ಕೋಣೆಯಲ್ಲಿ ರಹಸ್ಯವಾಗಿ ಕ್ಯಾಮರಾ ಅಳವಡಿಸಿದ್ದರು. ನನ್ನ ತಂಡ ಮತ್ತು ನಾನು ಕೊಠಡಿಯನ್ನು ಪರಿಶೀಲಿಸಿದಾಗ, ನಾವು ಆ ಕ್ಯಾಮೆರಾ ನೋಡಿದ್ದೇವೆ. ಆ ಹುಡುಗ ಇದರಲ್ಲಿ ನಿಪುಣನಲ್ಲ, ಹಾಗಾಗಿ ಅವನು ಕ್ಯಾಮೆರಾವನ್ನು ತುಂಬಾ ಕೆಟ್ಟದಾಗಿ ಅಳವಡಿಸಿದ್ದನು. ನಾನು ಅದನ್ನು ನೋಡಿದೆ. ಕ್ಯಾಮೆರಾವನ್ನು ಸೆಟ್ ಟಾಪ್ ಬಾಕ್ಸ್ ಹಿಂದೆ ಮರೆಮಾಡಲಾಗಿತ್ತು. ಇದು ತುಂಬಾ ಅಪಾಯಕಾರಿ ಮತ್ತು ಅಂತಹ ಘಟನೆಗಳನ್ನು ತಪ್ಪಿಸಲು, ನೀವೂ ಎಚ್ಚರದಿಂದಿರುವುದು ಬಹಳ ಮುಖ್ಯ ಎಂದು ಕೃತಿ ಹೇಳಿದ್ದಾರೆ.


ಕೃತಿಗೂ ಮುನ್ನ ದಿಯಾ ಮಿರ್ಜಾ ಕೂಡ ಸಂದರ್ಶನವೊಂದರಲ್ಲಿ ಇಂತಹ ಅನುಭವದ ಬಗ್ಗೆ ಮಾತನಾಡಿದ್ದರು. ತಾನು ಹೊಟೇಲ್‌ನಲ್ಲಿ ತಂಗಿದಾಗಲೆಲ್ಲ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆಯೇ ಎಂದು ನೋಡಲು ಎಲ್ಲಾ ಕೊಠಡಿಗಳಲ್ಲಿ ಹುಡುಕುತ್ತೇನೆ ಎಂದು ಹೇಳಿದ್ದರು. ನಟಿಯರ ಖಾಸಗಿ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಸುರಕ್ಷಿತವಾಗಿರುವುದು ಬಹಳ ಮುಖ್ಯ. 


ಇದನ್ನೂ ಓದಿ: 'ರಜಿನಿಕಾಂತ್ ಸರ್ 6 ಫ್ಲಾಪ್ಸ್...' ವಿವಾದಕ್ಕೆ ಕಾರಣವಾದ ವಿಜಯ್ ದೇವರಕೊಂಡ ಕಾಮೆಂಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ