Kriti Sanon: ಕೃತಿ ಸನೊನ್‌ ತಮ್ಮ ವೃತ್ತಿ ಜೀವನದ ಕುರಿತು ಅಷ್ಟೆ ಅಲ್ಲದೆ ತಮ್ಮ ವೃಯಕ್ತಿಕ ಜೀವನದ ಕುರಿತು ಸಹ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಕೃತಿ ಸನೋನ್‌ ಅವರ ಮದುವೆ ವಿಚಾರ ಬಾಲಿವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವದಂತಿಗಳ ನಡುವೆ ನಟಿ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವ ಚರ್ಚೆ ಬಾಲಿವುಡ್‌ನಲ್ಲಿ ಜೋರಾಗಿಯೇ ನಡಿದಿದೆ.


COMMERCIAL BREAK
SCROLL TO CONTINUE READING

ಸದ್ಯ ಕೃತಿ ಸನೋನ್ ಪ್ರೀತಿಯಲ್ಲಿ ಬಿದ್ದಿದ್ದು, ಶೀಘ್ರದಲ್ಲೇ ಮದುವೆಯಾಗಬಹುದು ಎಂಬ ಸುದ್ದಿ ಬಿ ಟೌನ್‌ನಲ್ಲಿ ಹರಿದಾಡುತ್ತಿದೆ. ಕೃತಿ ಸನೋನ್ ಉದ್ಯಮಿ ಕಬೀರ್ ಬಹಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈ ಮುಂಚೆ ಸಾಮಾಜಿಕ ಜಾಲತಾನದಲ್ಲಿ ವೈರಲ್‌ ಆಗಿತ್ತು. ಕೃತಿ ಮತ್ತು ಕಬೀರ್ ತಮ್ಮ ಡೇಟಿಂಗ್ ವದಂತಿಗಳಿಗೆ ಇನ್ನೂ ಪ್ರತಿಕ್ರಿಯಿಸದಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಈ ಇಬ್ಬರು ಹಂಚಿಕೊಂಡ ಪೋಸ್ಟ್‌ ಇವರಿಬ್ಬರ ಸಂಬಂದವನ್ನು ಬಹುತೇಕ ಕಚಿತ ಪಡಿಸುವಂತಿತ್ತು.


ಇದನ್ನೂ ಓದಿ: "ನನ್ನ ಮಗಳು ನನ್ನ ಜವಾಬ್ದಾರಿ, ಅವಳನ್ನು ಬೇರ್ಯಾರು ಸಾಕಬೇಕಿಲ್ಲ.." ವಿಚ್ಛೇದನ ವದಂತಿ ಮಧ್ಯೆ ಐಶ್ವರ್ಯ ರೈ ಶಾಕಿಂಗ್ ಹೇಳಿಕೆ ವೈರಲ್


ಕೃತಿ ಸನನ್ ಎಕಾನಾ ಸ್ಟೇಡಿಯಂನಲ್ಲಿ ನಡೆದ ಯುಪಿ ಟಿ 20 ಸೀಸನ್ 2 ರ ಲಾಂಚ್ ಸಮಾರಂಭದಲ್ಲಿ ತನ್ನ ಅದ್ಭುತ ಪ್ರದರ್ಶನದ ಬಿಟಿಎಸ್ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಕೃತಿಯ ವದಂತಿಯ ಗೆಳೆಯ ಕಬೀರ್ ಬಹಿಯಾ ಕೂಡ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್‌ ಕೆಲವೇ ಗಂಟೆಗಳಲ್ಲಿ ವೈರಲ್‌ ಆಗಿದ್ದು ಕಬೀರ್ ಅವರ ಕಾಮೆಂಟ್‌ನ ಸ್ಕ್ರೀನ್‌ಶಾಟ್ ರೆಡ್ಡಿಟ್‌ನಲ್ಲಿ ಪ್ರಾರಂಭಿಸಿದ್ದು, ಈ ಇಬ್ಬರೂ ಶೀಘ್ರವೇ ತಮ್ಮ ಸಂಬಂದದ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ಅಧಿಕೃತವಾಗಿ ಘೊಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.


ಕಬೀರ್‌ ಬಾಹಿಯಾ ಶ್ರೀಮಂತ ಕುಟುಂಬಕ್ಕೆ ಸೇರಿದವರು, ಅವರ ತಂದೆ ಕುಜಿಂದರ್ ಬಹಿಯಾ ಯುಕೆಯ ಪ್ರಸಿದ್ಧ ಉದ್ಯಮಿ. ಕುಜಿಂದರ್ ಬಹಿಯಾ ಯುಕೆ ಟ್ರಾವೆಲ್ ಏಜೆನ್ಸಿ ಸೌಥಾಲ್ ಟ್ರಾವೆಲ್‌ನ ಸಂಸ್ಥಾಪಕರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕುಜಿಂದರ್ ಬಹಿಯಾ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 427 ಮಿಲಿಯನ್ ಪೌಂಡ್‌ಗಳು.


ಇದನ್ನೂ ಓದಿ: "ಪತ್ನಿಯ ಮುಂದೆ ಸೋಲನ್ನು ಒಪ್ಪಿಕೊಳ್ಳಬೇಕು" ಅಮಿತಾಭ್‌ ಬಚ್ಚನ್‌ ಹೇಳಿಕೆ ಹಿಂದಿನ ಕಾರಣ ಏನು?


ಕಬೀರ್ ಅವರು ಬಹಿಯಾ ಕೃತಿ ಸನೋನ್ ಅವರಿಗಿಂತ ಸುಮಾರು 9 ವರ್ಷ ಚಿಕ್ಕವರು. ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಕುಟುಂಬದೊಂದಿಗೆ ಕಬೀರ್ ಬಹಿಯಾ ಕೂಡ ಸಂಬಂಧ ಹೊಂದಿದ್ದಾರೆ. ವಾಸ್ತವವಾಗಿ, ಅವರು ಎಂಎಸ್ ಧೋನಿ ಅವರ ಪತ್ನಿ ಸಾಕ್ಷಿ ಅವರ ಸೋದರಸಂಬಂಧಿ. ಕಬೀರ್ ಅನೇಕ ಸಂದರ್ಭಗಳಲ್ಲಿ ಎಂಎಸ್ ಧೋನಿ ಜೊತೆ ಕಾಣಿಸಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.