Kuchuku Kannada Movie: ಶ್ರೀ ಚಾಮುಂಡೇಶ್ವರಿ ಪಿಕ್ಚರ್ಸ್ ಲಾಂಛನದಲ್ಲಿ ನಾಗರತ್ನಮ್ಮ ಅವರು ನಿರ್ಮಿಸಿರುವ, ಮೈಸೂರು ರಾಜು ನಿರ್ದೇಶನದ "ಕುಚುಕು" ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಎಂ.ಎನ್ ಕುಮಾರ್, ನಿರ್ಮಾಪಕ ಎಂ.ಡಿ.ಪಾರ್ಥಸಾರಥಿ, ನೃತ್ಯ ನಿರ್ದೇಶಕ ಜಗ್ಗು ಮಾಸ್ಟರ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಶಿವಾಜಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. 


COMMERCIAL BREAK
SCROLL TO CONTINUE READING

ನಾನು 26ವರ್ಷಗಳಿಂದ ಡ್ಯಾನ್ಸರ್ ಹಾಗೂ ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಹಿಂದೆ "ನೃತ್ಯಂ" ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ. ಸ್ನೇಹದ ಮಹತ್ವ ಸಾರುವ ಕಥಾಹಂದರದ ಜೊತೆಗೆ ಸೆಂಟಿಮೆಂಟ್ ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿದೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದು ತಿಳಿಸಿದರು.


ಇದು ನನ್ನ ಅಭಿನಯದ ಮೂರನೇ ಚಿತ್ರ. ಗುಲ್ಬರ್ಗ ಮೂಲದವನಾದ ನಾನು ಮೂಲತಃ ರಂಗಭೂಮಿ ಕಲಾವಿದ. ಈ‌ ಚಿತ್ರದಲ್ಲಿ ನಾನು ಹಾಗೂ ಅರ್ಜುನ್ "ಕುಚುಕು"ಗಳಾಗಿ‌ ನಟಿಸಿದ್ದೇವೆ ಎನ್ನುತ್ತಾರೆ ಮತ್ತೊಬ್ಬ ನಾಯಕ ಬಸವರಾಜ್ ಕುಮಾರ್.


ಈ ಚಿತ್ರದಲ್ಲಿ ನಾಯಕ ಮತ್ತು ವಿಲನ್ ನಡುವೆ. ಒಂದು ಫೈಟಿಂಗ್ ಸಂದರ್ಭದಲ್ಲಿ ನಾಯಕನಟ ಶೂಟಿಂಗ್ ಸ್ಥಳದಲ್ಲಿ ಅಪ್ಪು ಸರ್ ರವರ ಪೋಸ್ಟರ್ ಅನ್ನು ನೋಡಿ ಜೋಷಿನಿಂದ ವಿಲನ್ ಗೆ ತಳಿಸಿರುತ್ತಾನೆ.
ಈ ಚಿತ್ರದಲ್ಲಿರುವ ಬಹುತೇಕರು ಮೈಸೂರಿನವರು. ನಾನು ಕೂಡ ಮೈಸೂರಿನವನು. ಈ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ಅಭಿನಯಿಸಿದ ನಂತರ. KD ಸಿನಿಮಾ ಹಾಗೂ ಆರ್ ಚಂದ್ರು ರವರ  ಫಾದರ್ ಸಿನಿಮಾ ಮತ್ತು ಕುಂಟೆಬಿಲ್ಲೆ, A1. ಸಿನಿಮಾ. ಮಂಡಲ್ ಪಂಚಾಯಿತಿ ಮುಂತಾದ ಚಿತ್ರಗಳಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿದೆ ಎಂದರು ನಟ ವಿಲನ್ ಶಿವಾಜಿ.


ಒಂದು ಚಿತ್ರ ಗೆಲ್ಲಬೇಕು ಅಂದರೆ ನಿರ್ದೇಶಕ, ನಿರ್ಮಾಪಕರ ಜೊತೆಗೆ ಚಲನಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಕೂಡ ಪ್ರಚಾರದಲ್ಲಿ ತೊಡಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಪ್ರಚಾರಕ್ಕೆ ಬರುವುದಿಲ್ಲ. ನಿರ್ದೇಶಕ ನಿರ್ಮಾಪಕರು ಕೇಳಿದರೆ ನಮಗೆ ಶೂಟಿಂಗ್ ಇದೆ ಎಂದು ನೆಪ  ಹೇಳುತ್ತಾರೆ ಮತ್ತು ಬಲವಂತ ಮಾಡಿ ಕರೆದರೆ. ನಮಗೆ ಹೋಗುವ ಬರುವ ಖರ್ಚುಗಳು ಸಂಭಾವನೆ ಕೊಡಬೇಕೆಂದು ಕೇಳುತ್ತಾರೆ ಎಂದು ಶಿವಾಜಿ ಎಂ ಎನ್ ಕುಮಾರ್ ಅವರ ಬಳಿ ವೇದಿಕೆ ಮೇಲೆ ಹೇಳಿಕೊಂಡರು.  


ಆ ಸಂದರ್ಭದಲ್ಲಿ ಎಂ ಎನ್ ಕುಮಾರ್ ಅವರು ಮಾತನಾಡಿ, ಚಿತ್ರೀಕರಣದ ಮೊದಲು ನಿರ್ದೇಶಕರು, ನಿರ್ಮಾಪಕರು, ಕಲಾವಿದರೊಂದಿಗೆ ಪ್ರಚಾರದ ಸಮಯದಲ್ಲಿ ಬರಬೇಕೆಂದು ಅಗ್ರಿಮೆಂಟ್ ಕರಾರು ಮಾಡಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು. ಅಂತ ಸಂದರ್ಭದಲ್ಲಿ ಪ್ರಚಾರಕ್ಕೆ ಕಲಾವಿದರು ಬರಲಿಲ್ಲವೆಂದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ. ದೂರನ್ನು ಕೊಡಬಹುದು ಎಂದು ಸಲಹೆ ಸಹ ಕೊಟ್ಟಿರುತ್ತಾರೆ..


ಸಿನಿಮಾ ಮೇಲಿನ ಪ್ರೀತಿಯಿಂದ ಕಷ್ಟಪಟ್ಟು ಈ ಚಿತ್ರ ನಿರ್ಮಾಣ ಮಾಡಿರುವುದಾಗಿ ನಿರ್ಮಾಪಕಿ ನಾಗರತ್ನಮ್ಮ ಹೇಳಿದರು. ಚಿತ್ರದಲ್ಲಿ ಐದು ಸುಮಧುರ ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಎ.ಟಿ.ರವೀಶ್ ತಿಳಿಸಿದರು. ತಮ್ಮ ಪಾತ್ರದ ಕುರಿತು ನಾಯಕಿ ಪ್ರಿಯದರ್ಶಿನಿ ಮಾತನಾಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.