Kusuma Plan To Save Bhagya Life: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್ ಮನೆಯಲ್ಲಿ ಭಾಗ್ಯಾ ಜೊತೆ ಎಂದಿನಂತೆ ಜಗಳ ಮಾಡುತ್ತಿರುತ್ತಾನೆ. ತಾಂಡವ್‌ ತನ್ನ ಹೆಂಡತಿಗೆ ನೀನು ಈ ಮನೆ ಬಿಟ್ಟು ಹೋಗಲೇಬೇಕು. ಯಾಕಂದರೆ ಇದು ನನ್ನ ಮನೆ, ನಾನು ಕಟ್ಟಿಸಿದ ಮನೆ, ಡಿವೋರ್ಸ್​ ಕೊಡಲೇಬೇಕು. ನಾನು ಅರಾಮಾಗಿ ಇರಬೇಕು ಅಂದ್ರೆ ನಿನ್ನ ಮುಖ ನನಗೆ ಈ ಮನೆಯಲ್ಲಿ ಕಾಣಬಾರದು ಅಂತ ಹೇಳುತ್ತಾನೆ.


COMMERCIAL BREAK
SCROLL TO CONTINUE READING

ತಾಂಡವ್‌ ಮಾತನ್ನು ಕೇಳಿ ಅದಕ್ಕೆ ಒಪ್ಪದ ಭಾಗ್ಯ ತನ್ನ ಗಂಡನಿಗೆ ನೀವು ಏನ್ ಮಾಡ್ತೀರೋ ಮಾಡ್ಕೊಳಿ ನಾನು ಮಾತ್ರ ಈ ಮನೆಬಿಟ್ಟು ಎಲ್ಲಿಗೂ ಹೋಗೋದಿಲ್ಲಾ. ನೀವು ಕೇಳಿದಂತೆ ಡಿವೋರ್ಸ್​ ಮಾತ್ರ ಕೊಡೋದೇ ಇಲ್ಲಾ ಎಂದು ಖಡಕಾಗಿ ಉತ್ತರ ನೀಡುತ್ತಾಳೆ. ಆಗ ಕೊಪಗೊಂಡ ತಾಂಡವ್‌ ಈ ಬಾರಿ ನಮ್ಮ ಅಮ್ಮ ಅಲ್ಲ ನಿನ್ನನ್ನ ಮನೆಯಿಂದ ಹೊರಹಾಕುವುದನ್ನು ತಡೆಯಲು ನಮ್ಮಪ್ಪನ ಕೈಯಲ್ಲಿಯೂ ತಡೆಯೋಕೆ ಸಾಧ್ಯವೇ ಇಲ್ಲ ಎಂದು ಹೇಳುತ್ತಾನೆ. 


ಇದನ್ನೂ ಓದಿ: Srirasthu Shubhamasthu: ಅಮ್ಮನಿಗೆ ಡ್ರೈವಿಂಗ್ ಕಲಿಸಲು ಗುರುವಾಗಿ ಬಂದ ಮಗ ಸಮರ್ಥ್!‌


ಅದೇ ಸಂದರ್ಭದಲ್ಲಿ ಕುಸುಮಾಗೆ ತಾಂಡವ್‌ನ ಅತಿಶಯದ ಮಾತನ್ನು ಕೇಳಿ ಸಹಿಸೋಕೆ ಆಗದೆ, ಕೋಪದಲ್ಲಿ ಮಗನ ಕೆನ್ನೆಗೆ ಜೋರಾಗಿ ಏಟು ಕೊಡುತ್ತಾಳೆ. ಆಗ ತಾನು ಇಷ್ಟು ಬೆಳೆದರೂ ಇನ್ನೂ ತಂದೆ -ತಾಯಿ ಹತ್ತಿರ ಏಟು ತಿನ್ನಬೇಕಾಯಿತಲ್ವ ಅಂತ ತಾಂಡವ್‌ಗೆ ಅನಿಸೋಕೆ ಶುರುವಾಗಿ ಕೋಪ ಬರುತ್ತದೆ. ತದನಂತರ ಕುಸುಮಾ ತನ್ನ ಗಂಡ ಧರ್ಮನನ್ನು ಕೋಣೆಗೆ  ಕರೆದುಕೊಂಡು ಹೋಗುತ್ತಾಳೆ. ಬಳಿಕ ತನ್ನ ಗಂಡನ ಜೊತೆಗೆ  ಕೆಲವು ವಿಚಾರದ ಬಗ್ಗೆ ಮಾತನಾಡಿ, ನಾನು ಒಂದು ನಿರ್ಧಾರ ತೆಗೆದುಕೊಂಡು ಇದ್ದೀನಿ. ಆ ನಿರ್ಧಾರ ತುಂಬಾ ಚೆನ್ನಾಗಿದೆ. ನೀವು ಅದಕ್ಕೆ ಒಪ್ಪಲೇಬೇಕು ಎಂದು ಹೇಳುತ್ತಾಳೆ.


ಅದಕ್ಕೆ ಧರ್ಮ ಕುಸುಮಾಗೆ ನೀನು ಇಷ್ಟು ದಿನ ಮನೆಯನ್ನು  ತುಂಬಾ ಚೆನ್ನಾಗಿ ನಡೆಸಿಕೊಂಡು ಬಂದಿದ್ದೀಯಾ. ನೀನು ತೆಗೆದುಕೊಂಡ ನಿರ್ಧಾರಗಳೇ ನನಗೆ ಇಷ್ಟು ಸಹಕಾರ ನೀಡಿದೆ. ಆದರಿಂದ ನೀನು ಏನೇ ನಿರ್ಧಾರ ತೆಗೆದುಕೊಂಡರೂ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿರುತ್ತೀಯಾ ಅದರಲ್ಲಿ ಅನುಮಾನವಿಲ್ಲ ಎಂದು ಸಮ್ಮತಿ ನೀಡುತ್ತಾನೆ. ಗಂಡನ ಮಾತು ಕೇಳಿ ಖುಷಿಯಾದ ಕುಸುಮಾ ಒಂದು ಬಾಂಡ್​ ಪೇಪರ್ ಹಿಡಿದುಕೊಂಡು ಅವನ ಹತ್ತಿರ ಇದಕ್ಕೆ ನಿಮ್ಮ ಒಪ್ಪಿಗೆ ಇರಬೇಕು ಎಂದು ಹೇಳುತ್ತಾಳೆ. ನಂತರ ಧರ್ಮ ಓಕೆ ಎಂದು ಹೇಳುತ್ತಾನೆ.


ಇದನ್ನೂ ಓದಿ: Urfi Javed: ಉರ್ಫಿ ಎದೆಯ ಮೇಲೆ ಬ್ಯಾಟರಿ ಫ್ಯಾನ್: ಬೋಲ್ಡ್ ವಿಡಿಯೋ ವೈರಲ್!


ಧರ್ಮ ಹಾಗೂ ಕುಸುಮಾ ಇಬ್ಬರು ಕೋಣೆಯಿಂದ ಹೊರಗೆ ಬಂದಾಗ, ಅಲ್ಲಿ ತಾಂಡವ್​ ಭಾಗ್ಯಾ ಜೊತೆ ಮಾತಾಡುತ್ತಾ ಇರುತ್ತಾನೆ. ಅದೇ ಸಮಯದಲ್ಲಿ ಕಾವೇರಿ ಇವರಿಬ್ಬರ ಜಗಳವನ್ನು ದಿನಾ ನೋಡಿ, ನೋಡಿ ಮಕ್ಕಳು ಸೋತು ಹೋಗಿದ್ದಾರೆ. ಅವಳು ಈ ಮನೆಯಿಂದ ಎಲ್ಲಿಗೂ ಹೋಗೋದಿಲ್ಲ ಎಂದು ಭಾಗ್ಯಾ ಪರವಾಗಿ ನಿಂತು ಮಾತಾಡುತ್ತಾಳೆ. ಅದಕ್ಕೆ ತಾಂಡವ್ ಇಷ್ಟೆಲ್ಲಾ ಆಗಿರೋದೇ ನಿನ್ನಿಂದ ಎಂದು  ಕಾವೇರಿಗೆ ಹೇಳಿದಾಗ , ಈಕೆಗೆ ಬೇಸರ ಆಗುತ್ತದೆ. ಮುಂದೆ ಕುಸುಮಾ ಬಾಂಡ್‌ ಪೇಪರ್‌ ತೋರಿಸಿ ಏನು ಹೇಳುತ್ತಾಳೆ? ಆಕೆಯ ಪ್ಲಾನ್‌ ಏನೆಂಬುದನ್ನು ಮುಂಬರುವ ಸಂಚಿಕೆಯಲ್ಲಿ ನೋಡಬೇಕು.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.