Lata Mangeshkar : ಚಿತ್ರರಂಗದ ಖ್ಯಾತ ಗಾಯಕಿ ಹಾಗೂ ಕೋಗಿಲೆ ಕಂಠದ ಲತಾ ಮಂಗೇಶ್ಕರ್ ಅವರನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಲತಾ ಅವರ ಸುಮಧುರ ಕಂಠ ಜನರ ಹೃದಯ ಗೆದ್ದಿದೆ. ಅವರ ಹಾಡು ಮಾತ್ರವಲ್ಲ ಲತಾ ಮಂಗೇಶ್ಕರ್ ಅವರ ವೈಯಕ್ತಿಕ ಜೀವನವೂ ಹೆಚ್ಚು ಚರ್ಚೆಗೆ ಕಾರಣವಾಗಿತ್ತು. ಲತಾ ಮಂಗೇಶ್ಕರ್ ಯಾಕೆ ಮದುವೆಯಾಗಲಿಲ್ಲ? ಎಂಬುದು ಅವರ ಅಭಿಮಾನಿಗಳ ಮನದಲ್ಲಿ ಯಾವಾಗಲೂ ಪ್ರಶ್ನೆಯಾಗಿಯೇ ಉಳಿಯಿತು. 


COMMERCIAL BREAK
SCROLL TO CONTINUE READING

ಲತಾ ಮಂಗೇಶ್ಕರ್ ತನ್ನ ಕಿರಿಯ ಸಹೋದರ-ಸೋದರಿಯ ಜವಾಬ್ದಾರಿಯಿಂದಾಗಿ ಮದುವೆಯಾಗಲಿಲ್ಲ ಎಂದು ಹೇಳಲಾಗುತ್ತದೆ. ಲತಾ ಅವರ ಸಹೋದರಿ ಮೀನಾತಾಯಿ ಮಂಗೇಶ್ಕರ್ ಅವರು ಸಂದರ್ಶನ ವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಲತಾಗೆ ಎಲ್ಲವೂ ಇತ್ತು, ಆದರೆ ನಾವೂ ಅಲ್ಲಿದ್ದೆವು. ನಮ್ಮನ್ನು ಬಿಟ್ಟು ಅವಳಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಮದುವೆಯಾಗಿದ್ದರೆ ನಮ್ಮಿಂದ ದೂರವಾಗುತ್ತಿದ್ದಳು. ಅವರಿಗೆ ಅದು ಬೇಕಾಗಿರಲಿಲ್ಲ. ಅದಕ್ಕೇ ಮದುವೆ ಆಗಲಿಲ್ಲ ಎಂದು ಹೇಳಿದ್ದಾರೆ. 


ಇದನ್ನೂ ಓದಿ: ಹೇಮಾ ಮಾಲಿನಿ ಪುತ್ರಿ ದಾಂಪತ್ಯ ಅಂತ್ಯ, ಇಶಾ ಡಿಯೋಲ್-ಭರತ್ ತಖ್ತಾನಿ ಡಿವೋರ್ಸ್!‌ 


ಲತಾ ಅವರಿಗೆ ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ ಇತ್ತು. ಅವರ ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ ಅವರು ಶಾಸ್ತ್ರೀಯ ಗಾಯಕ ಮತ್ತು ರಂಗಭೂಮಿ ಕಲಾವಿದರಾಗಿದ್ದರು. ಲತಾ ತನ್ನ ತಂದೆಯಿಂದ ಸಂಗೀತ ತರಬೇತಿ ಪಡೆದರು. 5 ನೇ ವಯಸ್ಸಿನಲ್ಲಿ, ಲತಾ ತನ್ನ ತಂದೆಯ ಸಂಗೀತ ನಾಟಕಗಳಲ್ಲಿ ನಟಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 


ಸಂಗೀತದ ದೇವತೆ ಲತಾ ಮಂಗೇಶ್ಕರ್ ಒಮ್ಮೆ ಪ್ರೀತಿಯಲ್ಲಿ ಬಿದ್ದಿದ್ದರು ಎಂದು ಹೇಳಲಾಗುತ್ತದೆ. ಲತಾ ಮಂಗೇಶ್ಕರ್ ಅವರು ರಾಜಸ್ಥಾನದ ರಜಪೂತ ರಾಜ ಮನೆತನಕ್ಕೆ ಮಹಾರಾಜ ರಾಜ್ ಸಿಂಗ್ ಅವರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಡುಂಗರಪುರದ ಆಡಳಿತಗಾರ ಮಹಾರಾವಲ್ ಲಕ್ಷ್ಮಣ್ ಸಿಂಗ್ಜಿಯವರ ಕಿರಿಯ ಮಗ ರಾಜ್ ಸಿಂಗ್. ರಾಜ್ ಸಿಂಗ್ ಅವರು ಬಿಸಿಸಿಐನ ಮಾಜಿ ಅಧ್ಯಕ್ಷ ಮತ್ತು ಪ್ರಥಮ ದರ್ಜೆ ಕ್ರಿಕೆಟಿಗ ಕೂಡ ಆಗಿದ್ದರು. 


ಮಹಾರಾಜ ರಾಜ್ ಸಿಂಗ್ ಅವರು ಲತಾ ಮಂಗೇಶ್ಕರ್ ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರ ಸ್ನೇಹಿತರಾಗಿದ್ದರು. ಆದರೆ, ರಾಜ್ ಸಿಂಗ್ ಅವರ ಪೋಷಕರು ಸಾಮಾನ್ಯ ಕುಟುಂಬದ ಹುಡುಗಿಯನ್ನು ತಮ್ಮ ಸೊಸೆಯಾಗಲು ಬಿಡುವುದಿಲ್ಲ ಎಂದಿದ್ದರು. ಇದರಿಂದ ಈ ಪ್ರೇಮ ಕಹಾನಿ ಅಪೂರ್ಣವಾಯಿತು. 


ಇದನ್ನೂ ಓದಿ: ಒಟಿಟಿಗೆ ಲಗ್ಗೆಯಿಟ್ಟ ದಿ ಕೇರಳ ಸ್ಟೋರಿ.. ಎಲ್ಲಿ ಯಾವಾಗ ಸ್ಟ್ರೀಮಿಂಗ್‌? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.