ನವದೆಹಲಿ : Lata Mangeshkar Death: ಹಲವು ದಶಕಗಳಿಂದ ತಮ್ಮ ಸುಮಧುರ ಕಂಠದಿಂದ ದೇಶದ ಜನರ ಹೃದಯವನ್ನು ಗೆದ್ದಿದ್ದ ಲತಾ ಮಂಗೇಶ್ಕರ್ ಇಹ ಲೋಕ ತ್ಯಜಿಸಿದ್ದಾರೆ (Lata Mangeshkar Death). ಲತಾ ಮಂಗೇಶ್ಕರ್ ತಮ್ಮ 92 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜನವರಿ 8 ರಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 


COMMERCIAL BREAK
SCROLL TO CONTINUE READING

 ಜಗತ್ತಿಗೆ ವಿದಾಯ ಹೇಳಿದ ಗಾನ ಕೋಗಿಲೆ : 
ಅನಾರೋಗ್ಯದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್ (Lata Mangeshkar Death) ಅವರನನ್ನು  ಕೆಲವು ದಿನಗಳ ಕಾಲ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು.  ಆದರೆ ಮತ್ತೆ  ಹಠಾತ್ ಆರೋಗ್ಯ ಹದಗೆಟ್ಟಿದ್ದರಿಂದ ಮತ್ತೊಮ್ಮೆ ವೆಂಟಿಲೇಟರ್ ನಲ್ಲಿರಿಸಿಲಾಗಿತ್ತು.  ಇದೀಗ ಲತಾ ಮಂಗೇಶ್ಕರ್ (Lata Mangeshkar) ಸಾವಿನ ಸುದ್ದಿಯಿಂದ ಅವರ ಅಸಂಖ್ಯಾತ ಅಭಿಮಾನಿಗಳು ದುಃಖದಲ್ಲಿ ಮುಳುಗುವಂತಾಗಿದೆ.  


ಇದನ್ನೂ ಓದಿ :  ಪುನೀತ್ ಅಭಿಮಾನಿಗಳಿಗೆ ಗುಡ್ ನ್ಯೂಸ್.. 'ಜೇಮ್ಸ್' ಅಧಿಕೃತ ಟೀಸರ್ ಬಿಡುಗಡೆ ಡೇಟ್ ಫಿಕ್ಸ್


ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಕ್ರೀಡಾ ಲೋಕವೂ ಕಂಬನಿ ಮಿಡಿದಿದೆ. ಕ್ರಿಕೆಟ್‌ನಲ್ಲಿ ಲತಾ ಮಂಗೇಶ್ಕರ್ ಎಷ್ಟು ಒಲವು ಹೊಂದಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. 1983ರ ವಿಶ್ವಕಪ್‌ನಲ್ಲಿ (World Cup) ಭಾರತ ತಂಡದ ಗೆಲುವಿನ ನಂತರ ವಿಶೇಷ ಸಂಗೀತ ಕಾರ್ಯಕ್ರಮ ಮಾಡುವ ಮೂಲಕ ಆಟಗಾರರಿಗಾಗಿ ಹಣ ಸಂಗ್ರಹಿಸಿದ್ದರು. ಇನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮೇಲಿನ ಪ್ರೀತಿ ಮತ್ತು ವಾತ್ಸಲ್ಯವನ್ನು ಯಾರೂ ಮರೆಯುವಂತಿಲ್ಲ.  


ಟ್ವೀಟ್ ಮೂಲಕ ಧೋನಿಗೆ ಮನವಿ ಮಾಡಿದ್ದ ಲತಾ ಮಂಗೇಶ್ಕರ್ :
ಮಹೇಂದ್ರ ಸಿಂಗ್ ಧೋನಿ (Mahindra Singh Dhoni) ನಿವೃತ್ತಿಯ ಸುದ್ದಿಯಿಂದ ಲತಾ ಮಂಗೇಶ್ಕರ್ ಕೂಡ ತುಂಬಾ ದುಃಖಿತರಾಗಿದ್ದರು. ನಿವೃತ್ತಿಯ ಬಗ್ಗೆ ಈಗಲೇ ಯೋಚಿಸಬೇಡಿ ಎಂದು ಟ್ವೀಟ್ ಮಾಡಿದ್ದರು.  ಜುಲೈ 2019 ರಲ್ಲಿ  ವಿಶ್ವಕಪ್‌ನಿಂದ ಭಾರತ ತಂಡ ಹೊರಬಿದ್ದಿತ್ತು. ಇದಾದ ನಂತರ ಧೋನಿ ನಿವೃತ್ತಿ ಸುದ್ದಿ ಕೇಳಿ ಬರಲಾರಂಭಿಸಿತ್ತು. ಇದರಿಂದ ನೊಂದಿದ್ದ ಲತಾ ಮಂಗೇಶ್ಕರ್ (Lata Mangeshkar) ಜುಲೈ 11ರಂದು ಟ್ವೀಟ್ ಮಾಡಿ, ನಿವೃತ್ತಿಯ ನಿರ್ಧಾರ ಬೇಡ ಎಂದು ಧೋನಿಯಲ್ಲಿ ಮನವಿ ಮಾಡಿದ್ದರು.  


Viral Trend: ಇನ್ಸ್ಟಾಗ್ರಾಮ್ ನಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದ 'That's Not My Name', ಏನಿದು ಹೊಸ ಟ್ರೆಂಡ್ ಅಂತೀರಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.