Layerr Shot Deo Ad: ಬಲಾತ್ಕಾರವನ್ನು ಉತ್ತೇಜಿಸುವ ಡಿಯೋ ಜಾಹೀರಾತುಗಳಿಗೆ ಸರ್ಕಾರದಿಂದ ಕಡಿವಾಣ!
Layerr Shot Deo Ad: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಲೇಯರ್ ಶಾಟ್ ಪರ್ಫ್ಯೂಮ್ ಬ್ರ್ಯಾಂಡ್ಗೆ ಟ್ವಿಟರ್ ಮತ್ತು ಯೂಟ್ಯೂಬ್ನಿಂದ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುವ ಮತ್ತು ಆಕ್ರೋಶಕ್ಕೆ ಕಾರಣವಾಗಿರುವ ಜಾಹೀರಾತು ವೀಡಿಯೊವನ್ನು ತೆಗೆದುಹಾಕುವಂತೆ ಸೂಚಿಸಿದೆ.
Layer'r Shot Ad: ಈ ಕುರಿತು ಮಹಿಳಾ ಆಯೋಗದ ಪತ್ರವನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ, ಸುಳ್ಳು ಮತ್ತು ಅತ್ಯಾಚಾರವನ್ನು ಉತ್ತೇಜಿಸುವ ಬಾಡಿ-ಸ್ಪ್ರೇ ಜಾಹೀರಾತುಗಳನ್ನು ತೆಗೆದುಹಾಕುವಂತೆ ಶುಕ್ರವಾರ ಜಾಹೀರಾತು ಏಜೆನ್ಸಿಗಳು ಮತ್ತು ಕಂಪನಿಗಳಿಗೆ ಸೂಚಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇಂತಹ ಎಲ್ಲಾ ವಿವಾದಾತ್ಮಕ ಜಾಹೀರಾತುಗಳನ್ನು ತೆಗೆದುಹಾಕಲು ಆದೇಶ ನೀಡಿದ್ದು, ಪ್ರಕರಣವನ್ನು ಜಾಹೀರಾತು ಕೋಡ್ ಅಡಿಯಲ್ಲಿ ತನಿಖೆ ನಡೆಸಲಾಗುವುದು ಎಂದು ಹೇಳಿದೆ. ದೆಹಲಿ ಮಹಿಳಾ ಆಯೋಗವು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಬರೆದ ಪತ್ರದ ನಂತರ ಈ ಆದೇಶ ಬಂದಿರುವುದು ಇಲ್ಲಿ ಉಲ್ಲೇಖನೀಯ. ಪರ್ಫ್ಯೂಮ್ ಬ್ರ್ಯಾಂಡ್ ಲೇಯರ್ ಶಾಟ್ ಕಂಪನಿಯ ವಿವಾದಾತ್ಮಕ ಜಾಹೀರಾತಿಗೆ ನೆಟಿಜನ್ ಗಳಿಂದ ಭಾರಿ ಟೀಕೆ ವ್ಯಕ್ತವಾದ ಹಿನ್ನೆಲೆ ಪ್ರಕರಣ ಮುನ್ನೆಲೆಗೆ ಬಂದಿದೆ.
ದೆಹಲಿ ಪೊಲೀಸರಿಗೂ ನೋಟಿಸ್
ಈ ಕುರಿತು ಶನಿವಾರ ಹೇಳಿಕೆ ನೀಡಿರುವ ಸಮಿತಿ, ಜಾಹೀರಾತು "ಗ್ಯಾಂಗ್ ರೇಪ್ ಉತ್ತೆಜಿಸುವಂತಿದೆ" ಎಂದು ಹೇಳಿದೆ. ಪ್ರಕರಣಕ್ಕೆ ಸಂಬಂಧಿದಂತೆ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಮಾಡಿದೆ. ಸುಗಂಧಿ ದ್ರವ್ಯ ತಯಾರಿಸುವ ಕಂಪನಿಯ ಒಂದು ಆಕ್ಷೇಪಣಾರ್ಹ ಜಾಹೀರಾತು ದೆಹಲಿ ಮಹಿಳಾ ಆಯೋಗದ ಗಮನಕ್ಕೆ ಬಂದಿದೆ ಎಂದು ಮಾಲಿವಾಲ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿರುವ ಅನುರಾಗ್ ಠಾಕೂರ್ ಅವರಿಗೆ ಬರೆದ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. . ಈ ಜಾಹಿರಾತನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ನಿಷೇಧಿಸಲು ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಕುರಿತು ಟ್ವಿಟ್ಟರ್ ಹಾಗೂ ಯುಟ್ಯೂಬ್ ಗಳಿಗೂ ಕೂಡ ನಿರ್ದೇಶನಗಳನ್ನು ನೀಡಿರುವ ಕೇಂದ್ರ ಸರ್ಕಾರ, ತಮ್ಮ ಪ್ಲಾಟ್ಫಾರ್ಮ್ ಗಳಿಂದ ಈ ಜಾಹೀರಾತನ್ನು ತೆಗದು ಹಾಕುವಂತೆ ಸೂಚಿಸಿದೆ.
ಬ್ರಾಂಡ್‌ಗೆ ಭಾರಿ ದಂಡ ವಿಧಿಸಲು ಬೇಡಿಕೆ
ಅತ್ಯಾಚಾರವನ್ನು ಉತ್ತೇಜಿಸುವ ಇಂತಹ ಹೀನ ಜಾಹೀರಾತುಗಳು ಬಿತ್ತರಗೊಳ್ಳದಿರಲು ಕೆಲವು ತನಿಖೆ ನಡೆಸಲು ಮತ್ತು ಸಮತೋಲನವನ್ನು ಖಾತರಿಪಡಿಸಲು ಬಲವಾದ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಮಾಲಿವಾಲ್ ತಮ್ಮ ಪತ್ರದಲ್ಲಿ ಕೋರಿದ್ದಾರೆ. ಅಷ್ಟೇ ಅಲ್ಲ ಸುಗಂಧ ದ್ರವ್ಯ ತಯಾರಿಸುವ ಬ್ರಾಂಡ್‌ಗೆ ಭಾರಿ ದಂಡ ವಿಧಿಸುವಂತೆ ಅವರು ಒತ್ತಾಯಿಸಿದ್ದು, ಇದರಿಂದ ಇತರ ಕಂಪನಿಗಳೂ ಕೂಡ ಪಾಠ ಕಲಿಯಲಿವೆ ಎಂದು ಅವರು ಹೇಳಿದ್ದಾರೆ. ಜೂನ್ 9 ರೊಳಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಕುರಿತಾದ ವರದಿಯನ್ನು ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಲಾಗಿದೆ.
'ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕಿ ವಿವಾದ ಎಬ್ಬಿಸಬೇಡಿ'-ಆರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್
ಆಫ್ ಏರ್ ಆಗಲಿದೆಯೇ ಜಾಹೀರಾತು?
ಕೆಟ್ಟ ಪುರುಷತ್ವವನ್ನು ಬಿಂಬಿಸುವ ಮತ್ತು ಸಾಮೂಹಿಕ ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸುವುದು ಯಾವ ರೀತಿಯ ಸೃಜನಶೀಲತೆಯಾಗಿದೆ? ಇದರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಾಗಬೇಕು, ಇಂತಹ ಜಾಹೀರಾತನ್ನು ನಿಷೇಧಿಸಿ ಕಂಪನಿಗೆ ಭಾರಿ ದಂಡ ವಿಧಿಸಬೇಕು. ಸಮಯ ವ್ಯರ್ಥ ಮಾಡದೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಿ ಮಾಲಿವಾಲ್ ದೆಹಲಿ ಪೊಲೀಸರಿಗೆ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ-ಸ್ವಯಂ ನಿವೃತ್ತಿ ಸೇವೆಯನ್ನು ಜಾರಿಗೊಳಿಸಿದ ಟಾಟಾ ಮಾಲಿಕತ್ವದ ಏರ್ ಇಂಡಿಯಾ
ಲೇಯರ್ ಶಾಟ್ ಜಾಹೀರಾತಿನ ಕುರಿತು ಭುಗಿಲೆದ್ದ ವಿವಾದ: ಲೇಯರ್ ಶಾಟ್ ಪರ್ಫ್ಯೂಮ್ ಮತ್ತು ಬಾಡಿ ಸ್ಪ್ರೇನ ಎರಡು ಹೊಸ ಜಾಹೀರಾತುಗಳನ್ನು ಟ್ವಿಟರ್‌ನಲ್ಲಿ ತೀವ್ರವಾಗಿ ಟೀಕಿಸಲಾಗುತ್ತಿದೆ. ಈ ಜಾಹೀರಾತುಗಳು ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸುತ್ತಿವೆ ಎಂದು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಬಳಕೆದಾರರು ಚರ್ಚಿಸುತ್ತಿದ್ದಾರೆ. ಈ ಎರಡೂ ಜಾಹೀರಾತುಗಳಿಗೆ ನೆಟಿಜನ್‌ಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇಂತಹ ದ್ವೇಷಪೂರಿತ ಕಂಟೆಂಟ್ ಅನ್ನು ಯಾರು ಅನುಮೋದಿಸಿದ್ದಾರೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ