ನವದೆಹಲಿ: ಪದ್ಮಭೂಷಣ ಪ್ರಶಸ್ತಿ ವಿಜೇತೆ, ಖ್ಯಾತ ಹಿಂದೂಸ್ಥಾನಿ ಸಂಗೀತಗಾರರಾಗಿದ್ದ ಅನ್ನಪೂರ್ಣ ದೇವಿ ತಮ್ಮ 91ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. 


COMMERCIAL BREAK
SCROLL TO CONTINUE READING

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅನ್ನಪೂರ್ಣ ದೇವಿ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ 3.51ಕ್ಕೆ ಅಸುನೀಗಿದರು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.


ಇವರ ನಿಜವಾದ ಹೆಸರು ಅನ್ನಪೂರ್ಣ ದೇವಿ ಅಲ್ಲ:
ಸಂಗೀತ ಪ್ರಪಂಚದಲ್ಲಿ ಅನ್ನಪೂರ್ಣ ದೇವಿ ಎಂದೇ ಪ್ರಸಿದ್ಧರಾಗಿರುವ ಇವರ ನಿಜವಾದ ಹೆಸರು ರೋಶನ್ ಅರಾ ಖಾನ್. ಅವರು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಅನ್ನಪೂರ್ಣ ದೇವಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಸಿದ್ಧಿ ಪಡೆದಿದ್ದರು. ಮಹಾರಾಜ ಬ್ರಜ್ನಾಥ ಸಿಂಗ್ ಅವರು ಈ ಹೆಸರನ್ನು ನೀಡಿದರು ಅವರಿಗೆ ನೀಡಿದರು. ಅಂದಿನಿಂದ, ಸಂಗೀತ ಜಗತ್ತಿನಲ್ಲಿ ಅನ್ನಪೂರ್ಣ ದೇವಿ ಹೆಸರಿನಿಂದ ರೋಶನ್ ಅರಾ ಖಾನ್ ಅವರಿಗೆ ಮನ್ನಣೆ ದೊರೆಯಿತು.


ಪ್ರಸಿದ್ಧ ಸಂಗೀತಗಾರನ ಪತ್ನಿ ಮತ್ತು ಮಗಳು:
ಅನ್ನಪೂರ್ಣ ದೇವಿ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಪ್ರಸಿದ್ಧರಾದ ಅಲ್ಲಾವುದ್ದೀನ್ ಖಾನ್ನ ಪುತ್ರಿ ಮತ್ತು ಶಿಷ್ಯರಾಗಿದ್ದರು. ಅವರು ಸಿತಾರ್ ಮಾಂತ್ರಿಕ ಪಂಡಿತ್ ರವಿ ಶಂಕರ್ ಅವರನ್ನು ಮದುವೆಯಾದರು. ನಂತರ, ವಿಚ್ಚೇದನ ಪಡೆದಿದ್ದರು.