ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ ಬಾಸು ಚಟರ್ಜಿ ತಮ್ಮ 90 ನೇ ವಯಸ್ಸಿನಲ್ಲಿ ಬೆಳಗ್ಗೆ 8.30 ಕ್ಕೆ ನಿದ್ರೆಯಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ. ಮುಂಬೈನ ಸಾಂತಕ್ರೂಜ್‌ನಲ್ಲಿರುವ ತಮ್ಮ ಮನೆಯಲ್ಲಿ ಅವರು ಇಂದು ನಿಧನರಾಗಿದ್ದಾರೆ. ಬಾಸುದಾ ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಅವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಸುತ್ತಿದ್ದರು.


COMMERCIAL BREAK
SCROLL TO CONTINUE READING

ಬಾಸು ಚಟರ್ಜಿಯವರ ಸಾವಿನ ಬಗ್ಗೆ ಅವರ ಆಪ್ತವರ್ಗ ಮಾಹಿತಿ ನೀಡಿದೆ. ವಯೋಸಹಜ  ಕಾಯಿಲೆಯಿಂದಾಗಿ ಬಾಸುದಾ ಸಾವನ್ನಪ್ಪಿದ್ದಾರೆ ಮತ್ತು ಇಂದು ಮಧ್ಯಾಹ್ನ 2.00 ಕ್ಕೆ ಸಾಂತಕ್ರೂಜ್‌ನ ಶವಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.


70 ಮತ್ತು 80 ರ ದಶಕಗಳಲ್ಲಿ ಹಿಂದಿ ಸಿನೆಮಾವನ್ನು ವಾಸ್ತವಿಕತೆಯ ಮಟ್ಟಕ್ಕೆ  ತರುವ ಪ್ರಯತ್ನದಲ್ಲಿ, ಬಾಸುಡಾ 'ಚಿತ್ ಚೋರ್, ರಜನಿ, ಬಾತೋ ಬಾತೋ ಮೇ, ಉಸ್ ಪಾರ್,ಛೋಟಿ ಸಿ ಬಾತ್ , ಖಟ್ಟಾ-ಮೀಠಾ, ಪಿಯಾ ಕಾ ಘರ್, ಚಕ್ರವ್ಯೋಹ, ಶೌಕೀನ್, ಏಕ್ ರುಕಾ ಹುವಾ ಫೈಸಲಾ, ಜೀನಾ ಯಹಾ, ಪ್ರಿಯತಂ, ಸ್ವಾಮೀ, ಅಪ್ನೆ ಪರಾಯೇಗಳಂತಹ ಅನೇಕ ಚಿತ್ರಗಳನ್ನು ನಿರ್ದೇಶಿಸಿದರು ಮತ್ತು ಹಿಂದಿ ಚಿತ್ರರಂಗದಲ್ಲಿ ತನ್ನದೇ ಆದ ಒಂದು ವಿಶಿಷ್ಟ ಛಾಪು ಮೂಡಿಸಿದ್ದರು.


ಇವುಗಳಲ್ಲದೆ, ರತ್ನದೀಪ್, ಸಫೇದ್ ಝೂಟ್, ಮನ್ ಪಸಂದ್, ಹಮಾರಿ ಬಹು ಅಲ್ಕಾ, ಕಮಲಾ ಕಿ ಮೌತ್, ತ್ರಿಯಾಚರಿತ್ರ ಮುಂತಾದ ಕಡಿಮೆ ಜನಪ್ರಿಯತೆ ಹೊಂದಿರುವ ಚಿತ್ರಗಳನ್ನು ಸಹ ಮಾಡಿದ್ದಾರೆ.


ಬಾಸುದಾ  1969ರಲ್ಲಿ ಮೂಡಿ ಬಂದ  ಚಲನಚಿತ್ರ 'ಸಾರಾ ಆಕಾಶ್' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದಕ್ಕೂ ಮೊದಲು ಬಾಸುದಾ 1966ರಲ್ಲಿ ತೆರೆಕಂಡ ರಾಜ್ ಕಪೂರ್ ಹಾಗೂ ವಹಿದಾ ರೆಹಮಾನ್ ಅಭಿನಯದ 'ತಿಸ್ರೀ ಕಸಂ' ಚಿತ್ರ ನಿರ್ದೇಶಕ ಬಾಸು ಭಟ್ಟಾಚಾರ್ಯ ಅವರ ಜೊತೆಗೆ ಸಹಾಯಕ ನಿರ್ದೇಶಕರಾಗಿಯೂ ಕೂಡ ಕಾರ್ಯನಿರ್ವಹಿಸಿದ್ದರು.


ಜನಪ್ರೀಯ ವಾರಪತ್ರಿಕೆ 'ಬ್ಲಿಟ್ಜ್' ನಲ್ಲಿ ಓರ್ವ ಸಚಿತ್ರಕಾರ ಹಾಗೂ ವ್ಯಂಗ್ಯ ಚಿತ್ರಕಾರರಾಗಿ ಬಾಸುದಾ ತನ್ನ ವೃತ್ತಿ ಜೀವನವನ್ನು ಆರಂಭಿಸಿದ್ದರು ಎಂಬುದು ಇಲ್ಲಿ ವಿಶೇಷ. 18 ವರ್ಷಗಳ ಕಾಲ ಅವರು ಈ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು ಎಂಬುದು ಇಲ್ಲಿ ಗಮನಾರ್ಹ. ಬಳಿಕ ಅವರು ಚಲನಚಿತ್ರರಂಗ ಸೇರಲು ಹಾಗೂ ನಿರ್ದೇಶಕರಾಗಿಅಳು ನಿರ್ಧರಿಸಿದ್ದರು.


ಮಧ್ಯಮ ವರ್ಗದ ಸಮಸ್ಯೆ ಕಥಾ ಹಂದರ ಹೊಂದಿರುವ ಚಲನಚಿತ್ರಗಳನ್ನು ನಿರ್ದೇಶನ ಮಾಡುವುದು ಬಾಸುದಾ ಅವರ ಅತ್ಯುತ್ತಮ ವಿಶೇಷತೆಗಳಲ್ಲಿ ಒಂದಾತಿತ್ತು. ಬಾಸುದಾ ದೂರದರ್ಶನಕ್ಕಾಗಿ ವ್ಯೂಮ್ ಕೇಶ್ ಬಕ್ಷಿ, ರಜನಿಗಂಧಗಳಂತಹ ಅತ್ಯಂತ ಜನಪ್ರಿಯ ಧಾರಾವಾಹಿಗಳನ್ನು ನೀಡಿದ್ದಾರೆ. ಇವುಗಳನ್ನು ಅವರ ಅತ್ಯುತ್ತಮ ಚಿತ್ರಗಳಂತೆ ಇಂದಿಗೂ ಸ್ಮರಿಸಲಾಗುತ್ತದೆ.