IMDBಯಲ್ಲಿ `ಲೈಗರ್`ಗೆ 10ಕ್ಕೆ 1.6 ರೇಂಟಿಗ್: ಕೆಜಿಎಫ್-2 & RRRಗೆ ಎಷ್ಟಿತ್ತು ಗೊತ್ತಾ..?
ಯಾವುದೇ ಒಂದು ಸಿನಿಮಾ ನೋಡುವ ಮುನ್ನ IMDB ಹಾಗೂ Googleನಲ್ಲಿ ರೇಟಿಂಗ್ ಪರ್ಸಂಟೇಜ್ ನೋಡುವುದು ಮಾಮೂಲಿ. ಹಾಗೆ ನೋಡುವುದಾದ್ರೆ `ಲೈಗರ್`ಗೆ IMDB ರೇಂಟಿಗ್ ವಿಚಾರದಲ್ಲೂ ಹಿನ್ನಡೆಯಾಗಿದೆ. IMDB ರೇಟಿಂಗ್ ಅನ್ನ 10 ಅಂಕದ ಮೂಲಕ ಅಳೆಯಲಾಗುತ್ತೆ. ಈ ಪೈಕಿ `ಲೈಗರ್`ಗೆ 18 ಸಾವಿರ ಜನ ವೋಟ್ ಮಾಡಿದ್ದು, ಕೇವಲ 1.6 ರೇಂಟಿಗ್ ಪಡೆದುಕೊಂಡಿದೆ ವಿಜಯ್ ದೇವಕೊಂಡ ಮುಖ್ಯಭೂಮಿಕೆಯ ಸಿನಿಮಾ.
ನವದೆಹಲಿ: ಯಾವುದೇ ಒಂದು ಸಿನಿಮಾ ನೋಡುವ ಮುನ್ನ IMDB ಹಾಗೂ Googleನಲ್ಲಿ ರೇಟಿಂಗ್ ಪರ್ಸಂಟೇಜ್ ನೋಡುವುದು ಮಾಮೂಲಿ. ಹಾಗೆ ನೋಡುವುದಾದ್ರೆ 'ಲೈಗರ್'ಗೆ IMDB ರೇಂಟಿಗ್ ವಿಚಾರದಲ್ಲೂ ಹಿನ್ನಡೆಯಾಗಿದೆ. IMDB ರೇಟಿಂಗ್ ಅನ್ನ 10 ಅಂಕದ ಮೂಲಕ ಅಳೆಯಲಾಗುತ್ತೆ. ಈ ಪೈಕಿ 'ಲೈಗರ್'ಗೆ 18 ಸಾವಿರ ಜನ ವೋಟ್ ಮಾಡಿದ್ದು, ಕೇವಲ 1.6 ರೇಂಟಿಗ್ ಪಡೆದುಕೊಂಡಿದೆ ವಿಜಯ್ ದೇವಕೊಂಡ ಮುಖ್ಯಭೂಮಿಕೆಯ ಸಿನಿಮಾ.
ಈ ಲೆಕ್ಕಾಚಾರದಲ್ಲಿ ಇಂಡಿಯನ್ ಬಾಕ್ಸ್ ಆಫಿಸ್ ಅನ್ನೇ ಉಡೀಸ್ ಮಾಡಿದ್ದ 'ಕೆಜಿಎಫ್-2' 10 ಅಂಕಕ್ಕೆ 8.4 ರೇಟಿಂಗ್ ಪಡೆದುಕೊಂಡಿತ್ತು. 'ಕೆಜಿಎಫ್-2'ಗೆ 1 ಲಕ್ಷ 20 ಸಾವಿರ ಜನರು ವೋಟಿಂಗ್ ಮಾಡಿದ್ರು. ಇದು ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲೇ ದಾಖಲೆಯಾಗಿತ್ತು. ಜೊತೆಗೆ ಟಾಲಿವುಡ್‌ನ ಇಂಡಸ್ಟ್ರಿ ಹಿಟ್ RRR ಕೂಡ 10 ಅಂಕಕ್ಕೆ 8 ರೇಟಿಂಗ್ ಪಡೆದಿತ್ತು. RRRಗೂ ಬರೋಬ್ಬರಿ 1 ಲಕ್ಷ ಜನ ವೋಟಿಂಗ್ ಮಾಡಿದ್ದರು. ಈ ಲೆಕ್ಕಾಚಾರದಲ್ಲಿ 'ಲೈಗರ್' ಸಿನಿಮಾಗೆ ಭಾರಿ ಹಿನ್ನಡೆ ಉಂಟಾಗಿದ್ದು, ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದ ಮಠದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಎಫ್ಐಆರ್ ದಾಖಲು!
ಆಮಿರ್‌ಗೂ ಶಾಕ್..!
ಆಮಿರ್ ಖಾನ್ ನಟಿಸಿದ್ದ 'ಲಾಲ್ ಸಿಂಗ್ ಚಡ್ಡಾ' ಕೂಡ ಭಾರತದಲ್ಲಿ ಭೀಕರ ಸೋಲು ಕಂಡಿದೆ. ಹಾಕಿದ ಬಂಡವಾಳ ಪಡೆಯಲು 'ಲಾಲ್ ಸಿಂಗ್ ಚಡ್ಡಾ' ಪರದಾಡುತ್ತಿದೆ. ಈ ಸಿನಿಮಾಗೂ IMDB ರೇಟಿಂಗ್‌ನಲ್ಲಿ ಭಾರಿ ಹಿನ್ನಡೆಯೇ ಎದುರಾಗಿತ್ತು. 'ಲಾಲ್ ಸಿಂಗ್ ಚಡ್ಡಾ' 10 ಅಂಕಕ್ಕೆ 5 ರೇಟಿಂಗ್ ಪಡೆದಿತ್ತು. 'ಲಾಲ್ ಸಿಂಗ್ ಚಡ್ಡಾ'ಗೆ 1 ಲಕ್ಷ 59 ಸಾವಿರ ಜನ IMDBಯಲ್ಲಿ ವೋಟಿಂಗ್ ಮಾಡಿದ್ದಾರೆ. ಈ ಲೆಕ್ಕಾಚಾರದಲ್ಲಿ ಇನ್ನೂ ಹಲವು ಬಾಲಿವುಡ್ ಸಿನಿಮಾಗಳು ತೋಪೆದ್ದು ಹೋಗಿವೆ.
ಬಾಲಿವುಡ್ ಬಾಕ್ಸ್ ಆಫಿಸ್‌ನಲ್ಲಿ ಇತ್ತೀಚೆಗೆ ರಿಲೀಸ್ ಆಗಿದ್ದ 'ಲಾಲ್ ಸಿಂಗ್ ಚಡ್ಡಾ' ಚಿತ್ರ ಮಕಾಡೆ ಮಲಗಿದೆ. ಹಾಕಿದ ಬಂಡವಾಳ ವಾಪಸ್ ಬರೋದು ಡೌಟ್ ಆಗುತ್ತಿದೆ. ₹180 ಕೋಟಿ ವೆಚ್ಚದ ಸಿನಿಮಾ ತೋಪೆದ್ದಿದೆ. ಆಮೀರ್ ಮೈಮೇಲೆ ಎಳೆದುಕೊಂಡಿದ್ದ ವಿವಾದ ಹೀನಾಯ ಸೋಲಿಗೆ ಕಾರಣವಾಗಿದೆ ಎನ್ನಲಾಗಿದೆ. ಈ ಹೊತ್ತಲ್ಲೇ ತಾಪ್ಸಿ ಪನ್ನು ಕೊಟ್ಟ ವ್ಯತಿರಿಕ್ತ ಹೇಳಿಕೆ ಉಲ್ಟಾ ಹೊಡೆದಿದೆ. 'ಲಾಲ್ ಸಿಂಗ್ ಚಡ್ಡಾ' ಬಾಯ್ಕಾಟ್ ವಿವಾದದ ಹಿನ್ನೆಲೆ ನನ್ನ ಸಿನಿಮಾವನ್ನೂ ಬಾಯ್ಕಾಟ್ ಮಾಡಿ ಎಂದಿದ್ದ ನಟಿ ತಾಪ್ಸಿ ಪನ್ನು ಶಾಕ್ ಆಗಿದ್ದಾರೆ. ಯಾಕಂದ್ರೆ ಅವರ ನಿರೀಕ್ಷಿತ ಸಿನಿಮಾ ‘ದೋಬಾರಾ’ ತೋಪೆದ್ದು ಹೋಗಿದೆ. ಹತ್ತಾರು ಕೋಟಿ ಸುರಿದಿದ್ದ ಈ ಸಿನಿಮಾ 1 ವಾರ ಕಳೆಯುತ್ತಾ ಬಂದರೂ ₹5 ಕೋಟಿ ಗಡಿಯನ್ನೂ ದಾಟಿಲ್ಲ. 'ಲೈಗರ್'ಗೂ ಇದೇ ರೀತಿಯ ಶಾಪವೇ ಅಂಟಿಕೊಂಡಂತಾಗಿದೆ. ನಟ ವಿಜಯ್ ದೇವರಕೊಂಡ ಈ ಹಿಂದೆ ಕೊಟ್ಟಿದ್ದ ಹೇಳಿಕೆಗಳೇ ಮುಳುವಾಯಿತಾ ಎಂಬ ಪ್ರಶ್ನೆ ಮೂಡುತ್ತಿದೆ.
ಇದನ್ನೂ ಓದಿ : Viral Video: ಮಲಗಿದ್ದ ಮಹಿಳೆಯ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು!
ಹಾಗೇ ‘ದೋಬಾರಾ’ಗೆ IMDB ರೇಂಟಿಗ್ ವಿಚಾರದಲ್ಲಿ ಕೂಡ ದೊಡ್ಡ ಶಾಕ್ ಸಿಕ್ಕಿತ್ತು. ತಾಪ್ಸಿ ಅಭಿನಯದ ‘ದೋಬಾರಾ’ಗೆ IMDBಯಲ್ಲಿ 10 ಅಂಕಕ್ಕೆ 2.8 ರೇಟಿಂಗ್ ಸಿಕ್ಕಿದೆ. ಸುಮಾರು 15 ಸಾವಿರ ಜನರು IMDBಯಲ್ಲಿ ‘ದೋಬಾರಾ’ಗೆ ವೋಟ್ ಮಾಡಿದ್ದರು. ಇದನ್ನೆಲ್ಲಾ ನೋಡುತ್ತಿದ್ದರೆ ಬಾಲಿವುಡ್ ಸಿನಿಮಾಗಳು ಮುಳುಗುತ್ತಿರುವ ಹಡಗಾಗುತ್ತಿವೆ. ಈ ಹೊತ್ತಲ್ಲೇ ದಕ್ಷಿಣದ ಸಿನಿಮಾಗೂ 1st ಶಾಕ್ ಸಿಕ್ಕಿದ್ದು, ಸಿನಿಮಾ ವಿತರಕರ ವಲಯದಿಂದ ಆಕ್ರೋಶ ವ್ಯಕ್ತವಾಗ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.