ಬೆಂಗಳೂರು: ಮನರಂಜನೆ ನೀಡುವಲ್ಲಿ ಸ್ಯಾಂಡಲ್ವುಡ್‌ ಸಿನಿಮಾ ಮಾತ್ರವಲ್ಲದೇ ಧಾರಾವಾಹಿಗಳು ಸದಾ ಮುಂದಿರುತ್ತವೆ. ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳು ಇರುವುದರಿಂದ ಅದರಲ್ಲಿ ಹೆಚ್ಚು ವೀಕ್ಷಣೆ ಪಡೆದ ಸೀರಿಯಲ್‌ ಹೆಚ್ಚು ಟಿಆರ್​ಪಿ ಗಳಿಸಿದ ಧಾರವಾಹಿ ಯಾವುದೆಂದು ಇಲ್ಲಿದೆ ನೋಡಿ ವಿವರ..


COMMERCIAL BREAK
SCROLL TO CONTINUE READING

ವಿಭಿನ್ನ ಕಥೆ ಹೊಂದಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ.ಈಗಾಗಲೇ ಈ ಧಾರಾವಾಹಿ 400+ ಎಪಿಸೋಡ್ ಪ್ರಸಾರ ಕಂಡಿದೆ. ಇದು ಕಳೆದ ವಾರಕ್ಕಿಂತ ಹೆಚ್ಚಿನ ಟಿಆರ್​ಪಿ ಗಳಿಸಿದೆ. 


ಅದಿನಿಂದ ಇಂದಿನವರೆಗೂ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ‘ಗಟ್ಟಿಮೇಳ’ ಈ ವಾರ ಎರಡನೇ ಸ್ಥಾನ ಪಡೆದಿದೆ.


ಇದನ್ನೂ ಓದಿ: Thalapathy Vijay: ದಳಪತಿ' ವಿಜಯ್ ಹುಟ್ಟುಹಬ್ಬಕ್ಕೆ ಡಬಲ್ ಧಮಾಕ ಉಡುಗೊರೆ..!


ಗೃಹಿಣಿಯರು ಹೆಚ್ಚು ವೀಕ್ಷಿಸುವಲ್ಲಿಶ್ರೀರಸ್ತು ಶುಭಮಸ್ತುಮೂರನೇ ಸ್ಥಾನ ಪಡೆದು ಪ್ರೇಕ್ಷಕರ ಮನವೊಲಿಸಿದೆ. ಈ ಧಾರವಾಹಿಯಲ್ಲಿ ಹಿರಿಯ ನಟಿ ಸುಧಾರಾಣಿಯವರು ಧಾರವಾಹಿ ನಟ ನಟಿಯರಿಗಿಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. 


ನಾಲ್ಕನೇ ಸ್ಥಾನ ಪಡೆದಿರುವ ʼಸತ್ಯʼ ಧಾರವಾಹಿ, ಹಾಗೆಯೇ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ’-ಲಕ್ಷ್ಮೀ ಬಾರಮ್ಮ ಸಹ ಒಳ್ಳೆಯ ವೀಕ್ಷಣೆ ಗಳಿಸಿ ಐದು- ಆರನೇ ಸ್ಥಾನದಲ್ಲಿ ನಿಂತಿದೆ. 


ಇದನ್ನೂ ಓದಿ: Bharjari Bachelors: ʼಭರ್ಜರಿ ಬ್ಯಾಚುಲರ್ಸ್ʼ ಗಳಿಗೆ ʼಪ್ರೀತಿ ಪಾಠ ಹೇಳಲುʼ ರೆಡಿಯಾದ ಕರುನಾಡ ಕ್ರೇಜಿ ಸ್ಟಾರ್..!


ಹೊಸ ಧಾರವಾಹಿಯಾಗಿರುವ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ನಟನೆಯ ʼಅಮೃತಧಾರೆʼ ಸಿರಿಯಲ್‌  ವೀಕ್ಷಕರ ಸಂಖ್ಯೆ ಹೆಚ್ಚಿದ್ದರೂ ಏಳನೇ ಸ್ಥಾನ ನಿಂತಿದೆ. ಇನ್ನುಳಿದಂತೆ ಈ ಧಾರವಾಹಿ ಬಗ್ಗೆ ವೀಕ್ಷಕರಲ್ಲಿ ಹೆಚ್ಚಿನ ನೀರಿಕ್ಷೆ ಮೂಡಿಸಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.