Kranti Movie Review : ಕರುನಾಡಲ್ಲಿ ʼಕ್ರಾಂತಿʼ ಕಹಳೆ.! ದರ್ಶನ್ ಅಭಿಮಾನಿಗಳ ಸಂಭ್ರಮ
Kranti Movie Review: ಡಿ ಬಾಸ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಇಂದು ರಿಲೀಸ್ ಆಗಿದೆ. ದಚ್ಚು ಫ್ಯಾನ್ಸ್ ಎಲ್ಲೆಡೆ ಸಂಭ್ರಮ ಪಡುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆಯನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
Kranti Movie Review: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ. ಇಂದಿನಿಂದ ತೆರೆಯ ಮೇಲೆ ಅಬ್ಬರಿಸಲಿದೆ. 2021 ರಲ್ಲಿ ರಾಬರ್ಟ್ ಸಿನಿಮಾ ತೆರೆಕಂಡಿತ್ತು.ಅದಾದ ಬಳಿಕ ಡಿ ಬಾಸ್ ಫ್ಯಾನ್ಸ್ ಬಿಗ್ ಸ್ಕ್ರೀನ್ ಮೇಲೆ ತಮ್ಮ ನೆಚ್ಚಿನ ನಟನನ್ನು ನೋಡಬೇಕು ಅಂತ ತುದಿಗಾಲಲ್ಲಿ ನಿಂತಿದ್ದರು. ಕ್ರಾಂತಿ ಸಿನಿಮಾ ಜನವರಿ 26ಕ್ಕೆ ರಿಲೀಸ್ ಆಗಿದೆ. ಅಡಿ ಬಾಸ್ ನಟನೆಯ ಕ್ರಾಂತಿ ಕರುನಾಡಿನಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದೆ.
Latest Updates
ನಟ ಸೃಜನ್ ಲೋಕೇಶ್ ಕ್ರಾಂತಿ ಸಿನಿತಂಡಕ್ಕೆ ಶುಭಕೋರಿದ್ದಾರೆ. ಕ್ರಾಂತಿಯ ತಂಡಕ್ಕೆ ಶುಭಾಶಯಗಳು. ದರ್ಶನ್ ಅವರಿಗೆ ಆಲ್ ದಿ ವೆರಿ ಬೆಸ್ಟ್. ಬಹಳಷ್ಟು ಯಶಸ್ಸು ಸಿಗಲಿ. ದೇವರು ಒಳ್ಳೆಯದು ಮಾಡಲಿ ಎಂದು ನಟ ಸೃಜನ್ ಲೋಕೇಶ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕ್ರಾಂತಿ ಮುಂಗಡ ಬುಕಿಂಗ್ 6 ಕೋಟಿ ದಾಟಿದೆ. ಮೈಸೂರು ನಗರವೊಂದರಲ್ಲೇ 95 ಪ್ರದರ್ಶನಗಳು ದಾಖಲಾಗಿವೆ.
ಕ್ರಾಂತಿ ಸಿನಿಮಾಗೆ ನಮ್ಮ ರಾಜ್ಯದ ಮೂಲೆ ಮೂಲೆಗಳಿಂದ ಸಕಾರಾತ್ಮಕ ವಿಮರ್ಶೆಗಳು ಬರುತ್ತಿವೆ.
ಹಾಸನದಲ್ಲಿ ಡಿ ಬಾಸ್ ಅಭಿಮಾನಿಗಳ ಸಂಭ್ರಮ
ಶಿವಮೊಗ್ಗದಲ್ಲಿ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ಅಬ್ಬರ
ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಕ್ರಾಂತಿ ಸಿನಿಮಾಗೆ ಹಾಗೂ ದರ್ಶನ್‌ಗೆ ಶುಭಕೋರಿದ್ದಾರೆ. "ಕ್ರಾಂತಿಗೆ ಶುಭವಾಗಲಿ, ಕ್ರಾಂತಿಯಾಗಲಿ" ಎಂದು ನಟ ಧನಂಜಯ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಾದ್ಯಂತ ಕ್ರಾಂತಿ ಸಿನಿಮಾ ಅಬ್ಬರ ಬಲು ಜೋರಾಗಿದೆ.