ನವದೆಹಲಿ: ಕೊರೊನಾ ವೈರಸ್ ಪ್ರಕೊಪದಿಂದ ಪಾರಾಗಲು ದೆಹಾದ್ಯಂತೆ ಸರ್ಕಾರ ಮೂರು ವಾರಗಳ ಲಾಕ್ ಡೌನ್ ಘೋಷಿಸಿದೆ. ಈ ನಡುವೆ ದಿನನಿತ್ಯದ ಅವಶ್ಯಕತೆಗಳಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.  ದೇಶದಲ್ಲಿರುವ ಬಡವರು ಎರಡು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದು, ಹಲವರು ಈ ಲಾಕ್ ಡೌನ್ ನಿಂದ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಈ ವಿಷಯ ಖ್ಯಾತ ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಹಾಗೂ ಪಾಲಿಟಿಶಿಯನ್ ಕಮಲ್ ಹಾಸನ್ ಅವರ ಚಿಂತೆಯ ವಿಷಯವಾಗಿ ಪರಿಣಮಿಸಿದ್ದು, ಪತ್ರ ಬರೆಯುವ ಮೂಲಕ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಬಹಿರಂಗ ಪತ್ರ ಬರೆದಿರುವ ಕಮಲ್ ಹಾಸನ್, ಪ್ರಧಾನಿ ನರೇಂದ್ರ ಮೋದಿ ಅವರಿಂದ ಘೋಶಿಸಿಲ್ಪಟ್ಟ ಲಾಕ್ ಡೌನ್ ನಿಂದ ತಾವು ಅಸಂತುಷ್ಟರಾಗಿರುವುದಾಗಿ ಹೇಳಿದ್ದಾರೆ ಹಾಗೂ ಈ ಲಾಕ್ ಡೌನ್ ಮೋದಿ ಸರ್ಕಾರ ಈ ಮೊದಲು ಘೋಷಿಸಿದ್ದ ನೋಟು ಅಮಾನ್ಯಿಕರಣ ನಿರ್ನಯಕ್ಕಿಂತಲೂ ದೊಡ್ಡ ತಪ್ಪು ಎಂಬುದು ತಮ್ಮ ಅನಿಸಿಕೆಯಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಬರೆದುಕೊಂಡಿರುವ ಕಮಲ್, ಮಾರ್ಚ್ 23ರಂದು ತಾವು ಬರೆದಿರುವ ಪತ್ರದಲ್ಲಿ ಲಾಕ್ ಡೌನ್ ನಿಂದ ದೇಶದಲ್ಲಿ ಉದ್ಭವಿಸಲಿರುವ ಪರಿಸ್ಥಿತಿಯಿಂದ ದೇಶದ ಬಡವರು ಸಂಕಷ್ಟ ಎದುರಿಸುವಂತಾಗಬಹುದು ಎಂದು ವಿನಂತಿಸಿರುವುದಾಗಿ ಹೇಳಿದ್ದಾರೆ. ಆದರೆ, ಅದಕ್ಕೆ ವಿಪರೀತ ಎಂಬಂತೆ ಮಾರನೆ ದಿನವೇ ಲಾಕ್ ಡೌನ್ ಘೋಷಿಸಲಾಗಿದೆ. ಈ ನಿರ್ಣಯ ಕೂಡ ನೋಟು ಅಮಾನ್ಯೀಕರಣದ ರೀತಿಯಲ್ಲೇ ಹೇರಲಾಗಿದೆ. ಆದರೂ ಕೂಡ ನಾವು ನಿಮ್ಮ ನಿರ್ಣಯದ ಮೇಲೆ ಭರವಸೆಯನ್ನು ಮುಂದುವರೆಸಿದ್ದೇವು. ಆದರೆ, ನಮ್ಮ ನಿರ್ಣಯ ತಪ್ಪಾಗಿತ್ತು ಹಾಗೂ ನಿಮ್ಮ ನಿರ್ಣಯ ಕೂಡ ತಪ್ಪಿದೆ. ಸಮಯ ನಿಮ್ಮ ನಿರ್ಣಯ ತಪ್ಪೆಂದು ಸಾಬೀತುಪಡಿಸಿದೆ.


ನೀವು ಈ ದೇಶದ ಮುಖ್ಯಸ್ಥರಾಗಿದ್ದೀರಿ. ದೇಶದ 1.4 ಬಿಲಿಯನ್ ಜನರು ನಿಮ್ಮ ಆಜ್ಞೆಯನ್ನು ಪಾಲಿಸುತ್ತಾರೆ. ವಿಶ್ವದ ಯಾವುದೇ ದೇಶದಲ್ಲಿ ಈ ರೀತಿಯ ಮಾಸ್ ಫಾಲ್ಲೋವಿಂಗ್ ಹೊಂದಿರುವ ಬೇರೆ ಲೀಡರ್ ಇಲ್ಲ. ಇಡೀ ದೇಶ ನಿಮ್ಮ ಮೇಲೆ ಭರವಸೆ ವ್ಯಕ್ತಪಡಿಸುತ್ತದೆ. ನಾವೆಲ್ಲರೂ ಕೂಡ ನಿಮ್ಮ ನಿರ್ದೇಶನಗಳನ್ನು ಅನುಸರಿಸಲು ಸಿದ್ಧರಾಗಿದ್ದೇವೆ. ಅಷ್ಟಾಗ್ಯೂ ಕೂಡ ನಿಮ್ಮ ರೀತಿಯೇ ನಾನೂ ಕೂಡ ಓರ್ವ ಮುಖಂಡನಾಗಿದ್ದು, ಲಾಕ್ ಡೌನ್ ಕುರಿತು ನನ್ನದೇ ಆದ ಕೆಲ ಪ್ರಶ್ನೆಗಳಿವೆ.


ಡಿಮಾನೆಟೈಶೇಷನ್ ಬಳಿಕ ದೇಶ ಯಾವ ರೀತಿ ನಷ್ಟ ಅನುಭವಿಸಿದೆಯೋ ಅದೇ ರೀತಿ ಲಾಕ್ ಡೌನ್ ಬಳಿಕವೂ ಕೂಡ ನಡೆಯುವ ಸಂಕೇತಗಳು ಗೋಚರಿಸುತ್ತಿವೆ. ಬಡವರ ಉದ್ಯೋಗ ಆತಂಕದಲ್ಲಿದೆ ಹಾಗೂ ಅವರ ಕ್ಷೇಮದ ಜವಾಬ್ದಾರಿ ನಿಮ್ಮ ಮೇಲಿದೆ. ಒಂದೆಡೆ ನಿಮಗೆ ಬೆಂಬಲಿಸಲು ಎಣ್ಣೆ ದೀಪ ಉರಿಸಲು ದೇಶದ ಜನರು ಮುಂದಾಗುತ್ತಿದ್ದರೆ, ಇನ್ನೊಂದೆಡೆ ಹಲವು ಬಡವರ ಬಳಿ ಅಡುಗೆ ತಯಾರಿಸಲೂ ಕೂಡ ಎಣ್ಣೆ ಇಲ್ಲ ಎಂದು ಕಮಲ್ ಹೇಳಿದ್ದಾರೆ.


GDPಯನ್ನೂ ಕೂಡ ಕಡೆಗಣಿಸಬೇಡಿ
ಈ ದೇಶದ ಮಧ್ಯಮವರ್ಗದ ಜನರ ಬಳಿ ವಾಸಿಸಲು ಮನೆ ಇದೆ. ಆದರೆ, ಇನ್ನೊಂದೆಡೆ ಬಹುತೇಕರು ಇದುವರೆಗೂ ಕೂಡ ಸೂರಿಗಾಗಿ ಪರದಾಡುತ್ತಿದ್ದಾರೆ. ಇದರೊಂದಿಗೆ ದೇಶದ GDP ಕೂಡ ಕಡೆಗಣಿಸುವಂತಿಲ್ಲ. ಜನಸಂಖ್ಯೆ ಇದು ನಮ್ಮ ದೇಶದ ಅತಿ ದೊಡ್ಡ ಶಕ್ತಿ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಒಗ್ಗಟ್ಟಾಗಿ ನಾವು ಹೊರಬರಲಿದ್ದೇವೆ ಎಂಬುದನ್ನು ನಾನು ಆಶಿಸುತ್ತೇನೆ. ಆದ್ರೆ, ಎಲ್ಲರ ಕಲ್ಯಾಣ ಇದರ ಉದ್ದೇಶವಾಗಿರಬೇಕು ಎಂಬುದು ನನ್ನ ಅಭಿಪ್ರಾಯ. ನಮಗೆ ಕೋಪ ಬಂದಿದ್ದರು ಕೂಡ ನಾವು ನಿಮ್ಮ ಜೊತೆಗೆ ನಿಂತಿದ್ದೇವೆ, ಜೈ ಹಿಂದ್ ಎಂದು ಕಮಲ್ ಬರೆದಿದ್ದಾರೆ.