Bharjari Bachelors : ಜೀ ಕನ್ನಡದಲ್ಲಿ ವಾರಾಂತ್ಯದಲ್ಲಿ ಡಿಕೆಡಿ ಹಾಗೂ ಸರಿಗಮಪದಂತಹ ರಿಯಾಲಿಟಿ ಶೋಗಳನ್ನು ನಡೆಸಿಕೊಡಲಾಗುತ್ತದೆ. ಇನ್ನು ಈ ರಿಯಾಲಿಟಿ ಶೋಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡೋದಂತೂ ಸುಳ್ಳಲ್ಲ. ಅಂತದ್ದೇ ಇನ್ನೊಂದು ರಿಯಾಲಿಟಿ ಶೋ ಜೀ ಕನ್ನಡದಲ್ಲಿ ಎಲ್ಲರ ಕಣ್ಮನ ಸೆಳೆಯಲು ಸಜ್ಜಾಗಿದೆ. ಅದೇ "ಭರ್ಜರಿ ಬ್ಯಾಚುಲರ್ಸ್‌". ಇನ್ನು ಈ ರಿಯಾಲಿಟಿ ಶೋ ಯಾವ ತರ ಇರಲಿದೆ, ಏನೆನೆಲ್ಲಾ ಇರಲಿದೆ ಅನ್ನೊದೆ ಎಲ್ಲರ ಪ್ರಶ್ನೆ. ಅದನ್ನಲ್ಲಾ ತಿಳಿಯೋಕೆ ಮುಂದೆ ಓದಿ..


COMMERCIAL BREAK
SCROLL TO CONTINUE READING

ಮದುವೆ ವಯಸ್ಸಿಗೆ ಬಂದಿರುವ ಹದಿಹರೆಯದ ಹುಡುಗರಿಗೆ ಸಮಾಜದಲ್ಲಿ ಎದುರಾಗುತ್ತಿರುವ ನಿಜವಾದ ತೊಂದರೆಗಳನ್ನು ಆಧಾರವಾಗಿಟ್ಟುಕೊಂಡು ಮಾಡಲಾದ ಶೋ ಭರ್ಜರಿ ಬ್ಯಾಚುಲರ್ಸ್‌. ಇನ್ನು ಕಾರ್ಯಕ್ರಮದಲ್ಲಿ ಕರ್ನಾಟಕದ ಕಿರುತೆರೆಯ ಕೆಲವು ಬ್ಯಾಚುಲರ್ಸ್‌ ಇರಲಿದ್ದು, ತಮ್ಮ ಸಿಂಗಲ್‌ ಲೈಫ್‌ನಿಂದ ಮದುವೆಗೆ ಎಲಿಜಿಬಲ್‌ ಮಾಡುವ ನ್ಯೂ ಥೀಮ್‌ ರಿಯಾಲಿಟಿ ಶೋ ಈ ಭರ್ಜರಿ ಬ್ಯಾಚುಲರ್ಸ್‌.


ಇದನ್ನೂ ಓದಿ-ಕಿರುತೆರೆಯ ರಾಮ ಸೀತೆ ಇವರು..ಕನ್ನಡತಿ ಸಿರೀಯಲ್‌ನ ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ಹೇಳಿ..!


ಇನ್ನು ಈ ರಿಯಾಲಿಟಿ ಶೋಗೆ ಜಡ್ಜಸ್ ಆಗಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಹಾಗೂ ಗುಳಿಕೆನ್ನೆ ಬೆಡಗಿ ರಚಿತಾ ರಾಮ್‌ ಆಗಮಿಸಲಿದ್ದಾರೆ. ಈ ಭರ್ಜರಿ ಬ್ಯಾಚುಲರ್ಸ್‌ ಶೋನ ಟೈಟಲ್‌ ಟ್ರ್ಯಾಕ್‌ನ್ನು ಚಂದನ್‌ ಶೆಟ್ಟಿ ಹಾಡಿದ್ದು, ಸದ್ಯ ಈ ಸಾಂಗ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. 


ಈ ಭರ್ಜರಿ ಬ್ಯಾಚುಲರ್ಸ್‌ ಶೋ ಆಯ್ದ ಹತ್ತು ಬ್ಯಾಚುಲರ್ಸ್‌ಗಳ ಕನಸ್ಸನ್ನು ನನಸಾಗಿಸುತ್ತಾ.. ಅವರ ಆಸೆಯ ಕುರುಕ್ಷೇತ್ರದಲ್ಲಿ ಅವರ ಗಟ್ಟಿತನ ಹೇಗಿರಲಿದೆ ಎನ್ನುವುದನ್ನು ಈ ಶೋ ತೋರಿಸಿಕೊಡಲಿದೆ. ಒಬ್ಬ ಬ್ಯಾಚುಲರ್ಸ್‌ ಮದುವೆಗೆ ಎಲಿಜಿಬಲ್‌ ಆಗೋಕೆ ಏನು ಮಾಡಬೇಕು ಅನ್ನೊದನ್ನು ಈ ಶೋ ತಿಳಿಸಲಿದೆ. 


ಇನ್ನು ಈ ಹತ್ತು ಭರ್ಜರಿ ಬ್ಯಾಚುಲರ್ಸ್‌ಗಳಿಗೆ ಜೋಡಿಯಾದಲೆಂದೆ ಕಿರಿತೆರೆಯ ಸುಂದರಿಯರು ಈ ಶೋಗೆ ಆಗಮಿಸಲಿದ್ದಾರೆ. ಹಾಗಾದರೆ ಯಾರೆಲ್ಲಾ ಬರಲಿದ್ದಾರೆ ಅಂತೀರಾ..? ಯೋಚನೆ ಮಾಡಬೇಡಿ... ಈ ಭರ್ಜರಿ ಬ್ಯಾಚುಲರ್ಸ್‌ ಗೆ ಜೋಡಿಯಾಗಲು, ಸುಕೃತಾ, ಸಂಜನಾ, ಐಶ್ವರ್ಯ, ಆಸಿಯಾ ಬೇಗಂ, ಆಶಾ ಗೌಡ, ಆರೋಹಿ ನೈನಾ, ರಶ್ಮಿ, ಯಶಶ್ವಿನಿ, ಚಂದನಾ, ಲಾಸ್ಯಾ ನಾಗಾರಾಜ ಈ ಹತ್ತು ಕಿರುತೆರೆ ನಟಿಯರು ಭರ್ಜರಿ ಬ್ಯಾಚುಲರ್ಸ್‌ಗೆ ಜೋಡಿಯಾಗಲಿದ್ದಾರೆ. ಇನ್ನು ಎಲ್ಲರು ಸೇರಿ ಅಭಿಮಾನಿಗಳಿಗೆ ಮನರಂಜನೆಯ ಔತನವನ್ನು ಬಡಿಸುತ್ತಾರಾ ಕಾದು ನೋಡಬೇಕು.. 


ಇದನ್ನೂ ಓದಿ-ಕಿರುತೆರೆಯ ರಾಮ ಸೀತೆ ಇವರು..ಕನ್ನಡತಿ ಸಿರೀಯಲ್‌ನ ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ಹೇಳಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.