ಬೆಂಗಳೂರು : ಅಪ್ಪ ಐ ಲವ್ ಯೂ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ಲವ್ಲಿ ಸ್ಟಾರ್ ಪ್ರೇಮ್ ಈಗ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.ಈ ಬಾರಿ ಅವರು ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ರಗಡ್ ಅವತಾರ ತಾಳಿದ್ದಾರೆ.ನಿನ್ನೆ ಪ್ರೇಮ್ ಜನ್ಮದಿನ.ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ. 


COMMERCIAL BREAK
SCROLL TO CONTINUE READING

ಸಿನಿಮಾದಲ್ಲಿ ಸ್ಟ್ರೀಕ್ಟ್ ಪೊಲೀಸ್ ಅಧಿಕಾರಿ ಪಾತ್ರವನ್ನು ಪ್ರೇಮ್  ನಿರ್ವಹಿಸುತ್ತಿದ್ದಾರೆ. ಸ್ಕ್ರೀಪ್ಟ್ ರೆಡಿಯಾಗುತ್ತಿದ್ದು, ಕ್ಲೈಮ್ಯಾಕ್ಸ್  ಬಗ್ಗೆಯೂ ಚರ್ಚೆ  ನಡೆಯುತ್ತಿದೆ. ಪೂರ್ಣ ಪ್ರಮಾಣದಲ್ಲಿ ಸ್ಟಾರ್ ಕಾಸ್ಟ್ ಡಿಸೈಡ್ ಆಗಿಲ್ಲ.ನಿನ್ನೆ ಪ್ರೇಮ್ ಜನ್ಮದಿನವಾದ ಕಾರಣ ಇದೇ ದಿನ ಚಿತ್ರದ ಮುಹೂರ್ತ ನೆರವೇರಿಸುವ ಬಗ್ಗೆ   ನಿರ್ದೇಶಕರು ನಿರ್ಧಾರಿಸಿದ್ದರು. ಹೀಗಾಗಿ  ನಿನ್ನೆ ಈ ಚಿತ್ರದ ಮುಹೂರ್ತ  ನಡೆಯಿತು. 


ಇದನ್ನೂ ಓದಿ : Vickypedia : "ಈ ಸಾರಿ ವೋಟ್ ಹಾಕಿ" ಎಂದ ವಿಕಿಪೀಡಿಯ, ಮತದಾನ ಜಾಗೃತಿ ಕುರಿತು ಹೊಸ ರೀಲ್


ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ. ಟೈಟಲ್ ಬಗ್ಗೆ ಕೂಡಾ ಇನ್ನೂ ಚರ್ಚೆ ನಡೀತಾ ಇದೆ. ರಂಗಾಯಣ ರಘು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಈ ತಿಂಗಳಾತ್ಯಂಕ್ಕೆ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.


ನೆನಪಿರಲಿ ಪ್ರೇಮ್ ಮತ್ತೆ ಪೊಲೀಸ್ ಪಾತ್ರ ಮಾಡಿದ್ದಾರೆ. 11 ವರ್ಷದ ಹಿಂದೆ ಪ್ರೇಮ್ ಪೊಲೀಸ್ ರೋಲ್ ನಲ್ಲಿ ಮಿಂಚಿದ್ದರು. ಶತ್ರು ಅನ್ನೋ ಈ ಚಿತ್ರದಲ್ಲಿ ಪೊಲೀಸ್ ಖದರ್ ನಲ್ಲಿ ಪವರ್ ತೋರಿಸಿದ್ದರು.ಆದರೆ ಪ್ರೇಮ್ ಈ ಸಲ ಬೇರೆ ರೀತಿಯ ಪೊಲೀಸ್ ಪಾತ್ರ ಮಾಡಿದ್ದಾರೆ.ರಫ್ ಆ್ಯಂಡ್ ಟಫ್ ಅಲ್ಲದೇ, ರಗಡ್ ಲುಕ್  ಇರೋ ಪೊಲೀಸ್ ರೀತಿನೂ ಕಾಣಿಸುತ್ತಿದ್ದಾರೆ. 


ಇದನ್ನೂ ಓದಿ : Anchor Anushree: ಚಟಪಟ ಅಂತ ಅಚ್ಚ ಕನ್ನಡದಲ್ಲೇ ಮಾತನಾಡೋ ಆಂಕರ್‌ ಅನುಶ್ರೀ ಓದಿದ್ದೇನು ಗೊತ್ತಾ? ಮಂಗಳೂರು ಚೆಲುವೆಯ ವಿದ್ಯಾರ್ಹತೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!


ಯುವ ಪ್ರತಿಭೆ ತೇಜಸ್ ಬಿ.ಕೆ ಕಥೆ ಚಿತ್ರಕಥೆ ಬರೆದು ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ, ಆನಂದ್ ಮೀನಾಕ್ಷಿ ಛಾಯಾಗ್ರಹಣ ಚಿತ್ರಕ್ಕಿದೆ.ಹೆಸರಿಡದ ಈ ಸಿನಿಮಾಗೆ ಮಧು ಗೌಡ ಬಂಡವಾಳ ಹೂಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.