`ಮೇಡ್ ಇನ್ ಚೈನಾ`.. ಇದು ಪ್ರಾಡಕ್ಟ್ ಅಲ್ಲ, ಕನ್ನಡದ ಡಿಫರೆಂಟ್ ಸಿನಿಮಾ
Made in Chaina: ಇಕ್ಕಟ್ ಸಿನಿಮಾ ಮೂಲಕ ಮನರಂಜನೆಯ ರಸದೌತಣ ಉಣಬಡಿಸಿದ್ದ ನಾಗಭೂಷಣ್ ನಟನೆಯ `ಮೇಡ್ ಇನ್ ಚೈನಾ` ಟೀಸರ್ ರಿಲೀಸ್ ಆಗಿ, ಕನ್ನಡ ಸಿನಿ ರಸಿಕರಿಗೆ ಇಷ್ಟವಾಗುತ್ತಿದೆ.
ಕನ್ನಡ ಸಿನಿ ರಂಗ ಜಾಗತಿಕ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸುತ್ತಿದೆ. ಹೊಸಬರ ಹೊಸ ಹೊಸ ಪ್ರಯತ್ನಗಳ ಮೂಲಕ ಕನ್ನಡ ಸಿನಿಮಾಗಳು ಸಖತ್ ಸದ್ದು ಮಾಡುತ್ತಿವೆ. ಅದೇ ರೀತಿ ಕನ್ನಡದಲ್ಲೂ (Kannada Movie) ಮೊಟ್ಟಮೊದಲ ಬಾರಿಗೆ ವರ್ಚುವಲ್ ಸಿನಿಮಾ ಸಿದ್ಧವಾಗಿದೆ. ಅದರ ಕಥೆಯನ್ನ ತಿಳಿಯೋಣ ಬನ್ನಿ.
ಇದನ್ನೂ ಓದಿ: Darshan: ಪ್ರಾಣ ಸ್ನೇಹಿತನಿಗೆ ನಟ ದರ್ಶನ್ ನೆರವು.. ಕುಟುಂಬಕ್ಕೆ ಬೆನ್ನುಲುಬಾದ 'ಡಿ ಬಾಸ್'
ಹೌದೌದು, ಇಕ್ಕಟ್ ಸಿನಿಮಾ ಮೂಲಕ ಮನರಂಜನೆಯ ರಸದೌತಣ ಉಣಬಡಿಸಿದ್ದ ನಾಗಭೂಷಣ್ ನಟನೆಯ 'ಮೇಡ್ ಇನ್ ಚೈನಾ' (Made in Chaina) ಟೀಸರ್ ರಿಲೀಸ್ ಆಗಿ, ಕನ್ನಡ ಸಿನಿ ರಸಿಕರಿಗೆ ಇಷ್ಟವಾಗುತ್ತಿದೆ. ಹೊಸ ಪ್ರಯತ್ನ ಪ್ರೇಕ್ಷಕ ಪ್ರಭುವಿಗೆ ಹಿಡಿಸುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ.
[[{"fid":"229923","view_mode":"default","fields":{"format":"default","field_file_image_alt_text[und][0][value]":"Nagabhooshan","field_file_image_title_text[und][0][value]":"ನಾಗಭೂಷಣ್ "},"type":"media","field_deltas":{"1":{"format":"default","field_file_image_alt_text[und][0][value]":"Nagabhooshan","field_file_image_title_text[und][0][value]":"ನಾಗಭೂಷಣ್ "}},"link_text":false,"attributes":{"alt":"Nagabhooshan","title":"ನಾಗಭೂಷಣ್ ","class":"media-element file-default","data-delta":"1"}}]]
ಲಾಕ್ ಡೌನ್ (Lockdown) ಟೈಮ್ ನಲ್ಲಿ ವಿದೇಶದಲ್ಲಿ ಲಾಕ್ ಆಗುವ ಪತಿ ಹಾಗೂ ಸ್ವದೇಶಿ ನೆಲದಲ್ಲಿ ಪರದಾಡುವ ಪತ್ನಿ. ಈ ಗಂಡ-ಹೆಂಡತಿಯ ನಡುವಿನ ಪ್ರೀತಿ-ಗೀತಿ-ಇತ್ಯಾದಿಯೇ ಈ ಕಥೆಯ ಫೌಂಡೇಷನ್. ಒಂದಷ್ಟು ಕಿರಿಕ್ ಕೂಡ ಪ್ರೇಕ್ಷಕ ಪ್ರಭುವಿಗೆ ಇಷ್ಟವಾಗಬಹುದು. 'ಮೇಡ್ ಇನ್ ಚೈನಾ' ಫ್ಯಾಮಿಲಿ ಡ್ರಾಮಾ. ನಾಗಭೂಷಣ್ (Nagabhooshan) ಈಗಾಗಲೇ ಕನ್ನಡಿಗರನ್ನ ನಕ್ಕು ನಗಿಸಿದ್ದಾರೆ. ಇಲ್ಲೂ ಕೂಡ ನಾಗಭೂಷಣ್ ಕಾಮಿಡಿ ಪಂಚ್‌ಗಳು ನಿಮ್ಮ ಹೊಟ್ಟೆ ಹುಣ್ಣಾಗುವಷ್ಟು ನಗಿಸಬಹುದು.
ಇದನ್ನೂ ಓದಿ: ಮತ್ತೆ ಬಂದರು ಮೀರಾ ಜಾಸ್ಮಿನ್ ..! ಹೇಗಿದೆ ಗೊತ್ತಾ ಹೊಸ ಲುಕ್..?
ಕಚಗುಳಿ ಇಡುವ ಕಾಮಿಡಿ ಡೈಲಾಗ್ ಜೊತೆಗೆ ಪ್ರಿಯಾಂಕಾ ತಿಮ್ಮೇಶ್ (Priyanka Timmesh) ಅದ್ಭುತ ನಟನೆ ಗಮನಸೆಳೆತಿದೆ. ಅದ್ರಲ್ಲೂ ಟೀಸರ್ ನಲ್ಲಿ ಮೂಡಿಬಂದಿರುವ ಬ್ಯಾಗ್ರೌಂಡ್ ಮ್ಯೂಸಿಕ್ ಸಖತ್ತಾಗಿದೆ. ಉಳಿದಂತೆ ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಕೂಡ ನಟಿಸಿದ್ದಾರೆ. ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಮೇಡ್ ಇನ್ ಚೈನಾ ಸಿನಿಮಾಗೆ ಕಥೆ ಬರೆದಿದ್ದು, ಎನ್.ಕೆ. ಸ್ಟುಡಿಯೋಸ್ ಬ್ಯಾನರ್ ನಡಿ ನಂದಕಿಶೋರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.