ಹಿಂದಿನದನ್ನು ನೆನೆದು ಪೋಟೋ ಶೇರ್ ಮಾಡಿದ ಮಾಧುರಿ ದೀಕ್ಷಿತ್ ಹೇಳಿದ್ದೇನು?
ಸೋಶಿಯಲ್ ಮೀಡಿಯಾದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಮಾಧುರಿ ದೀಕ್ಷಿತ್ ಫೋಟೋ ಒಂದನ್ನು ಹಂಚಿಕೊಂಡಿದ್ದು ಅದೀಗ ಸಾಕಷ್ಟು ವೈರಲ್ ಆಗುತ್ತಿದೆ.
ನವದೆಹಲಿ: ಕರೋನಾವೈರಸ್ ವಿಶ್ವಾದ್ಯಂತ ಉಗ್ರ ಸ್ವರೂಪವನ್ನು ಪಡೆದುಕೊಂಡಿದೆ. ಭಾರತದಲ್ಲಿಯೂ ಸಹ ಇದರಿಂದ ಸಾಕಷ್ಟು ಹಾನಿಯಾಗಿದೆ. ಮುಂಬೈನಲ್ಲಿ ಕರೋನಾ ಸಕಾರಾತ್ಮಕ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಏತನ್ಮಧ್ಯೆ ಬಾಲಿವುಡ್ನ ಸ್ಟಾರ್ ತಾರೆ ಮಾಧುರಿ ದೀಕ್ಷಿತ್ (Madhuri Dixit) ತನ್ನ ಇನ್ಸ್ಟಾಗ್ರಾಮ್ನಲ್ಲಿ ಸಮುದ್ರದಲ್ಲಿ ಆನಂದದ ಕ್ಷಣಗಳನ್ನು ಕಳೆಯುತ್ತಿರುವ ಥ್ರೋ ಬ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಫೋಟೋದೊಂದಿಗೆ ಮಾಧುರಿ ದೀಕ್ಷಿತ್ 'ನನ್ನನ್ನು ಮತ್ತೆ ಆ ಕ್ಷಣಗಳಿಗೆ ಹಿಂದಿರುಗಿಸು. ಅನುಭವವು ಇಂದು ನಾವು ಯಾರೆಂದು ತಿಳಿಸುತ್ತದೆ. ಲಾಕ್‌ಡೌನ್‌ನ ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಮರೆಯಲಾಗದ ಅನುಭವಗಳನ್ನು ಸೃಷ್ಟಿಸಲು ಈ ಸಮಯವನ್ನು ಬಳಸೋಣ. ಹೊಸ ವಿಷಯಗಳನ್ನು ಕಲಿಯುವಲ್ಲಿ. ಒಗಟುಗಳನ್ನು ಪರಿಹರಿಸುವುದು, ಅಡುಗೆ ಮಾಡುವುದು ಹೀಗೆ... ಜಗತ್ತು ಮತ್ತೆ ತೆರೆದ ನಂತರ ಅನುಭವಗಳನ್ನು ಯಾವಾಗಲೂ ವಸ್ತುಗಳ ಮೇಲೆ ಇಡಬೇಕು ಎಂಬುದನ್ನು ನೆನಪಿಡಿ' ಎಂದು ಬರೆದಿದ್ದಾರೆ.
ಕರೋನಾ ಬಿಕ್ಕಟ್ಟಿನ ಸಮಯದಲ್ಲಿ ಮಾಧುರಿ ದೀಕ್ಷಿತ್ ಅವರ ಈ ಪೋಸ್ಟ್ ಅವರ ಅಭಿಮಾನಿಗಳಿಗೆ ಸಾಕಷ್ಟು ಸಕಾರಾತ್ಮಕತೆಯನ್ನು ತುಂಬುತ್ತಿದೆ. ಮಾಧುರಿ ಅವರ ಅಭಿಮಾನಿಗಳು ಅವರ ಪೋಸ್ಟ್ ಅನ್ನು ತುಂಬಾ ಪ್ರಶಂಸಿಸಿದ್ದಾರೆ.