Madhuri Dixit Affair: 'ಧಕ್ ಧಕ್ ಗರ್ಲ್' ಮಾಧುರಿ ದೀಕ್ಷಿತ್ ತಮ್ಮ ಅತ್ಯುತ್ತಮ ನಟನೆಯ ಜೊತೆಗೆ ತಮ್ಮ ಆಕರ್ಷಕ ಮ್ಯಾನರಿಸಂ ಮೂಲಕ ಜನರ ಮನ ಗೆದ್ದಿದ್ದಾರೆ. ಮಾಧುರಿ ದೀಕ್ಷಿತ್ ಇಂದು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಹಿಂದಿ ಚಿತ್ರರಂಗದ ಹಲವು ಸೂಪರ್‌ಹಿಟ್ ಚಿತ್ರಗಳಲ್ಲಿ ಮಾಧುರಿ ಕೆಲಸ ಮಾಡಿದ್ದಾರೆ. 90 ರ ದಶಕದಲ್ಲಿ ಎಲ್ಲರೂ ಮಾಧುರಿಯ ಅಭಿಮಾನಿಗಳಾಗಲು ಇದೇ ಕಾರಣ.


COMMERCIAL BREAK
SCROLL TO CONTINUE READING

ಮಾಧುರಿ ದೀಕ್ಷಿತ್‌ ಟೀಮ್‌ ಇಂಡಿಯಾ ಖ್ಯಾತ ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದಿದ್ದರು. ಟೀಮ್‌ ಇಂಡಿಯಾ ಮಾಜಿ ಆಟಗಾರ ಅಜಯ್ ಜಡೇಜಾ ಅವರನ್ನು ಮಾಧುರಿ ಮನಸಾರೆ ಪ್ರೀತಿಸುತ್ತಿದ್ದರು. ಅಜಯ್ ಮತ್ತು ಮಾಧುರಿ ಫೋಟೋಶೂಟ್‌ ಒಂದರ ಸಮಯದಲ್ಲಿ ಭೇಟಿಯಾದರು. ಈ ವೇಳೆಯೇ ಇಬ್ಬರೂ ಒಳ್ಳೆಯ ಸ್ನೇಹಿತರಾದರು. ಅದರ ನಂತರ ಅನೇಕ ಬಾರಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು.


ಇದನ್ನೂ ಓದಿ: ರಾಖಿ ಸಾವಂತ್ʼಗೆ ಇದ್ದಕ್ಕಿದ್ದಂತೆ ಆಗಿದ್ದೇನು? ರಾತ್ರೋ ರಾತ್ರಿ ಆಸ್ಪತ್ರೆಗೆ ದಾಖಲಾದ್ರಾ!! 


ಅಜಯ್ ಜಡೇಜಾ ಮತ್ತು ಮಾಧುರಿ ಮದುವೆ ಬಗ್ಗೆ ಮನೆಯವರ ಬಳಿ ಕೂಡ ಪ್ರಸ್ತಾಪ ಮಾಡಿದ್ದರು ಎನ್ನಲಾಗುತ್ತದೆ. ಆದರೆ ಅಜಯ್ ಜಡೇಜಾ ಮನೆಯವರು ಮಾಧುರಿಯ ಜೊತೆ ಮದುವೆಗೆ ನಿರಾಕರಿಸಿದರು. ಆ ಬಳಿಕ ಇವರ ಸಂಬಂಧದಲ್ಲಿ ಬಿರುಕು ಮೂಡಿತು. 


ಇದರ ನಂತರ ಅಜಯ್ ಮತ್ತು ಮಾಧುರಿ ನಡುವಿನ ಅಂತರವು ಹೆಚ್ಚಾಗಲಾರಂಭಿಸಿತು. ಈ ಜೋಡಿಯ ಪ್ರೇಮಕಥೆಯು ಅಪೂರ್ಣವಾಗಿ ಉಳಿಯಿತು. ಅಜಯ್‌ನಿಂದ ದೂರವಾದ ನಂತರ, ಮಾಧುರಿ ತನ್ನ ವೃತ್ತಿಜೀವನದ ಮೇಲೆ ಗಮನವನ್ನು ಕೇಂದ್ರೀಕರಿಸಿದರು. ಉದ್ಯಮದಲ್ಲಿ ಸಾಕಷ್ಟು ಹೆಸರನ್ನು ಗಳಿಸಿದರು. ನಂತರ ಡಾ.ಶ್ರೀರಾಮ್ ಅವರನ್ನು ಮಾಧುರಿ ವಿವಾಹವಾದರು.


ಇದನ್ನೂ ಓದಿ: ಕರೀನಾ ಕಪೂರ್‌ ಹೆಸರಿನ ಹಚ್ಚೆ ತೆಗೆಸಿದ ಸೈಫ್‌ ಅಲಿ ಖಾನ್..‌ ಡಿವೋರ್ಸ್ ಚರ್ಚೆಗೆ ಕಾರಣವಾಯ್ತು ಈ ಫೋಟೋ!   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.