ಇಹಲೋಕ ತ್ಯಜಿಸಿದ ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ದೀಕ್ಷಿತ್..!
Madhuri Dixit : ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ದೀಕ್ಷಿತ್ ನಿಧನರಾಗಿದ್ದಾರೆ. ಅವರ ವಯಸ್ಸು 90. ಈ ಕುರಿತು ಜಂಟಿ ಹೇಳಿಕೆಯಲ್ಲಿ, ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ. ಶ್ರೀರಾಮ್ ನೆನೆ, `ನಮ್ಮ ಪ್ರೀತಿಯ ಆಯಿ (ತಾಯಿ) ಸ್ನೇಹಲತಾ ಅವರು ಇಂದು ಬೆಳಿಗ್ಗೆ ಅವರ ಪ್ರೀತಿಪಾತ್ರರ ಸುತ್ತಲೂ ಶಾಂತಿಯುತವಾಗಿ ನಿಧನರಾದರು.` ಎಂದು ಹೇಳಿಕೊಂಡಿದ್ದು, ಸ್ನೇಹಲತಾ ದೀಕ್ಷಿತ್ ಅವರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ 3:00 ಗಂಟೆಗೆ ವರ್ಲಿ ಚಿತಾಗಾರದಲ್ಲಿ ನಡೆಯಲಿದೆ ಎಂದು ಮಾದ್ಯಮ ಮೂಲಗಳು ತಿಳಿಸಿವೆ.
Madhuri Dixit : ಮಾಧುರಿ ದೀಕ್ಷಿತ್ ಅಬೋಧ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ದಯಾವಾನ್ ಮತ್ತು ವರ್ದಿಯಂತಹ ಚಿತ್ರಗಳಲ್ಲಿನ ಕೆಲವು ಚಿಕ್ಕ ಹಾಗೂ ಪೋಷಕ ಪಾತ್ರಗಳ ಬಳಿಕ, ಅವರು ತೇಜ಼ಾಬ್ ಚಿತ್ರದಲ್ಲಿ ಮುಖ್ಯ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಂಡರು ಮತ್ತು ಈ ಚಿತ್ರ ಅವರನ್ನು ತಾರಾಪಟ್ಟಕ್ಕೇರಿಸುವುದರ ಜೊತೆಗೆ ಅವರಿಗೆ ಅವರ ಮೊದಲ ಫ಼ಿಲ್ಮ್‌ಫ಼ೇರ್ ನಾಮನಿರ್ದೇಶನ ತಂದುಕೊಟ್ಟಿತು. ನಂತರ, ಅವರು ರಾಮ್ ಲಖನ್, ಪರಿಂದಾ ತ್ರಿದೇವ್, ಕಿಶನ್ ಕನ್ಹೈಯಾ, ಮತ್ತು ಪ್ರಹಾರ್, ಚಿತ್ರಗಳನ್ನು ಒಳಗೊಂಡಂತೆ, ಅನೇಕ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದರು. ಅನಿಲ್ ಕಪೂರ್‌ರೊಂದಿಗೆ ಈ ಚಿತ್ರಗಳಲ್ಲಿ ಅಭಿನಯಿಸಿದ ನಂತರ, ಅವರಿಬ್ಬರ ಗೆಳೆತನ ಬೆಳೆಯಿತು.
ಮಾಧುರಿ ಇಂದ್ರ ಕುಮಾರ್‌ರ ಪ್ರಣಯ-ರೂಪಕ ದಿಲ್‌ನಲ್ಲಿ ಆಮಿರ್ ಖಾನ್‌ರೊಂದಿಗೆ ಅಭಿನಯಿಸಿದರು. ಅವರು, ಖಾನ್ ಪಾತ್ರವಹಿಸಿದ, ರಾಜಾನನ್ನು ಪ್ರೀತಿಸುವ, ಮತ್ತು ನಂತರ ಅವನನ್ನು ಮದುವೆಯಾಗಲು ಮನೆ ಬಿಟ್ಟುಹೋಗುವ, ಒಬ್ಬ ಶ್ರೀಮಂತ, ಅಹಂಕಾರದ ಯುವತಿ, ಮಧು ಮೆಹರಾಳ ಪಾತ್ರವಹಿಸಿದರು. ಈ ಚಿತ್ರ ಆ ವರ್ಷ ಭಾರತದಲ್ಲಿ ಭಾರಿ ಗಲ್ಲಾಪೆಟ್ಟಿಗೆ ಯಶಸ್ಸುಗಳ ಪೈಕಿ ಒಂದೆನಿಸಿತು, ಮತ್ತು ಮಾಧುರಿಯವರ ಅಭಿನಯ ಅವರಿಗೆ ಅವರ ವೃತ್ತಿಜೀವನದ ಮೊದಲ ಫ಼ಿಲ್ಮ್‌ಫ಼ೇರ್ ಅತ್ಯುತ್ತಮ ನಟಿ ಪ್ರಶಸ್ತಿ ತಂದುಕೊಟ್ಟಿತು.
ಮಾಧುರಿ ಧೀಕ್ಷೀತ್ ತಮ್ಮ ತಾಯಿಯ ಸಾವಿನ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ.
MC Stan: ಸಂಗೀತ ಕಾರ್ಯಕ್ರಮ ಮಧ್ಯದಲ್ಲಿ ನಿಲ್ಲಿಸಿದ ಎಂಸಿ ಸ್ಟಾನ್ ಮುಂದೇನಾಯಿತು? ನೀವೇ ನೋಡಿ...
ಮಾಧುರಿ ದೀಕ್ಷಿತ್ ಅವರನ್ನು ಚಲನಚಿತ್ರ ಉದ್ಯಮದಲ್ಲಿ ಧಕ್-ಧಕ್ ಹುಡುಗಿ ಎಂದು ಕರೆಯಲಾಗುತ್ತದೆ. ಮಾಧುರಿ ಅವರ ವೃತ್ತಿಜೀವನದ ಸಮಯದಲ್ಲಿ ಅವರ ಹೆಸರು ಅನೇಕ ನಟರೊಂದಿಗೆ ಸಂಬಂಧ ಹೊಂದಿತ್ತು, ಆದರೆ ಮಾಧುರಿ ದೀಕ್ಷಿತ್ ಮತ್ತು ಕ್ರಿಕೆಟಿಗ ಅಜಯ್ ಜಡೇಜಾ ಅವರ ಪ್ರೇಮಕಥೆಯ ಬಗ್ಗೆ ನಿಮಗೆ ತಿಳಿದಿದೆಯೇ. ಹೌದು... ನಟ ಮಾತ್ರವಲ್ಲದೆ ಕ್ರಿಕೆಟಿಗರೂ ಮನಸೋತಿದ್ದ ಈ ಚೆಲುವೆ, ಜೋಡಿಯಾಗುತ್ತಲೇ ಬೇರ್ಪಟ್ಟು ಪ್ರೇಮಕಥೆಯೊಂದು ಅಪೂರ್ಣವಾಗಿಯೇ ಉಳಿಯಿತು.
ಇದನ್ನೂ ಓದಿ-Sholay: ಹೇಮಾಮಾಲಿನಿ ಜೊತೆ ರೊಮ್ಯಾನ್ಸ್‌ಗಾಗಿ ಆ ಪಾತ್ರ ಮಾಡಲು ಒಪ್ಪಿದ್ರಂತೆ ಈ ನಟ.. ಇದೇ ಸಿನಿಮಾ!!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.