ನಯನತಾರಾಗೆ ಬಿಗ್ ಶಾಕ್ ನೀಡಿದ ಮದ್ರಾಸ್ ಹೈಕೋರ್ಟ್..! ನಟಿಗೆ ನೋಟಿಸ್ ಜಾರಿ.. ಏಕೆ ಗೊತ್ತೆ..?
HC notice to Nayanthara : ಲೇಡಿ ಸೂಪರ್ ಸ್ಟಾರ್ ನಯನತಾರಾ ವರ್ಸಸ್ ನಟ ಧನುಷ್ ವಿವಾದ ಕೆಲ ದಿನಗಳಿಂದ ಗದ್ದಲಕ್ಕೆ ತಿರುಗಿದ್ದು ಗೊತ್ತೇ ಇದೆ. ಇದರ ನಡುವೆ ನಟಿಗೆ ಮದ್ರಾಸ್ ಹೈಕೋರ್ಟ್ ಹೊಸ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ಘಟನೆ ಒಂದು ಪ್ರಮುಖ ಬೆಳವಣಿಗೆ ಎಂದೇ ಹೇಳಬಹುದು.. ಹೆಚ್ಚಿನ ವಿವರ ಇಲ್ಲಿದೆ..
Nayanthara-Dhanush copyright dispute : ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ವಿವಾದಗಳಿಂದ ನಯನಾ ತಾರಾ ಕೆಲ ದಿನಗಳಿಂದ ಸುದ್ದಿಯಲ್ಲಿರುವುದು ಗೊತ್ತೇ ಇದೆ. ಈ ಹಿಂದೆ ನಯನತಾರಾ ಮದುವೆಯಾದಾಗ ಚಪ್ಪಲಿ ಹಾಕಿಕೊಂಡು ತಿರುಮಲದ ಬೀದಿಗಳಲ್ಲಿ ತಿರುಗಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಅದೂ ಅಲ್ಲದೆ.. ಸ್ವಾಮಿಯ ದೇಗುಲದ ಆವರಣದಲ್ಲಿ ಫೋಟೋ ಶೂಟ್ ಮಾಡಿದ್ದು, ಭಕ್ತರ ಆಕ್ರೋಶಕ್ಕೆ ಗುರಿಯಾಗಿತ್ತು.
ಈ ಕ್ರಮದಲ್ಲಿ ವಿಘ್ನೇಶ್ ಶಿವನ್ ಜೊತೆ ಮದುವೆಯಾದ ನಂತರವೂ ನಯನ ಆಗಾಗ ಯಾವುದೋ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ನಟಿಯ ಜೀವನ ಚರಿತ್ರೆಯನ್ನಾಧರಿಸಿ "ಬಿಯಾಂಡ್ ದಿ ಫೇರಿಟೇಲ್" ಎಂಬ ಸಾಕ್ಷ್ಯಚಿತ್ರ ನಿರ್ಮಿಸಿರುವುದು ಗೊತ್ತೇ ಇದೆ.. ಇದೇ ವಿಚಾರವಾಗಿ ಧನುಷ್ ಮತ್ತು ನಯನತಾರ ಜಗಳ ಮುನ್ನೆಲೆಗೆ ಬಂದಿತ್ತು.
ಇದನ್ನೂ ಓದಿ:ಮೂಗುತಿ ಮುತ್ತು ಚಂದ.. ವಾಲೆ ಜುಮಕಿ ಗತ್ತು ಚಂದ..! ದೊಡ್ಮನೆ ಕಳೆ ಹೆಚ್ಚಿಸಿದ ಭವ್ಯಾ ಸೌಂದರ್ಯ.. ಫೊಟೋಸ್ ಇಲ್ಲಿವೆ..
ಹೌದು.. ನಯನತಾರಾ ತಮ್ಮ ಸಾಕ್ಷ್ಯಚಿತ್ರದಲ್ಲಿ ʼನಾನ್ ರೌಡಿ ತಾನ್ʼ ಸಿನಿಮಾದ ಕೆಲವು ದೃಶ್ಯಗಳನ್ನು ಬಳಸಿಕೊಂಡಿದ್ದರು. ಈ ಸಿನಿಮಾದ ನಿರ್ಮಾಪಕ, ನಟ ಧನುಷ್ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ಅನುಮತಿಯಿಲ್ಲದೆ ಮೂರು ಸೆಕೆಂಡ್ ಕ್ಲಿಪ್ ಬಳಸಿದ್ದಕ್ಕಾಗಿ ಹತ್ತು ಕೋಟಿ ಪಾವತಿಸುವಂತೆ ಲೀಗಲ್ ನೋಟಿಸ್ ಸಹ ಕಳುಹಿಸಿದ್ದರು. ಇದರಿಂದ ಇಬ್ಬರ ನಡುವೆ ಗಲಾಟೆ ಶುರುವಾಗಿತ್ತು.
ಮತ್ತೊಂದೆಡೆ, ಈ ಘಟನೆಯ ಬಗ್ಗೆ ಧನುಷ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್ ನಯನತಾರಾ ಮತ್ತು ನೆಟ್ ಫ್ಲಿಕ್ಸ್ ಗೆ ಜನವರಿ 8ರೊಳಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ. ಸದ್ಯ ಈ ವಿಚಾರ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.