Trisha Vs Mansoor Ali Khan: ಕಳೆದ ಎರಡು ತಿಂಗಳ ಹಿಂದೆ ತೆರೆಕಂಡ ಲಿಯೋ ಸಿನಿಮಾದಲ್ಲಿ ವಿಜಯ್ ಮತ್ತು ತ್ರಿಶಾ, ಜೊತೆಗೆ  ಮನ್ಸೂರ್ ಅಲಿ ಖಾನ್ ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು. ಲಿಯೋ ಚಿತ್ರದ ಪ್ರಚಾರ ಸಂದರ್ಶನದಲ್ಲಿ ಮನ್ಸೂರ್ ಅಲಿ ಖಾನ್ ಮಾಡಿದ ಅಸಹ್ಯಕರ ಹೇಳಿಕೆಗಳಿಗೆ ಈ ಪ್ರಕರಣವು ಸಂಬಂಧಿಸಿದೆ. ಸಿನಿಮಾದಲ್ಲಿ "ಅತ್ಯಾಚಾರದ ದೃಶ್ಯಗಳು" ಇಲ್ಲದಿದ್ದಕ್ಕಾಗಿ ನಾನು ನಿರಾಶೆಗೊಂಡಿದ್ದೇನೆ ಎಂದು ಹೇಳಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆಗೆ ವ್ಯಕ್ತವಾಗಿದ್ದು, ರಾಜಕಾರಣಿಯಾಗಿರುವ ರೋಜಾ ಮತ್ತು ಖುಷ್ಬೂ ಇದರ ಬಗ್ಗೆಯೂ  ಇದೇ ರೀತಿಯ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ. ಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್, ಕಾರ್ತಿಕ್ ಸುಬ್ಬರಾಜ್, ಚಿನ್ಮಯಿ ಶ್ರೀಪಾದ, ಮಾಳವಿಕಾ ಮೋಹನನ್, ಮತ್ತು ಚಿರಂಜೀವಿ ಮುಂತಾದ ಚಲನಚಿತ್ರ ನಟರು ನಟಿಯರಿಗೆ ಬೆಂಬಲ ನೀಡಿದ್ದರು. 


COMMERCIAL BREAK
SCROLL TO CONTINUE READING

ಮನ್ಸೂರ್ ಅಲಿ ಖಾನ್ ನಡೆಯನ್ನು ಮದ್ರಾಸ್ ಹೈಕೋರ್ಟ್ ಖಂಡಿಸಿದ್ದು, ನಟಿ ತ್ರಿಶಾ ಮತ್ತು ನಟ ಮನ್ಸೂರ್ ಅಲಿ ಖಾನ್ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ಸೂಚನೆಯನ್ನು ನೀಡಿದೆ. ತ್ರಿಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಮನ್ಸೂರ್ ಅಲಿ ಖಾನ್ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಬೇಕು ಎಂದು ಆದೇಶ ನೀಡಿದೆ. ಇದರ ಜೊತೆಗೆ ಸಾರ್ವಜನಿಕ ವ್ಯಕ್ತಿಗಳು ಸಾರ್ವಜನಿಕ ನಡವಳಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಬೇಕು ಎಂದು ನ್ಯಾಯಾಲಯ ಮುಖ್ಯವಾಗಿ ಸೂಚನೆ ನೀಡಿದೆ. 


ಇದನ್ನೂ ಓದಿ:  ಮದುವೆಯಿಲ್ಲದೆ 45ನೇ ವಯಸ್ಸಿನಲ್ಲಿ ತಾಯಿಯಾದ ʼದಂಗಲ್‌ʼ ಸಿನಿಮಾ ನಟಿ..! ಫ್ಯಾನ್ಸ್‌ ಶಾಕ್‌


ಬಳಿಕ ಈ ವಿವಾದ ಕಾನೂನು ಸಮರವಾಗಿ ಬದಲಾಗಿದ್ದು, ಮನ್ಸೂರ್ ಅಲಿ ಖಾನ್ ಅವರಿಂದ ಕ್ಷಮೆಯಾಚಿಸುವಂತೆ ಒತ್ತಾಯಿಸಲಾಯಿತು. ರಾಷ್ಟ್ರೀಯ ಮಹಿಳಾ ಆಯೋಗದ ಶಿಫಾರಸಿನ ಮೇರೆಗೆ ಚೆನ್ನೈನ ಮಹಿಳಾ ಪೊಲೀಸ್ ಠಾಣೆಯಲ್ಲಿ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಬಳಿಕ ನಟ, ತ್ರಿಶಾಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು. ಇದಾದ ನಂತರ ತ್ರಿಶಾ ವಿರುದ್ಧ ಮಾನನಷ್ಟ ಮೊಕದಮೆ ಹೂಡಿದ್ದರು. ಡಿಸೆಂಬರ್ 11 ರಂದು, ಹೈಕೋರ್ಟ್ ಮನ್ಸೂರ್ ಭಾಷಣಕ್ಕೆ ತರಾಟೆಗೆ ತೆಗೆದುಕೊಂಡಿದ್ದು, "ನೀವು ನಟರಾದಾಗ, ಯುವಕರು ನಿಮ್ಮನ್ನು ಮಾದರಿಯಾಗಿ ನೋಡುತ್ತಾರೆ. ನೀವು ಈ ರೀತಿ ಸಂಸ್ಕಾರಹೀನವಾಗಿ ವರ್ತಿಸುವುದು ಸರಿಯೇ?" ಎಂದು ಪ್ರಶ್ನಿಸಿರುವ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂಬುದರ ಕುರಿತು ನಟನಿಗೆ ಸಲಹೆ ನೀಡುವಂತೆ ಮನ್ಸೂರ್ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ. 


ನಟಿ ತ್ರಿಶಾ ವಿರುದ್ಧ ನಟ ಮನ್ಸೂರ್ ಅಲಿ ಖಾನ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಡಿಸೆಂಬರ್‌ 11 ರಂದು ಸೋಮವಾರ ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದು, ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್, ಕೇಸ್ ಹಾಕಬೇಕಿದ್ದು ನೀವಲ್ಲ, ನಿಮ್ಮ ವಿರುದ್ಧ ತ್ರಿಶಾ ಮೊಕದ್ದಮೆ ಹೂಡಬೇಕಿತ್ತು ಎಂದು ಮನ್ಸೂರ್ ಅಲಿ ಖಾನ್  ಛೀಮಾರಿ ಹಾಕಿದೆ. ಇದು ಎರಡನೇ ಬಾರಿ ಮನ್ಸೂರ್ ಅಲಿ ಖಾನ್ ನ್ಯಾಯಾಲಯದಿಂದ ಟೀಕೆಗೆ ಒಳಗಾಗಿರುವುದು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.