viral Girl Monalisa: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ 2025 ಚರ್ಚೆಯ ಬಿಸಿ ವಿಷಯವಾಗಿದೆ. ಮಹಾ ಕುಂಭಮೇಳವನ್ನು ವೀಕ್ಷಿಸಲು ಭಾರತದಿಂದ ಮಾತ್ರವಲ್ಲದೆ ವಿದೇಶದಿಂದಲೂ ಅನೇಕ ಜನರು ಬರುತ್ತಾರೆ. ಇದಲ್ಲದೇ ಬಾಲಿವುಡ್‌ನಿಂದ ಕಿರುತೆರೆಯ ಅನೇಕ ಸೆಲೆಬ್ರಿಟಿಗಳು ಕೂಡ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಅಂತೆಯೇ ಈ ಮಹಾ ಕುಂಭಮೇಳದಲ್ಲಿ ಅನೇಕ ಧರ್ಮ ಪ್ರಚಾರಕರು, ಸಂತರು ಭಾಗವಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಆದರೆ ಸನ್ಯಾಸಿಗಳ ಹೊರತಾಗಿ, 2025 ರ ಮಹಾ ಕುಂಭಮೇಳವು ಹೆಚ್ಚು ಚರ್ಚೆಯಾಗಿದೆ. ಹರ್ಷ ರಿಚಾರಿಯಾ ಮತ್ತು IITAN ಬಾಬಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಾರೆ. ಅವೆಲ್ಲವನ್ನೂ ಲೆಕ್ಕಿಸದೆ ಮಾಲೆ ಮಾರುತ್ತಿದ್ದ ಮೋನಾಲಿಸಾ ವೈರಲ್ ಆಗಿದ್ದಾಳೆ. ಇಗ ಸೋಷಿಯಲ್ ಮಿಡಿಯಾ ತೆರೆದರೆ ಸಾಕು, ಕಣ್ಣಿಗೆ ಮೋನಾಲೀಸಾ ಕಾಣಿಸುತ್ತಾಳೆ.


ಸೋಷಿಯಲ್ ಮೀಡಿಯಾದಲ್ಲಿ ಟಾಕ್ ಆಫ್ ದಿ ಟೌನ್ ಆಗಿರುವ ಮೋನಾಲಿಸಾಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಕೆಲ ಸಮಯದ ಹಿಂದೆ ತೆಗೆದ ಮೋನಾಲಿಸಾ ಅವರ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಅಚ್ಚರಿಯ ವಿಷಯವೆಂದರೆ ಮೋನಾಲಿಸಾ ಮೇಕಪ್ ಇಲ್ಲದೆಯೇ ಇಷ್ಟು ಆಕರ್ಷಕವಾಗಿ ಕಾಣುವುದು ಹೇಗೆ ಎಂಬುದು. 


ಇತ್ತೀಚೆಗೆ ಮೋನಾಲಿಸಾ ಅವರ ಅನೇಕ ಚಿತ್ರಗಳು ಮತ್ತು ವೀಡಿಯೊಗಳನ್ನು AI ತಂತ್ರಜ್ಞಾನದಿಂದ ತಮಗೆ ಬೇಕಾದಂತೆ ರಚಿಸಿ ಜನ ತಮ್ಮ ಸೋಷಿಯಲ್‌ ಮಿಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ಧಾರೆ. ಅನೇಕ ಸೆಲೆಬ್ರಿಟಿಗಳ ಎಡಿಟ್ ಮಾಡಿದ ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಿರುವಂತೆಯೇ, ಮೋನಾಲಿಸಾ ಅವರ ವೀಡಿಯೊ ಕೂಡ ವೈರಲ್ ಆಗುತ್ತಿದೆ. ಸದ್ಯ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮೋನಾಲೀಸಾ ಥೇಟ್‌ ಐಶ್ವರ್ಯ ರೈ ಅವರಂತೆಯೇ ಕಾಣುತ್ತಿದ್ದಾರೆ, ಸದ್ಯ ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು, ನೀನ್ಯಾರಮ್ಮಾ ಐಶ್ವರ್ಯ ರೈ ತಂಗೀನಾ ಎಂದು ಪ್ರಶ್ನಿಸುತ್ತಿದ್ದಾರೆ. 



 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.