Mahakumbh Viral Girl Monalisa:ಮಹಾಕುಂಭದಲ್ಲಿ ಹಾರ ಮಾರುತ್ತಿದ್ದ ಹುಡುಗಿ ಮೊನಾಲಿಸಾ ತನ್ನ ಸೌಂದರ್ಯದ ಕಾರಣಕ್ಕೆ ಸುದ್ದಿಯಾಗಿರುವುದು ಗೊತ್ತೇ ಇದೆ.  ಮಹಾಕುಂಭದ ಆರಂಭದಿಂದಲೂ, ಮೊನಾಲಿಸಾ ತನ್ನ ಕಂಗಳ ಕಾರಣದಿಂದಲೇ ಸುದ್ದಿಯಾದವಳು. ನಂತರ ಆಕೆಗೆ ಸಿನಿಮಾ ಆಫರ್‌ಗಳು ಬರಬಹುದು ಎನ್ನುವ ಮಾತು ಕೇಳಿ ಬಂತು. ಇದೀಗ ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಮೊನಾಲಿಸಾ ಮನೆಗೆ ಭೇಟಿ ನೀಡಿದ್ದು, ಸಿನಿಮಾ ಆಫರ್ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಫೆಬ್ರವರಿಯಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭ : 
ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಈ ಭೇಟಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಜೊತೆ ಮೊನಾಲಿಸಾ ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮೊನಾಲಿಸಾಗೆ ಆಫರ್ ನೀಡಿರುವ ಬಗ್ಗೆ ವಿಡಿಯೋದಲ್ಲಿ ಸನೋಜ್ ಮಿಶ್ರಾ ಹೇಳಿಕೊಂಡಿದ್ದಾರೆ. ಇದೊಂದು ಕಡಿಮೆ ಬಜೆಟ್‌ ಸಿನಿಮಾವಾಗಿದ್ದು, ಫೆಬ್ರವರಿಯಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಅಕ್ಟೋಬರ್‌ನಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದಿದ್ದಾರೆ. 


 


 

 

 

 



 

 

 

 

 

 

 

 

 

 

 

A post shared by Sanoj Mishra (@sanojmishra)


ಇದನ್ನೂ ಓದಿ : ಗೋವಾದಲ್ಲಿ ಸುತ್ತಾಟ.. ಬಿಜೆಪಿ ನಾಯಕನ ಪುತ್ರನೊಂದಿಗೆ ಖ್ಯಾತ ಯುವ ನಟಿ ಡೇಟಿಂಗ್!‌ ಇಂಡಸ್ಟ್ರಿಯಲ್ಲಿ ಬಿರುಗಾಳಿ..


 ಮಣಿಪುರವನ್ನು ಆಧರಿಸಿದ ಸಿನಿಮಾ : 
ಮಣಿಪುರ ದೆಹಲಿ ಮತ್ತು ಲಂಡನ್‌ನಲ್ಲಿ ಈ ಚಿತ್ರದ ಶೂಟಿಂಗ್ ನಡೆಯಲಿದೆ. ಈ ಶೂಟಿಂಗ್ ಫೆಬ್ರವರಿ 8 ರಿಂದ ಪ್ರಾರಂಭವಾಗಲಿದೆ. ಇದರಲ್ಲಿ ರಾಜ್‌ಕುಮಾರ್ ರಾವ್ ಅವರ ಹಿರಿಯ ಸಹೋದರ ಅಮಿತ್ ರಾವ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಮಣಿಪುರದ ಹಲವು ದೊಡ್ಡ ತಾರೆಯರೂ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಈ ಪಾತ್ರವನ್ನು ನಿರ್ವಹಿಸಲಿದ್ದಾರೆ ಮೊನಾಲಿಸಾ : 
ಮೊನಾಲಿಸಾ ಉತ್ತರ ಭಾರತೀಯ ಸೇನಾ ಅಧಿಕಾರಿಯ ಮಗಳ ಪಾತ್ರವನ್ನು ನಿರ್ವಹಿಸಲಿದ್ದಾರೆ. ತನ್ನ ತಂದೆಗಾಗಿ ಹಂಬಲಿಸುವ ಇಂಫಾಲ್‌ನಲ್ಲಿ ವಾಸಿಸುವ ಹೆಣ್ಣು ಮಗಳ ಪಾತ್ರ ಇವರದ್ದಾಗಿರಲಿದೆ. ಡಿಫೆನ್ಸ್ ಗೆ ಸೇರುವುದು ಈಕೆಯ ಕನಸು, ಆದ್ರೆ ಈಕೆ ಡಿಫೆನ್ಸ್ ಗೆ ಸೇರುವುದು ಸಾಧ್ಯವಾಗುತ್ತದೆಯೋ ಇಲ್ಲವೋ ಎನ್ನುವುದೇ ಈ ಕತೆಯ ಸಾರಾಂಶ.  


ಇದನ್ನೂ ಓದಿ : ʼನಾನು ಅವನನ್ನು 15 ವರ್ಷಗಳಿಂದ ಪ್ರೀತಿಸುತ್ತಿದ್ದೇನೆ..ʼ ಕೊನೆಗೂ ಮದುವೆಯಾಗುವ ಹುಡುಗನನ್ನು ಪರಿಚಯಿಸಿದ ಅಪ್ಪು ಸಿನಿಮಾ ನಟಿ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.