Mahesh Babu got Animal movie offer : ರಣಬೀರ್ ಕಪೂರ್ ಸದ್ಯ ಅನಿಮಲ್ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಚಿತ್ರದ ಪ್ರಚಾರಕ್ಕಾಗಿ ರಣಬೀರ್ ಹೈದರಾಬಾದ್ ಗೆ ಆಗಮಿಸಿದ್ದರು. ಅನಿಮಲ್ ಪ್ರಮೋಷನ್ ಈವೆಂಟ್‌ನಲ್ಲಿ ರಣಬೀರ್ ಕಪೂರ್ ಅವರನ್ನು ಮಹೇಶ್ ಬಾಬು ಸಾಕಷ್ಟು ಹೊಗಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ರಥಮ್‌ ಮೊದಲ ರಾತ್ರಿ ಫೋಟೋ ವೈರಲ್.. 'ಫಸ್ಟ್ ನೈಟ್ ವಿತ್ ದೆವ್ವ' ಎಂದ ಒಳ್ಳೆ ಹುಡುಗ!? 


ಇದೀಗ ಸಿನಿರಂಗದಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ಮಹೇಶ್ ಬಾಬುಗೆ 'ಅನಿಮಲ್' ಸಿನಿಮಾ ಆಫರ್‌ ಬಂದಿತ್ತು ಎನ್ನಲಾಗಿದೆ. ಈ ವದಂತಿಗಳ ಬಗ್ಗೆ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಪ್ರತಿಕ್ರಿಯಿಸಿದ್ದಾರೆ. ಮಹೇಶ್ ಬಾಬುಗೆ ಸಿನಿಮಾ ಮಾಡಲು ಆಫರ್ ಮಾಡಿದ್ದೆ. ಆದರೆ ಅದು ಅನಿಮಲ್ ಅಲ್ಲ. ಆ ಸಿನಿಮಾ ಹೆಸರು ಡೆವಿಲ್. ಮಹೇಶ್ ಚಿತ್ರವನ್ನು ತಿರಸ್ಕರಿಸಿಲ್ಲ. ಆದರೆ ಕಾರಣಾಂತರಗಳಿಂದ ಅದನ್ನು ಪೂರ್ಣಗೊಳಿಸಲಾಗಲಿಲ್ಲ ಎಂದು ಹೇಳಿದ್ದಾರೆ. 


ಅದೇ ಸಮಾರಂಭದಲ್ಲಿ ಮಹೇಶ್ ಬಾಬು ಅವರು ರಣಬೀರ್ ಕಪೂರ್ ಅವರನ್ನು ಭಾರತದ ಅತ್ಯುತ್ತಮ ನಟ ಎಂದು ಕರೆದರು. ತಾನು ರಣಬೀರ್ ಕಪೂರ್ ಅವರ ದೊಡ್ಡ ಅಭಿಮಾನಿ ಎಂದು ಮಹೇಶ್‌ ಬಾಬು ಹೇಳಿದ್ದಾರೆ. ರಣಬೀರ್ ಕಪೂರ್ ಅವರ 'ಅನಿಮಲ್' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಡಿಸೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. 


ಇದನ್ನೂ ಓದಿ: Shivanna: ಹಿರಿಯ ನಟಿ ಲೀಲಾವತಿ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ ಡಾ.ರಾಜ್ ಪುತ್ರ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.