ನವದೆಹಲಿ:  ಅರ್ಬಾಜ್ ಖಾನ್ ಜೊತೆಗೆ ವಿಚ್ಚೇದನ ಪಡೆದ ನಂತರ ಅರ್ಜುನ್ ಕಪೂರ್ ಜೊತೆ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಮಲೈಕಾ ಅರೋರಾ ಈಗ ಒಂದು ಹೆಜ್ಜೆ ಮುಂದೆ ಹೋಗಿ ತನಗಿಂತಲೂ 12 ವರ್ಷ ಕಿರಿಯನಾಗಿರುವ ಅರ್ಜುನ್ ಕಪೂರ್ ನನ್ನು ವರಿಸಲಿದ್ದಾರೆ ಎನ್ನಲಾಗಿದೆ.



COMMERCIAL BREAK
SCROLL TO CONTINUE READING

ಇತ್ತಿಚೆಗಷ್ಟೇ ಜೊತೆಯಾಗಿ ಹಾಲಿಡೇ ಟೂರ್ ಗಾಗಿ ಮಾಲ್ಡಿವ್ಸ್ ಗೆ ಹೋಗಿದ್ದ ಜೋಡಿಗಳು ಈಗ ವಾಪಸ್ ಬಂದಿದ್ದಾರೆ.ಈಗ ಸೋಮವಾರದಂದು ಮೈಲೈಕಾ ಆರೋರಾ ಮತ್ತು ಅರ್ಜುನ್ ಕಪೂರ್ ರ ಅವರ ಏರ್ ಪೋರ್ಟ್ ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.


ಅಚ್ಚರಿ ಎಂದರೆ ಈ ಜೋಡಿಗಳು ಇದುವರೆಗೆ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿಲ್ಲ.ಆದರೂ ಕೂಡ ಈ ಜೋಡಿಗಳು ಜೊತೆಯಾಗಿ ಅಲ್ಲಿಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಾತ್ರ ಹಲವು ರೂಮರ್ ಗಳಿಗೆ ಕಾರಣವಾಗಿದೆ.ಈಗ ವರದಿಗಳು ಪ್ರಕಾರ ಎಪ್ರಿಲ್ 19 ರಂದು ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ.


ಅರ್ಜುನ್ ಕಪೂರ್ ಇತ್ತೀಚಿಗೆ ನಮಸ್ತೆ ಲಂಡನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಪಾಣಿಪಟ್ ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ತಯಾರಿ ನಡೆಸುತ್ತಿದ್ದಾರೆ.