Malaika Arora: ಖಾಸಗಿ ಅಂಗಾಂಗಗಳ ಫೋಟೋ ಕ್ಲಿಕ್ಕಿಸಿದ ಪಾಪರಾಜಿಗಳ ಮೇಲೆ `ಬಾಲಿವುಡ್ ಮುನ್ನಿ` ಕೆಂಡಾಮಂಡಲ
Malaika Arora: ಈ ಕುರಿತು ಮಾತನಾಡಿರುವ ಮಲೈಕಾ ಆರೋರಾ, ಯಾವ ರೀತಿ ಪಾಪರಾಜಿಗಳು ಎಲ್ಲಾ ಕಡೆಗೆ ಕ್ಯಾಮಾರಾಗಳನ್ನು ನಿಯೋಜಿಸಿ ತನ್ನ ಫೋಟೋ ಕ್ಲಿಕ್ಕಿಸಲು ಯತ್ನಿಸುತ್ತಾರೆ ಮತ್ತು ಅದು ಅವರನ್ನು ತೀರಾ ಕೆರಳಿಸುತ್ತದೆ ಎಂದು ಹೇಳಿದ್ದಾಳೆ.
Malaika Arora: ಬಾಲಿವುಡ್‌ನ 'ಛಯ್ಯಾ-ಛಯ್ಯಾ-ಗರ್ಲ್' ಅಂದರೆ ಮಲೈಕಾ ಅರೋರಾ ಇತ್ತೀಚಿನ ದಿನಗಳಲ್ಲಿ ತನ್ನ 'ಮೂವಿಂಗ್ ಇನ್ ವಿತ್ ಮಲೈಕಾ' ಕಾರ್ಯಕ್ರಮದ ಹಿನ್ನೆಲೆ ಭಾರಿ ಸುದ್ದಿಯಲ್ಲಿದ್ದಾಳೆ. ಈ ಕಾರ್ಯಕ್ರಮದ ಪ್ರತಿ ಸಂಚಿಕೆಯಲ್ಲಿ, ಅವಳು 'ಅಪ್ನೆ ದಿಲ್ ಕಿ ಬಾತ್' ಹೇಳುವುದನ್ನು ನೀವು ಕೇಳಬಹುದು. ಪ್ರಸ್ತುತ ಈ ಕಾರ್ಯಕ್ರಮದಲ್ಲಿ ಪಾಪರಾಜಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ಮಲೈಕಾ, ಖಾಸಗಿ ಭಾಗಗಳ ಫೋಟೋ ಕ್ಲಿಕ್ಕಿಸುವವ ಪಾಪರಾಜಿಗಳ ಕ್ಲಾಸ್ ತೆಗೆದುಕೊಂಡಿದ್ದಾರೆ. ಪಾಪರಾಜಿಗಳು ತನ್ನ ಫೋಟೋಗಳನ್ನು ಹೇಗೆ ಕ್ಲಿಕ್ಕಿಸುತ್ತಾರೆ ಮತ್ತು ಅಂತಹ ವರ್ತನೆಗಳು ತಮ್ಮ ಮತ್ತು ತಮ್ಮ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಮಲೈಕಾ ಹೇಳಿದ್ದಾಳೆ. ಇದರೊಂದಿಗೆ ತಮ್ಮ ಬಟ್ಟೆ ಬಗ್ಗೆ ಕಾಮೆಂಟ್ ಮಾಡಿದವರಿಗೂ ಕೂಡ ಮಲೈಕಾ ಉತ್ತರ ನೀಡಿದ್ದಾಳೆ.
ಇದನ್ನೂ ಓದಿ-Rashmika Oops Moment! ಕುಳಿತುಕೊಳ್ಳುವಾಗ ಈ ಕಾರಣಕ್ಕೆ ಮುಜುಗರಕ್ಕೊಳಗಾದ ಕಿರಿಕ್ ಬೆಡಗಿ
"ಜನರು ಈ ರೀತಿಯ ಫೋಟೋಗಳನ್ನು ಕ್ಲಿಕ್ಕಿಸುತ್ತಾರೆ"
ವಾಸ್ತವದಲ್ಲಿ, ಸ್ಟಾಂಡ್ ಅಪ್ ಕಾಮಿಡಿಯನ್ ಆಗಿರುವ ಭಾರತಿ ಸಿಂಗ್ ಇತ್ತೀಚೆಗೆ ಮಲೈಕಾ ಅರೋರಾ ಅವರ ಕಾರ್ಯಕ್ರಮಕ್ಕೆ ತಲುಪಿದ್ದಳು. ಭಾರತಿ ಜೊತೆಗೆ ಸಂವಾದ ನಡೆಸುವಾಗ ಮಲೈಕಾ ಪಾಪರಾಜಿಗಳ ಮೇಲೆ ತನ್ನ ಕೋಪವನ್ನು ಹೊರಹಾಕಿದ್ದಾಳೆ. ಈ ಕುರಿತು ಮಾತನಾಡಿರುವ ಮಲೈಕಾ ಅರೋರಾ, 'ಯಾರಾದರು ನನಗೆ ತೊಂದರೆ ನೀಡುವವರೆಗೂ ನಾನು ಯಾರನ್ನೂ ನಿಂದಿಸಿಲ್ಲ. ಆದರೆ ನನಗೆ ಕಿರಿಕಿರಿಯುಂಟುಮಾಡುವ ವಿಷಯವೆಂದರೆ ನೀವು ಫೋಟೋತೆಗೆದುಕೊಳ್ಳುತ್ತಿದ್ದರೆ, ಅವುಗಳ ಉದ್ದೇಶ ಇದಾಗಿರಬೇಕು (ಮುಖದತ್ತ ಸನ್ನೆ ಮಾಡುತ್ತಾ). ಆದರೆ ಅದರ ಬದಲು ಅವರು ನನ್ನ ಎದೆ ಮತ್ತು ಸೊಂಟ, ಸೊಂಟದ ಹಿಂಭಾಗದ ಫೋಟೋಗಳನ್ನು ಕ್ಲಿಕ್ಕಿಸುತ್ತಾರೆ. ಕ್ಯಾಮೆರಾ ಅತ್ತಿತ್ತ ಹೋಗುತ್ತದೆ ಮತ್ತು ನನಗೂ ಅದರಿಂದ ಕಿರಿಕಿರಿ ಉಂಟಾಗುತ್ತದೆ' ಎಂದಿದ್ದಾಳೆ.
ಇದನ್ನೂ ಓದಿ-Year Ender 2022 : ಈ ವರ್ಷದ ಟಾಪ್ ಹಾಡುಗಳ ಪಟ್ಟಿಯಲ್ಲಿ ʻರಾ ರಾ ರಕ್ಕಮ್ಮʼ
'ಖಾಸಗಿ ಅಂಗಾಂಗಗಳ ಮೇಲೆ ಏಕೆ ನಿಮ್ಮ ದೃಷ್ಟಿ?'
'ಈ ಜನರು ನನ್ನ ಖಾಸಗಿ ಅಂಗಗಳ ಮೇಲೆ ಏಕೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ ಎಂದು ಮಲೈಕಾ ಪ್ರಶ್ನಿಸಿದ್ದಾರೆ. ನನ್ನ ದೇಹದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಆದರೆ, ನೀವು ಅದನ್ನು ತೋರಿಸಲು ಬಯಸದಿದ್ದರೆ ಎಲ್ಲವನ್ನೂ ಮುಚ್ಚುವ ಬಟ್ಟೆಗಳನ್ನು ಧರಿಸಿ ಎಂದು ಅವರು ಹೇಳುತ್ತಾರೆ. ಏಕೆ? ನಾನು ಈ ರೀತಿಯ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತೇನೆ, ನಿಮ್ಮ ಸಮಸ್ಯೆ ಏನು? ನಾನು ಧರಿಸಲು ಇಷ್ಟಪಡುವ ಬಟ್ಟೆಗಳನ್ನು ನಾನು ಧರಿಸೆಯೇ ತೀರುತ್ತೇನೆ'. ತನ್ನಂತೆಯೇ ತನ್ನ ಕುಟುಂಬ ಸದಸ್ಯರು ಕೂಡ ಅವರನ್ನು ಎದುರಿಸಬೇಕಾಗುತ್ತದೆ ಮತ್ತು ಅದು ಸಹಿಸುವುದು ಕಷ್ಟಕರ ಎನಿಸುತ್ತದೆ ಎಂದು ಮಲೈಕಾ ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.