ಕನ್ನಡ ಕಿರುತೆರೆಯಲ್ಲಿ ಸದ್ಯ ಟಾಪ್‌ ಲಿಸ್ಟ್‌ನಲ್ಲಿ ಸ್ಥಾನ ಪಡೆದಿರುವ ಧಾರವಾಹಿಗಳ ಪೈಕಿ ಹಿಟ್ಲರ್‌ ಕಲ್ಯಾಣ ಕೂಡಾ ಒಂದು.. ಈ ಧಾರವಾಹಿ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ. ಕಥೆ, ಸಂಭಾಷಣೆ, ಅದರಲ್ಲೂ ಪ್ರತಿಯೊಂದು ಪಾತ್ರಕ್ಕೂ ತನ್ನದೆ ಆದ ಮಹತ್ವವನ್ನು ನೀಡಿದ್ದಾರೆ. ಅಬ್ಬಬ್ಬ ಈ ಎಲ್ಲದರ ಜೊತೆಗೆ ಮುಖ್ಯವಾಗಿ ಹೇಳಬೇಕು ಅಂದ್ರೆ ಎಜೆ ಹಾಗೂ ಹಿಟ್ಲರ್‌ ಜೋಡಿ. ಸಿಡುಕು ಹಾಗೂ ಯಾವಾಗಲೂ ಡಿಸಿಪ್ಲೇನ್ ಅನ್ನುವ ಎಜೆ ಒಂದೆಡೆಯಾದ್ರೆ. ಎಜೆ ಕ್ಯಾರೆಕ್ಟರ್‌ಗೆ ಪಕ್ಕಾ ಆಪೋಸಿಟ್‌ ಹುಡುಗಿ ನಮ್ಮ ಯಡವಟ್ಟು ಲೀಲಾ. ಅಯ್ಯೊ ಲೀಲಾ ಮಾಡುವ ಅವಾಂತರ ಒಂದಲ್ಲಾ ಎರಡಲ್ಲಾ. 


COMMERCIAL BREAK
SCROLL TO CONTINUE READING

ಸದ್ಯ ಈ ಎರಡು ವಿಭಿನ್ನ ಪೋಲ್‌ಗಳು ಮದುವೆಯಾಗಿ ಆರಮಾಗಿ ಇಷ್ಟು ದಿನ ಇದ್ದರು. ಲೀಲಾ ಎಜೆ ನಡುವೆ ಎಷ್ಟು ಜಗಳ ಕಿತ್ತಾಟವಾದ್ರೂ ಕೊನೆಯಲ್ಲಿ ಒಂದಾಗುತ್ತಿದ್ದರು. ಈ ಪ್ರೀತಿಯನ್ನು ನೋಡೊಕೆ ಆಗದೆ. ಎಜೆ ಮೂವರು ಸೊಸೆಯಂದಿರು ಸೇರಿ ಪಿತೂರಿ ಮಾಡಿದ್ದಾರೆ. ಹೌದು ಲೀಲಾಗೆ ಒಂದು ಕೋರಿಯರ್‌ ಬರಬೇಕಿತ್ತು. ಆದ್ರೆ ಆ ಕೋರಿಯರ್‌ನಲ್ಲಿ ಡಿವೋರ್ಸ್‌ ಪತ್ರವಿದ್ದು, ಆ ಪತ್ರ ಎಜೆ ಕೈ ಸೇರಿದೆ. ಡಿವೋರ್ಸ್‌ ಲೆಟರ್‌ ನೋಡುತ್ತಿದ್ದಂತೆ ಎಜೆಗೆ ಶಾಕ್‌ ಆಗಿದೆ. ಮುಂದೇನಾಗತ್ತೆ ಎಂಬ ಕುತೂಹಲ ಸದ್ಯ ಹಿಟ್ಲರ್‌ ಕಲ್ಯಾಣದಲ್ಲಿ ಮನೆಮಾಡಿದೆ.


ಇದನ್ನೂ ಓದಿ: ಇಂಡಿಯನ್ ಸೈನ್ ಲಾಂಗ್ವೇಜ್ ನಲ್ಲಿ ಬಿಡುಗಡೆಯಾದ ಮೊದಲ ಚಿತ್ರ.. ZEE5 ನಿಂದ ವಿಶ್ವದಾಖಲೆ!


ಇದೀಗ ಮತ್ತೊಂದು ವಿಚಾರ ಅಂದ್ರೆ ಹಿಟ್ಲರ್‌ ಕಲ್ಯಾಣ ಧಾರವಾಹಿಯಲ್ಲಿ ವಿಭಿನ್ನ ನಟಾನ ಶಕ್ತಿಯಿಂದ ಪ್ರೇಕ್ಷಕರ ಮನಗೆದ್ದು ಸದ್ಯ ಸಖತ್‌ ಟ್ರೆಂಡ್‌ ಕ್ರಿಯೇಟ್‌ ಮಾಡಿರುವ ನಟಿ ಲೀಲಾ ಅಲಿಯಾಸ್‌ ಮಲೈಕ ವಸುಪಾಲ್‌. ಸದ್ಯ ಈ ನಟಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌. ಹೌದು  ಮಲೈಕ ವಸುಪಾಲ್‌ ಸ್ಮಾಲ್‌ ಸ್ಕ್ರೀನ್‌ನಿಂದ ಬಿಗ್‌ ಸ್ಕ್ರೀನ್‌ಗೆ ಪ್ರವೇಶ ಮಾಡಲಿದ್ದಾರೆ. ಕೆಲವು ದಿನಗಳ ಹಿಂದೆ ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ಮೇಘಾ ಶೆಟ್ಟಿ, ನನ್ನರಸಿ ರಾಧೆ ಖ್ಯಾತಿಯ ಇಂಚರ ಅಲಿಯಾಸ್‌ ಕೌಸ್ತಿಬ ಮಣಿ ಹೀಗೆ ಒಂದಿಷ್ಟು ನಟಿಯರು ಬೆಳ್ಳಿತೆರೆ ಪ್ರವೇಶ ಮಾಡಿದ್ದಾರೆ. ಇದೀಗ ಆ ಸಾಲಿಗೆ ಮುದ್ದು ಹುಡುಗಿ ಮಲೈಕ ಕೂಡಾ ಸೇರಿಕೊಂಡಿದ್ದಾರೆ. 


ಕಾಮಿಡಿ ಮೂಲಕವೇ ಜನರ ಮನಸ್ಸಿಗೆ ಹತ್ತಿರವಾಗಿರುವ ನಟ ಚಿಕ್ಕಣ್ಣ ಸದ್ಯ ಹೀರೋ ಆಗಿ ನಿಮ್ಮ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಚಿಕ್ಕಣ್ಣ ಅವರು ನಾಯಕ ನಟನಾಗಿ ಕಾಣಿಸಿಕೊಳ್ಳಲಿರುವ ಸಿನಿಮಾ ʻಉಪಾಧ್ಯಕ್ಷʼ. ರಾಬರ್ಟ್, ಹೆಬ್ಬುಲಿ, ಮದಗಜ, ಒಂದಲ್ಲಾ ಎರಡಲ್ಲಾ ಹಲವಾರು ಸಿನಿಮಾಗಳನ್ನು ನಿರ್ಮಿಸಿರುವ ಉಮಾಪತಿ ಶ್ರೀನಿವಾಸ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಒಂದು ಬ್ಯಾನರ್‌ನಲ್ಲಿ ಮಲೈಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಆದ್ರೆ ಮಲೈಕ ಯಾವ ಒಂದು ಪಾತ್ರದಲ್ಲಿ ಕಾಣಲಿದ್ದಾರೆ ಎಂಬ ಕುತೂಹಲ ಸದ್ಯ ಪ್ರೇಕ್ಷಕರಲ್ಲಿ ಮನೆ ಮಾಡಿದೆ.
 
ಅನಿಲ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದು. ಅನಿಲ್ ಅವರ 'ಕಾಣೆಯಾದವರ ಬಗ್ಗೆ ಪ್ರಕಟಣೆ' ಸಿನಿಮಾ ರಿಲೀಸ್‌ ಆಗಿತ್ತು. ಶೇಖರ್ ಚಂದ್ರು ಛಾಯಾಗ್ರಹಣ ಮಾಡಲಿದ್ದು, ಸಂಗೀತ ನಿರ್ದೇಶನವನ್ನು ಅರ್ಜುನ್ ಜನ್ಯ ಮಾಡಲಿದ್ದಾರೆ. ಸಂಕಲನದ ಹೊಣೆ ಕೆ.ಎಂ. ಪ್ರಕಾಶ್ ಅವರದ್ದು. ಇನ್ನು, ಸಾಧು ಕೋಕಿಲ, ವೀಣಾ ಸುಂದರ್, ರವಿಶಂಕರ್ ಮುಂತಾದವರು ಕೂಡಾ ನಟಿಸಲಿದ್ದಾರೆ. ಇದೀಗಾ ಉಪಾಧ್ಯಕ್ಷ ಚಿತ್ರ ಜುಲೈ 17ರಿಂದ ಒಂದೇ ಹಂತದಲ್ಲಿ  ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲಿ ನಡೆಯಲಿದ್ದು, ಕೆಲ ದೃಶ್ಯಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲು ತಂಡ ಸಿದ್ಧತೆ ಮಾಡಿಕೊಂದಿದೆ.


ಇದನ್ನೂ ಓದಿ: Rajinikanth: ರಜನಿಕಾಂತ್‌ ನಟನೆಯ 169 ನೇ ಚಿತ್ರದ ಟೈಟಲ್ ರಿವೀಲ್, ಕುತೂಹಲ ಕೆರಳಿಸಿದ ಪೋಸ್ಟರ್


ಇನ್ನು ಮತ್ತೊಂದು ವಿಚಾರ ಅಂದ್ರೆ ಕನ್ನಡದ ಟಾಪ್‌ ನಟಿಯರಾದ ರಾಧಿಕಾ ಪಂಡಿತ್‌, ರಚಿತ ರಾಮ್‌, ಅದಿತಿ ಪ್ರಭುದೇವ್‌ ಹೀಗೇ ಒಂದಿಷ್ಟು ನಟಿಯರು ಸ್ಮಾಲ್‌ ಸ್ಕ್ರೀನ್‌ನಿಂದ ಬಿಗ್‌ಸ್ಕ್ರೀನ್‌ಗೆ ಎಂಟ್ರಿ ಕೊಟ್ಟು ಸಾಕಷ್ಟು ಹೆಸರು ಮಾಡಿದವರು. ಇದೀಗ ಮಲೈಕ ಕೂಡಾ ಅದೇ ಸಾಲಿನಲ್ಲಿ ಸಾಗುತ್ತಿರುವುದು, ಅವರ ಫ್ಯಾನ್ಸ್‌ಗೆ ಖುಷಿ ನೀಡಿದೆ. ಒಟ್ಟಿನಲ್ಲಿ ಮಲೈಕ ಅವರ ಹೊಸ ಜರ್ನಿಗೆ ನಮ್ಮ ಕಡೆಯಿಂದ ಬೆಸ್ಟ್‌ ವಿಶಸ್‌.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.