Aradhana Next Movie with Dhruva Sarja : ಕಾಟೇರ.. ಕನಸಿನ ರಾಣಿ ಮಾಲಾಶ್ರೀ ಮಗಳು ಆರಾಧನಾ ಅವರಿಗೆ ದೊಡ್ಡ ಹಿಟ್ ಕೊಟ್ಟ ಸಿನಿಮಾ. ಮಾಡಿದ ಮೊದಲ ಸಿನಿಮಾದಲ್ಲೇ ಆರಾಧನಾ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹಲವು ಹೊಸತನ ಕೊಟ್ಟ ನಿರ್ಮಾಪಕ ಅಂದ್ರೆ ಕೋಟಿ ರಾಮು. ಇನ್ನೂ ಕನಸಿನರಾಣಿ ಮಾಲಾಶ್ರೀ ಬಗ್ಗೆ ನಿಮಗೆ ಗೊತ್ತೇ ಇದೆ ಅದೆಷ್ಟೋ ನಿರ್ಮಾಪಕರ ಪಾಲಿನ ಲಕ್ಷ್ಮೀ ಅಂದ್ರೆ ತಪ್ಪಿಲ್ಲ.  


COMMERCIAL BREAK
SCROLL TO CONTINUE READING

ಮಾಲಾಶ್ರೀ ಮುಟ್ಟಿದ ಸಿನಿಮಾವೆಲ್ಲಾ ಚಿನ್ನವೇ ಆಗಿತ್ತು. ಇದೀಗ ಅವರ ಮುದ್ದಾದ ಮಗಳು ಆರಾಧನಾ ಕೂಡ ಕನ್ನಡ ತಮ್ಮ ಶಿಸ್ತಿನ ನಟನೆಯ ಮೂಲಕ ಸೈ ಅನಿಸಿಕೊಂಡಿದ್ದಾರೆ. ಕಾಟೇರ ಸಿನಿಮಾದಲ್ಲಿ ದರ್ಶನ್ ಅವರಿಗೆ ತಕ್ಕ ಜೋಡಿಯಾಗಿ ಕಾಣಿಸಿಕೊಂಡು ಜನಪ್ರಿಯಗಳಿಸಿದ್ದಾರೆ. ಇನ್ನೊಂದು ಮ್ಯಾಟರ್ ಏನಪ್ಪಾ ಅಂದ್ರೆ ದರ್ಶನ್ ಮತ್ತು ಆರಾಧನಾ ಜೋಡಿ ಮುಂದೆ ಮತ್ತೇ ಒಟ್ಟಿಗೆ ನಟಿಸೋದು ಫಿಕ್ಸ್ ಆಗಿದೆ.  ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಆರಾಧನಾ ಒಟ್ಟಿಗೆ ಇರೋ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 


ಇದನ್ನೂ ಓದಿ: 2300 ಕೋಟಿ ಒಡೆಯನನ್ನು 2ನೇ ಮದುವೆಯಾದ ಸ್ಟಾರ್‌ ನಟಿ! ಕನ್ನಡಿಗರ ಮನಗೆದ್ದ ಈ ಚೆಲುವೆ ಯಾರು ಗೊತ್ತಾ? 6 ವರ್ಷದ ಬಳಿಕ ಗುಟ್ಟು ರಟ್ಟು! 


ಇದೀಗ ಆರಾಧನಾ ಫ್ಯಾನ್ಸ್ ಮತ್ತು ಧ್ರುವ ಸರ್ಜಾ ಫ್ಯಾನ್ಸ್ ಪ್ರಶ್ನೆ ಏನಪ್ಪಾ ಅಂದ್ರೆ ಒಟ್ಟಿಗೆ ಸಿನಿಮಾ ಮಾಡುತ್ತಾರಾ. .? ದಯವಿಟ್ಟು ಒಟ್ಟಿಗೆ ಮಾಡಿ ಅಂತ ಅಭಿಮಾನಿಗಳು ರಿಕ್ವೆಸ್ಟ್ ಮಾಡುತ್ತಿದ್ದಾರೆ.  ಜೊತೆಗೆ ಸಿನಿಮಾ ಮಾಡಿದ್ರೆ ತೆರೆಮೇಲೆ ಹಂಡ್ರೆಡ್ ಪೆರ್ಸೆಂಟ್ ಮ್ಯಾಜಿಕ್ ಆಗೋದು ಕನ್ಫರ್ಮ್ ಆಗಿದೆ. 


ಆರಾಧನಾಗೂ ಕಾಟೇರ ಸಿನಿಮಾ ಬಳಿಕ ಸಾಕಷ್ಟು ಅವಕಾಶಗಳು ಕನ್ನಡ ಇಂಡಸ್ಟ್ರಿ ಅಲ್ಲದೇ ಬೇರೆ ಕಡೆಯಿಂದಲೂ ಹುಡುಕಿ ಬರುತ್ತಿವೆ. ಆದರೆ ಅಳೆದು ತೂಗಿಯೇ ಸಿನಿಮಾ ಮಾಡಿಸುತ್ತಿದ್ದಾರೆ ತಾಯಿ ಕನಸಿನ ರಾಣಿ ಮಾಲಾಶ್ರೀ.  ಏನೇ ಆದ್ರೂ ಆರಾಧನಾ ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರಕ್ಕೆ ಜೀವ ಕೊಟ್ಟು ನಟಿಸುತ್ತಾರೆ ಅನ್ನೋದು ಕನ್ಫರ್ಮ್ ಆಗಿದೆ. ಧ್ರುವ ಸರ್ಜಾ ಜೊತೆ ಆರಾಧನಾ ನಟಿಸೋದು ಕನ್ಫರ್ಮ್ ಆಗಲಿ ಅನ್ನೋದು ಅಭಿಮಾನಿಗಳ ಬೇಡಿಕೆ.


ಇದನ್ನೂ ಓದಿ: ಖ್ಯಾತ ಗಾಯಕಿ ಮಂಗ್ಲಿ ಕಾರಿಗೆ ಭೀಕರ ಅಪಘಾತ.. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.