ಕೊಚ್ಚಿ: ಮಾಲಯಾಳಂ ಪ್ರಸಿದ್ಧ ನಟ ಕ್ಯಾಪ್ಟನ್ ರಾಜು ಅವರು ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ 68 ವರ್ಷ ವಯಸ್ಸಾಗಿತ್ತು. ಇವರು ಪತ್ನಿ ಪ್ರಮೀಳಾ ಮತ್ತು ಪುತ್ರ ರವಿಯನ್ನು ಅಗಲಿದ್ದಾರೆ.


COMMERCIAL BREAK
SCROLL TO CONTINUE READING

ಕೆಲ ತಿಂಗಳ ಹಿಂದಷ್ಟೇ ಮಗನ ಮದುವೆ ನಿಮಿತ್ತ ಅಮೆರಿಕಾಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಿಮಾನದಲ್ಲೇ ಹೃದಯಾಘಾತ ಸಂಭವಿಸಿತ್ತು. ಆ ಕೂಡಲೇ ವಿಮಾನವನ್ನು ಒಮಾನ್ ದೇಶದ ಮಸ್ಕತ್'ನಲ್ಲಿ ಇಳಿಸಿ, ಅವರನ್ನು ಅಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಂಡ ನಂತರ ಜುಲೈ 2 ರಂದು ಅಲ್ಲಿಂದ ಕೊಚ್ಚಿಗೆ ವಾಪಸ್ ಕರೆತರಲಾಗಿತ್ತು. 


ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾಪ್ಟನ್ ರಾಜು ಅವರು 1981ಕ್ಕೆ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಇಲ್ಲಿವರೆಗೆ ಅವರು ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್‍ಲಾಲ್ ಜತೆ ನಟಿಸಿದ ನಾಡೋಕಿಕಟ್ಟು ಸಿನಿಮಾದಲ್ಲಿ ಅತ್ಯುತ್ತಮ ಪಾತ್ರ ನಿಭಾಯಿಸಿದ್ದರು. 2017ರ ಮಾಸ್ಟರ್ ಪೀಸ್ ಚಿತ್ರ ಇವರು ನಟಿಸಿದ ಕೊನೆಯ ಸಿನಿಮಾವಾಗಿದೆ.