ನವದೆಹಲಿ: ಮುಂಬೈನಲ್ಲಿರುವ ವಿಶೇಷ ನ್ಯಾಯಾಲಯ ಮಾಲೆಗಾಂ ಸ್ಪೋಟ ಪ್ರಕರಣ ವಿಚಾರವಾಗಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಇತರ ಐದು ಮಂದಿ ವಿರುದ್ಧ ಆರೋಪ ಪಟ್ಟಿಮಾಡಿದೆ.


COMMERCIAL BREAK
SCROLL TO CONTINUE READING

ಎನ್ಐಎ ನ್ಯಾಯಾಲಯದ ಅಧ್ಯಕ್ಷತೆ ವಹಿಸಿದ್ದ  ನ್ಯಾಯಾಧೀಶ ವಿನೋದ್ ಪಾದಲ್ಕರ್ ಅವರು ಆರೋಪಿಗಳ ಮೇಲಿರುವ ಆರೋಪಗಳನ್ನು ಪಟ್ಟಿ ಮಾಡಿದ್ದಾರೆ. ಈಗ ಯುಎಪಿಎ ಕಾಯ್ದೆ  ಅಡಿಯಲ್ಲಿ, ಆರೋಪಿಗಳನ್ನು ಭಯೋತ್ಪಾದಕ ಕೃತ್ಯದ ಭಾಗವಾಗಿ ಆರೋಪಿಸಲಾಗಿದೆ ಮತ್ತು ಐಪಿಸಿ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಕೊಲೆ ಆರೋಪವನ್ನು ದಾಖಲಿಸಲಾಗಿದೆ.



ಆರೋಪದ ಪಟ್ಟಿಯು ಒಂದು ಪ್ರಕ್ರಿಯೆಯಾಗಿದ್ದು, ಇದಾದ ನಂತರ ಕ್ರಿಮಿನಲ್ ಪ್ರಕರಣದಲ್ಲಿ ಅವರನ್ನು ವಿಚಾರಣೆ ನಡೆಸಲಾಗುತ್ತದೆ. ಮಾಲೆಗಾಂ ಸ್ಪೋಟದಲ್ಲಿ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಗ್ಯಾ ಅಲ್ಲದೆ ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಅಜಯ್ ರಹೀರ್ಕರ್, ಸುಧಾಕರ್ ದ್ವಿವೇದಿ, ಸುಧಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿಯವರ ಮೇಲೆ ಆರೋಪ ಪಟ್ಟಿಯನ್ನು ಸಿದ್ದಗೊಳಿಸಲಾಗಿದೆ.ನ್ಯಾಯಾಧೀಶರು ಇವರ ಇವರ ಮೇಲಿನ ಆರೋಪಗಳನ್ನು ಓದಿದಾಗ ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ.


2008 ರ ಸೆಪ್ಟೆಂಬರ್ 29 ರಂದು  ಮುಂಬೈನಿಂದ 200 ಕಿ.ಮೀ ದೂರದಲ್ಲಿರುವ ಮಾಲೆಗಾಂವ್ನಲ್ಲಿ ಬಾಂಬ್ ಸ್ಪೋಟಿಸಿದ ಕಾರಣದಿಂದಾಗಿ 6 ಜನರು ಮೃತಪಟ್ಟು ಸುಮಾರು 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.