ಆಕ್ಟರ್ ಆಗ್ಬೇಕು ಅಂತ ಭಾಳ ಹುಚೈತ್ರಿ... ಯಂತಾ ಮಗನ್ನ ಹಡದಿ ಬೇ ಅನ್ಬೇಕು..!
ಟ್ಯಾಲೆಂಟ್ ಯಾರಪ್ಪನ ಮನೆಯ ಆಸ್ತಿ ಅಲ್ಲ ಎನ್ನುವ ಮಾತು ಎಷ್ಟು ನಿಜ ಅಲ್ವಾ. ನಿಮ್ಮ ಹತ್ರ ಪ್ರತಿಭೆ ಇತ್ತು ಅಂದ್ರೆ ಸಾಧನೆ ಮಾಡುವುದರಿಂದ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಾಧನೆ ಮಾಡಲು ಬಡತನ, ಶ್ರೀಮಂತಿಕೆ ಅಂತ ಭೇದ ಭಾವ ಇಲ್ಲ. ಆತ್ಮ ವಿಶ್ವಾಸ ಬಹಳ ಮುಖ್ಯ ಅಷ್ಟೆ. ಅದೇ ರೀತಿ ಉತ್ತರ ಕರ್ನಾಟಕ ಪ್ರತಿಭೆ ಶಿವಪುತ್ರಪ್ಪ, ಮಲ್ಲು ಜಮಖಂಡಿ ಕೂಡ. ತಮ್ಮದೆ ಶೈಲಿಯಲ್ಲಿ ವಿಡಿಯೋ ಮಾಡಿ ಇಂದು ಖ್ಯಾತಿ ಗಳಿಸಿದ್ದಾರೆ.
ಬೆಂಗಳೂರು : ಟ್ಯಾಲೆಂಟ್ ಯಾರಪ್ಪನ ಮನೆಯ ಆಸ್ತಿ ಅಲ್ಲ ಎನ್ನುವ ಮಾತು ಎಷ್ಟು ನಿಜ ಅಲ್ವಾ. ನಿಮ್ಮ ಹತ್ರ ಪ್ರತಿಭೆ ಇತ್ತು ಅಂದ್ರೆ ಸಾಧನೆ ಮಾಡುವುದರಿಂದ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಾಧನೆ ಮಾಡಲು ಬಡತನ, ಶ್ರೀಮಂತಿಕೆ ಅಂತ ಭೇದ ಭಾವ ಇಲ್ಲ. ಆತ್ಮ ವಿಶ್ವಾಸ ಬಹಳ ಮುಖ್ಯ ಅಷ್ಟೆ. ಅದೇ ರೀತಿ ಉತ್ತರ ಕರ್ನಾಟಕ ಪ್ರತಿಭೆ ಶಿವಪುತ್ರಪ್ಪ, ಮಲ್ಲು ಜಮಖಂಡಿ ಕೂಡ. ತಮ್ಮದೆ ಶೈಲಿಯಲ್ಲಿ ವಿಡಿಯೋ ಮಾಡಿ ಇಂದು ಖ್ಯಾತಿ ಗಳಿಸಿದ್ದಾರೆ.
ಹೌದು.. ಸದಾ ಟ್ಯಾಲೆಂಟ್ ಹಂಟ್ ಮಾಡಿ ಪ್ರತಿಭಾವಂತರನ್ನು ವೇದಿಕೆ ಮೇಲೆ ತಂದು ಗುರುತಿಸುತ್ತಿರುವ ಜೀ ವಾಹಿನಿಯು ಇಂದು ಕಡು ಬಡತನದಲ್ಲೇ ಬೆಳೆದು ತಮ್ಮ ಇಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಲಾವಿದರನ್ನು ತೆರೆ ಮೇಲೆ ತಂದು ನಿಲ್ಲಿಸಿತ್ತು. ಈ ಪೈಕಿ, ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿರುವ ಶಿವಪುತ್ರಪ್ಪ ಕೂಡ ಒಬ್ಬರು. ಕಾಮಿಡಿ ಕಿಲಾಡಿಗಳು ವೇದಿಕೆ ಮೇಲೆ ಬಂದ ಶಿವಪುತ್ರಪ್ಪ ಹೃದಯ ತುಂಬಿ ಮಾತನಾಡಿದರು.
ಇದನ್ನೂ ಓದಿ: ಚಿರು ʼವಾಲ್ಟೇರ್ ವೀರಯ್ಯʼ ಚಿತ್ರದಲ್ಲಿ ಮಾಸ್ ಮಹಾರಾಜ..! ಫ್ಯಾನ್ಸ್‌ಗೆ ಡಬಲ್ ಧಮಾಕ
ಮೈಕ್ ಹಿಡಿದು ಉತ್ತರ ಕರ್ನಾಟದ ಭಾಷೆಯಲ್ಲಿ ಮಾತು ಆರಂಭಿಸಿದ ಮಾತಿನ ಮಲ್ಲ, ʼಒಂದು ಆಕ್ಸಿಡೆಂಟ್ ಆಗಿತ್ರಿ ಮನ್ಯಾಗ, ಆಗ ನನ್ನ ಕಡೆ ಸ್ಕ್ರೀನ್ ಒಡೆದಿದ್ದ ಮೋಬೈಲ್ ಇತ್ತು, ಅದ್ರಿಂದ ನಾನು ವಿಡಿಯೋ ಮಾಡ್ತೀದ್ದೆ. ನಂತರ ಗಣಪತಿ ಪಟ್ಟಿದು ವಿಡಿಯೋ ಮಾಡಿದೆ. ಅದು ವರ್ಕೌಟ್ ಆಯ್ತು. ಆವತ್ತಿನಿಂದ ವಿಡಿಯೋ ಮಾಡೋಕೆ ಸ್ಟಾರ್ಟ್ ಮಾಡಿದೆ. ಇಂದು ನನಗೆ 1.2 ಮಿಲಿಯನ್ ಯೂಟ್ಯೂಬ್ ಫಾಲೋವರ್ಸ್ ಇದ್ದಾರ ರೀ ಅಂತ ತಮ್ಮ ಸಾಧನೆ ಬಗ್ಗೆ ಮಾತನಾಡಿದ್ರು.
ಇನ್ನು ಕಾರ್ಯಕ್ರಮದಲ್ಲಿದ್ದ ಮಲ್ಲು ಜಮಖಂಡಿ ಕೂಡ ತಾವು ನಡೆದು ಬಂದ ಹಾದಿಯ ಬಗ್ಗೆ ವಿವರಣೆ ನೀಡಿದ್ರು. ಸುಮ್ಮನೆ ಒಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಿಟ್ಟಿದ್ವಿ, ಅದು ಜನರಿಗೆ ರೀಚ್ ಆಯ್ತು, ಅವಾಗಿನಿಂದ ವಿಡಿಯೋ ಮಾಡಿ ಜನರ ಜೊತೆ ಹಂಚಿಕೊಳ್ತೀವಿ. ನನಗೆ ಒಂದೇ ಒಂದು ಆಸೆ ಐತ್ರಿ, ನಮ್ಮವ್ವ ಇರೋವರೆಗೂ ಆಕಿ ಕಿವ್ಯಾಗ ಛಲೋ ಮಗನ ಇದಾನವ್ವ... ಯಂತಾ ಮಗನ್ನ ಹಡಿದಿ ಬೇ ಅಂತ ಅನ್ಬೇಕು. ಅದು ಒಂದು ಆಸೆಗಾಗಿ ಹಗಲು ರಾತ್ರಿ ಕಷ್ಟ ಪಡ್ತಿದೀವಿ ಅಂತ ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.