Mamta Kulkarni: 90 ರ ದಶಕದ ಅತ್ಯಂತ ಪ್ರಸಿದ್ಧ ನಟಿ ಮಮತಾ ಕುಲಕರ್ಣಿ. ಮಮತಾ ಅನೇಕ ಜನಪ್ರಿಯ ಚಿತ್ರಗಳಲ್ಲಿ ಕೆಲಸ ಮಾಡಲಿಲ್ಲ, ಆದರೆ ಅವರು ಎಲ್ಲಾ ಮೂರು ಖಾನ್‌ಗಳೊಂದಿಗೆ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಜೊತೆ ನಟಿಸಿದ್ದಾರೆ. ಮಮತಾ ಕುಲಕರ್ಣಿಯವರ ಪ್ರಸಿದ್ಧ ಚಲನಚಿತ್ರಗಳಲ್ಲಿ ಕರಣ್ ಅರ್ಜುನ್, ಬಾಜಿ, ನಸೀಬ್ ಇತ್ಯಾದಿ ಸೇರಿವೆ. ಆದರೆ ಆ ಕಾಲದ ಖ್ಯಾತ ನಟಿಯಾಗಿದ್ದ ಮಮತಾ ಕುಲಕರ್ಣಿ ಅವರು ಏಕಾಏಕಿ ಚಿತ್ರರಂಗದಿಂದ ದೂರ ಸರಿದಿದ್ದು ಏಕೆ ಎಂದು ಇಂದು ನಾವು ನಿಮಗೆ ಹೇಳುತ್ತೇವೆ? ಮಮತಾ ಕುಲಕರ್ಣಿಗೆ ಸಂಬಂಧಿಸಿದ ದೊಡ್ಡ ವಿವಾದ ಏನು? ಇಲ್ಲಿದೆ ಓದಿ..


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಮಹಿಳಾ ಪ್ರಧಾನ ಸಿನಿಮಾದಲ್ಲಿ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ


ಮಾಧ್ಯಮ ವರದಿಗಳ ಪ್ರಕಾರ, ಮಮತಾ ಕುಲಕರ್ಣಿ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಮ್ಯಾಗಜೀನ್‌ಗಾಗಿ ಟಾಪ್‌ಲೆಸ್ ಫೋಟೋಶೂಟ್ ಮಾಡಿದ್ದಾರೆ. ಈ ಫೋಟೋಶೂಟ್‌ನಿಂದಾಗಿ ಮಮತಾ ಕುಲಕರ್ಣಿ ಸಾಕಷ್ಟು ಸುದ್ದಿಯಾದರು. ಅನೇಕರು ಅವರನ್ನು ಟೀಕಿಸಿದರು. ಆದರೆ, ಮಮತಾ ಹೆಸರು ವಿವಾದಕ್ಕೆ ಸಿಲುಕಿದ್ದು ಇದೊಂದೇ ವಿಚಾರಕ್ಕಲ್ಲ. ಡ್ರಗ್ಸ್ ಮಾಫಿಯಾ ಮತ್ತು ಭೂಗತ ಪಾತಕಿ ವಿಕ್ಕಿ ಗೋಸ್ವಾಮಿ ಅವರನ್ನು ಮದುವೆಯಾಗುವ ನಿರ್ಧಾರ ಮಮತಾ ಅವರನ್ನು ಹೆಚ್ಚಿನ ವಿವಾದಕ್ಕೆ ತಳ್ಳಿತು.


ಡ್ರಗ್ಸ್ ಮಾಫಿಯಾ ವಿಕ್ಕಿ ಗೋಸ್ವಾಮಿ ಜೊತೆ ವಿವಾಹ : 


ಮಮತಾ ಕುಲಕರ್ಣಿ 2002ರಲ್ಲಿ ಡ್ರಗ್ಸ್ ಮಾಫಿಯಾ ಮತ್ತು ಭೂಗತ ಪಾತಕಿ ವಿಕ್ಕಿಯನ್ನು ರಹಸ್ಯವಾಗಿ ಮದುವೆಯಾಗಿದ್ದರು. ಮದುವೆಯ ನಂತರ, ಅವರು ಬಾಲಿವುಡ್‌ನಿಂದ ದೂರವಿರಲು ಪ್ರಾರಂಭಿಸಿದರು ಮತ್ತು ಸದ್ದಿಲ್ಲದೆ ತನ್ನ ಪತಿಯೊಂದಿಗೆ ಕೀನ್ಯಾಗೆ ತೆರಳಿದರು. ಆದರೆ, ಮಾದಕ ವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ದೊಡ್ಡ ಪ್ರಕರಣದಲ್ಲಿ ವಿಕ್ಕಿ ಹೆಸರು ಕೇಳಿಬಂದಾಗ ಮಮತಾ ಹೆಸರು ಮುನ್ನೆಲೆಗೆ ಬಂತು. ಈ ಡ್ರಗ್ಸ್ ಸ್ಮಗ್ಲಿಂಗ್ ನ ಬಿಸಿ ಮಮತಾ ಅವರಿಗೂ ತಟ್ಟಿತ್ತು, ಆದರೆ ನಟಿ ಕೈ ಬಿಡಲಿಲ್ಲ. ಆದಾಗ್ಯೂ, ಕೆಲವು ವರ್ಷಗಳ ಹಿಂದೆ, ತನ್ನ ಜೀವನಚರಿತ್ರೆ ಕಾರ್ಯಕ್ರಮಕ್ಕೆ ಬಂದ ಮಮತಾ ತಾನು ಸಾಧ್ವಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ : Kiccha Sudeep : ಕಿಚ್ಚನ ರಾಜಕೀಯ ಎಂಟ್ರಿ.!? ಕಮಲ ಹಿಡಿಯೋದು ಪಕ್ಕನಾ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.