ನವದೆಹಲಿ: ಬಾಲಿವುಡ್ ನಟಿ ಕಂಗನಾ ರಾವತ್ ಅಭಿನಯಿಸಿರುವ ಜಾನ್ಸಿ ರಾಜಕುಮಾರಿ ರಾಣಿ ಲಕ್ಷ್ಮೀಬಾಯಿಯವರ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರ 'ಮಣಿಕರ್ಣಿಕಾ: ಕ್ವೀನ್ ಆಫ್ ಝಾನ್ಸಿ'  ಚಿತ್ರ ಜನವರಿ 25, 2019 ರಂದು ದೇಶಾದ್ಯಂತ ಬಿಡುಗಡೆಯಾಗಿದೆ.ವಿಶೇಷವೆಂದರೆ ಈಗ ಈ ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.


COMMERCIAL BREAK
SCROLL TO CONTINUE READING

ರಾಣಿ ಲಕ್ಷ್ಮಿಬಾಯಿಯವರ ಪಾತ್ರವನ್ನು ಅತ್ಯಂತ ಜವಾಬ್ದಾರಿಯುತವಾಗಿ ಅಭಿನಯಿಸಿ ನಟಿ ಕಂಗನಾ ರಾವತ್ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.ಮನಿಕರ್ನಿಕಾ ಸ್ವಾತಂತ್ರ ಹೋರಾಟಗಾರಳೋಬ್ಬಳ್ಳ ಕಥೆಯನ್ನು ಯುದ್ದದ ಚಿತ್ರಣಗಳ ಮೂಲಕ ತೆರೆಯಲ್ಲಿ ಹಿಡಿದಿಟ್ಟಿರುವ ರೀತಿ ನಿಜಕ್ಕೂ ಅದ್ಬುತವೆನಿಸುತ್ತದೆ.ಈ ಚಿತ್ರದಲ್ಲಿ ವಿಶೇಷವಾಗಿ ನಟಿ ಕಂಗನಾ ಯುದ್ದದ ಸನ್ನಿವೇಶಗಳಲ್ಲಿ, ಕುದುರೆ ಸವಾರಿಯಲ್ಲಿ ತರಬೇತಿ ಪಡೆದು ಭೇಷ್ ಎನಿಸಿಕೊಂಡಿದ್ದಾಳೆ.ಇದು ನಿಜಕ್ಕೂ ನಟಿಯೊಬ್ಬಳು ಪಾತ್ರಕ್ಕೆ ಜೀವ ತುಂಬಿರುವ ರೀತಿಯನ್ನು ತೋರಿಸುತ್ತದೆ.


1857ರ ಸ್ವಾತಂತ್ರ ಸಂಗ್ರಾಮದಲ್ಲಿ ರಾಣಿ ಲಕ್ಷ್ಮೀಬಾಯಿಯವರ ಜೀವನ ಕಥನ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಕುರಿತಾದ ಕಾಲ ಘಟ್ಟದ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ.ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬ್ಬೋಟ್ ಗೆ 1854ರಲ್ಲಿ ಆಸ್ಟ್ರೇಲಿಯಾದ ವಕೀಲ ಜಾನ್ ಲ್ಯಾಂಗ್ ರಾಣಿ ಜಾನ್ಸಿ ಲಕ್ಷ್ಮಿಬಾಯಿಯ ಪರವಾಗಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಸಲ್ಲಿಸಿದ್ದ ಅರ್ಜಿಯ ಪ್ರತಿಯನ್ನು ಕೊಡುಗೆಯಾಗಿ ನೀಡಿದ್ದರು. 


ಆಸ್ಟ್ರೇಲಿಯಾದ ಜಾನ್ ಲಾಂಗ್ ವೃತ್ತಿಯಿಂದ ವಕೀಲ ಹಾಗೂ ಪ್ರವೃತ್ತಿಯಿಂದ ಕಾದಂಬರಿಕಾರರಾಗಿದ್ದರು. ಅವರು ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿ ರಾಣಿ ಲಕ್ಷ್ಮೀಬಾಯಿ ಅವರ ಪರವಾಗಿ ಕಾನೂನು ಹೋರಾಟ ಮಾಡಿದ್ದರು.