Manoj Bajpayee: ಮನೋಜ್ ಬಾಜಪೇಯಿ... ಸಿನಿಪ್ರಿಯರಿಗೆ ಈ ಹೆಸರು ತಿಳಿದೇ ಇರುತ್ತದೆ. ತೆಲುಗು ಮತ್ತು ಹಿಂದಿಯಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮನಗೆದ್ದಿರುವ ನಟನೀತ. ತಮ್ಮ ವೃತ್ತಿ ಜೀವನದಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಮನೋಜ್ ಬಾಜಪೇಯಿ ಅವರ 100 ನೇ ಚಿತ್ರ 'ಭೈಯಾ ಜಿ' ಇತ್ತೀಚೆಗೆ ಬಿಡುಗಡೆಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಜೂನಿಯರ್‌ ಅನುಷ್ಕಾ ಶರ್ಮಾ ಜೊತೆ ಪಾಕ್‌ ನಾಯಕ ಬಾಬರ್‌ ಡೇಟಿಂಗ್!‌ ಕೊಹ್ಲಿ ಪತ್ನಿಯಂತೆ ಕಾಣೋ ಈ ಸುಂದರಿ ಬೇರಾರು ಅಲ್ಲ...


ಮನೋಜ್ ತಮ್ಮ ವೃತ್ತಿ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿರುವವರು. ಅವರ ಕೆಲವು ಚಿತ್ರಗಳು ಸೋತರೆ, ಇನ್ನೂ ಕೆಲವು ದೊಡ್ಡ ಹಿಟ್ ಸಾಧಿಸಿವೆ. ಇನ್ನು ಮನೋಜ್ ಕೆಲವು ಪ್ರಸಿದ್ಧ ನಿರ್ದೇಶಕರ ಜೊತೆ ಕೆಲಸ ಮಾಡಲು ಬಯಸಿದ್ದರು. ಅವರಲ್ಲಿ ಒಬ್ಬರು ದಿಗ್ಗಜ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಆದರೆ, ಆ ಆಸೆ ಇದುವರೆಗೂ ಈಡೇರಿಲ್ಲ.


ಮನೋಜ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. "ನನಗೆ ಗುಲ್ಜಾರ್ ಜೊತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಗೋವಿಂದ್ ನಿಹ್ಲಾನಿ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದೆ. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ಅವರೆಲ್ಲ ವೃತ್ತಿ ಜೀವನದ ಕೊನೆಯ ಹಂತದಲ್ಲಿದ್ದರು. ಆದರೆ ಶ್ಯಾಮ್ ಬೆಂಗಾಲಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು'' ಎಂದು ಮನೋಜ್ ಹೇಳಿದ್ದಾರೆ.


"ಹಾಗೆಯೇ ಸಂಜಯ್ ಲೀಲಾ ಬನ್ಸಾಲಿ ಜೊತೆ ಕೆಲಸ ಮಾಡಲು ಕೂಡ ಆಸೆಯಿತ್ತು. ಆದರೆ, ಅವರ ಸಿನಿಮಾಗಳಿಗೆ ನನ್ನಂತಹ ಕಲಾವಿದರ ಅವಶ್ಯಕತೆ ಇಲ್ಲ. ಅವರು ನಿಜವಾಗಿಯೂ ವಿಭಿನ್ನ' ಎಂದು ಮನೋಜ್ ಹೇಳಿದರು.


ಇದನ್ನೂ ಓದಿ: ಶ್ರೀಲಂಕಾ ವಿರುದ್ಧದ ಮೊದಲ ODI ಗೆ ಭಾರತದ ಪ್ಲೇಯಿಂಗ್ XI: ವಿಕೆಟ್‌ ಕೀಪರ್‌ ಆಗಿ ಯಾರು?


ಈ ಹಿಂದೆ ಬನ್ಸಾಲಿ ಮನೋಜ್‌ʼಗೆ 'ದೇವದಾಸ್' ಚಿತ್ರದಲ್ಲಿ ನಟಿಸಲು ಆಫರ್ ನೀಡಿದ್ದರಂತೆ. ಆ ಸಿನಿಮಾದಲ್ಲಿ ಚುನ್ನಿಲಾಲ್ ಆಗಿ ನಟಿಸಬೇಕಿತ್ತು. ‘ದೇವದಾಸ್’ ಸಿನಿಮಾದಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ಚುನ್ನಿ ಲಾಲ್ ಕಾಣಿಸಿಕೊಂಡಿದ್ದರು. ಆದರೆ, ಆ ಸಮಯದಲ್ಲಿ ನಾಯಕನಾಗಿ ಸಿನಿಮಾ ಮಾಡುತ್ತಿದ್ದ ಮನೋಜ್, ಗೆಳೆಯನ ಪಾತ್ರದಲ್ಲಿ ನಟಿಸಿದರೆ ವೃತ್ತಿಜೀವನಕ್ಕೆ ಧಕ್ಕೆಯಾಗುತ್ತದೆ ಎಂದು ಭಾವಿಸಿ ಆಫರ್ ತಿರಸ್ಕರಿಸಿದ್ದರು. ಆದರೆ ಇದೀಗ ಅದೇ ನಿರ್ದೇಶಕ ಮತ್ತೊಂದು ಅವಕಾಶ ನೀಡಲಿ ಎಂಬಂತೆ ಮನೋಜ್‌ ಕಾಯುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ