ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಾನ್ಸಿ ಅಲಿಯಾಸ್ ಶಿಲ್ಪಾ ಅಯ್ಯರ್...!
Shilpa Iyer : ಕಿರಿತೆರೆಯಲ್ಲಿ ಸಾಲುಸಾಲಾಗಿ ನಟ ನಟಿಯರು ಮದುವೆಯಾಗುತ್ತಿದ್ದಾರೆ. ಪ್ರತೀ ವರ್ಷ ಒಬ್ಬರಲ್ಲ ಒಬ್ಬರು ಹಸೆಮಣೆ ಏರುತ್ತಲೇ ಇರುತ್ತಾರೆ. ಈ ವರ್ಷ ಕೊಂಚ ಹೆಚ್ಚಿನ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಎಂಗೇಜ್ ಮೆಂಟ್ ಮಾಡಿಕೊಂಡಿದ್ದವರೆಲ್ಲಾ ಈ ವರ್ಷ ಮದುವೆಯಾಗುತ್ತಿದ್ದಾರೆ. ಕೆಲ ಕಿರುತೆರೆ ನಟ-ನಟಿಯರು ಸಹ ಕಲಾವಿದರನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ. ಮತ್ತೆ ಕೆಲವರು ಲವ್ ಮ್ಯಾರೇಜ್ ಆಗಿದ್ದರೆ, ಇನ್ನೂ ಕೆಲವರು ಮನೆಯಲ್ಲಿ ನೋಡಿದವರನ್ನೇ ಮೆಚ್ಚಿಕೊಂಡು ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.
ಇದೀಗ ಮತ್ತೊಬ್ಬ ನಟಿ ಮದುವೆಯಾಗಿದ್ದು, ಯಾರಿಗೂ ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಇತ್ತೀಚೆಗೆ ಮದುವೆಯಾದ ಕಲಾವಿದರು, ಅದ್ಧೂರಿಯಾಗಿ ಮದುವೆಯಾಗಿದ್ದರು. ಆದರೆ, ಈ ನಟಿ ಮಾತ್ರ ತುಂಬಾನೇ ಸಿಂಪಲ್ ಆಗಿ ಸಪ್ತಪದಿಯನ್ನು ತುಳಿದಿದ್ದಾರೆ.
ಪತಿ ಜೊತೆಗೆ ವೀಡಿಯೋ ಮಾಡಿದ ಶಿಲ್ಪಾ ಸಚಿನ್ ವಿಶ್ವನಾಥ್ ಎಂಬುವರ ಜೊತೆ ನಟಿ ಶಿಲ್ಪಾ ಅಯ್ಯರ್ ಅವರು ದಾಂಪತ್ಯ ಜೀವನವನ್ನು ಪ್ರಾರಂಭಿಸಿದ್ದಾರೆ. ಶಿಲ್ಪಾ ಅಯ್ಯರ್ ಅವರು ಮದುವೆಯ ಬಗ್ಗೆ ಯಾರಿಗೂ ಕ್ಲೂ ಸಹ ಕೊಟ್ಟಿರಲಿಲ್ಲ. ವ್ಯಾಲೆಂಟೈನ್ಸ್ ಡೇ ದಿನ ವೀಡಿಯೋ ಶೇರ್ ಮಾಡಿ ಎಂಗೇಜ್‌ಮೆಂಟ್ ವಿಚಾರವನ್ನು ಹಂಚಿಕೊಂಡಿದ್ದರು. ಇನ್ನು ಮದುವೆಯ ಬಗ್ಗೆ ಯಾವುದೇ ಸುಳಿವು ಕೊಟ್ಟಿರಲಿಲ್ಲ. ಸ್ನೇಹಿತರೆಲ್ಲಾ ವಿಶ್ ಮಾಡಿರುವ ಫೋಟೋಗಳನ್ನು ಮಾತ್ರವೇ ಶಿಲ್ಪಾ ಅಯ್ಯರ್ ಸ್ಟೇಟಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಅದು ಬಿಟ್ಟರೆ ತಮ್ಮ ಪತಿಯ ಜೊತೆಗೆ ವೀಡಿಯೋ ಒಂದನ್ನು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ.
ದೇಶದಲ್ಲಿ ನಂಬಬಹುದಾದ ನೇತೃತ್ವ ನರೇಂದ್ರ ಮೋದಿಯವರಲ್ಲಿ ಇದೆ; ಶೋಭಾ ಕರಂದ್ಲಾಜೆ
ವೀಡಿಯೋ ಶೇರ್ ಮಾಡಿದ್ದ ನಟಿ 'ಒಲವಿನ ನಿಲ್ದಾಣ' ನಟಿ ಸಂಗೀತಾ ಸೈಲೆಂಟ್ ಆಗಿ ಸಪ್ತಪದಿ ತುಳಿದು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿಯ ಮಾನ್ಸಿ ಪಾತ್ರದ ಮೂಲಕ ಫೇಮಸ್ ಆದ ನಟಿ ಶಿಲ್ಪಾ ಅಯ್ಯರ್ ಸಪ್ತಪದಿ ತುಳಿದಿದ್ದಾರೆ. ಕಳೆದ ತಿಂಗಳಷ್ಟೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ನಟಿ ಶಿಲ್ಪಾ ಅಯ್ಯರ್, ವ್ಯಾಲೆಂಟೈನ್ಸ್ ಡೇ ದಿನ ವೀಡಿಯೋವನ್ನು ಶೇರ್ ಮಾಡಿ ಶಾಕ್ ಕೊಟ್ಟಿದ್ದರು. ಇದೀಗ ನಟಿ ಶಿಲ್ಪಾ ಅಯ್ಯರ್ ಸೈಲೆಂಟ್ ಆಗಿ ಹಸೆಮಣೆ ಏರಿದ್ದಾರೆ.
ಅತ್ತಿಗೆ ಸಂಗೀತಾ ಪಾತ್ರಕ್ಕೆ ಬಣ್ಣ 'ಮಹಾದೇವಿ', 'ಬ್ರಹ್ಮಗಂಟು', 'ನಾಗಮಂಡಲ', 'ಕಸ್ತೂರಿ ನಿವಾಸ', 'ಜೊತೆ ಜೊತೆಯಲಿ' ಧಾರಾವಾಹಿಗಳಲ್ಲಿ ನಟಿಸಿರುವ ಶಿಲ್ಪಾ ಅಯ್ಯರ್ ಸದ್ಯ ಎರಡೆರಡು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಒಲವಿನ ನಿಲ್ದಾಣ' ಧಾರಾವಾಹಿ. ಇದರಲ್ಲಿ ಕಥಾನಾಯಕನ ಅತ್ತಿಗೆ ಸಂಗೀತಾ ಪಾತ್ರದಲ್ಲಿ ನಟಿಸಿದ್ದಾರೆ. ಮತ್ತೊಂದು ಉದಯ ಟಿವಿಯಲ್ಲಿ ಮೂಡಿ ಬರುತ್ತಿರುವ 'ಜನನಿ' ಧಾರಾವಾಹಿಯಲ್ಲಿ ಅನಾಘ ಪಾತ್ರಕ್ಕೆ ಶಿಲ್ಪಾ ಅಯ್ಯರ್ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ-ವೈಯಕ್ತಿಕ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕ್ಲಾಸ್ ತೆಗೆದುಕೊಂಡ ಕಿರಿಕ್ ಕೀರ್ತಿ ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.