Manvitha Kamath Marriage Pressmeet: ಸ್ಯಾಂಡಲ್‌ವುಡ್‌ ಟಗರು ಪುಟ್ಟಿ ಮಾನ್ವಿತಾ ಕಾಮತ್ ಸದ್ಯ ಮದುವೆ ಸಡಗರದಲ್ಲಿರೋದು ನಟಿ, ಗಾಂಧಿನಗರದ ಗಣ್ಯರನ್ನು ಭೇಟಿಯಾಗಿ ಮದುವೆ ಆಮಂತ್ರಣ ನೀಡಿದ್ದಾರೆ. ಈ ನಟಿ ಇದೀಗ ಸೋಶಿಯಲ್‌ ಮಿಡಿಯಾದಲ್ಲಿ  ಅಭಿಮಾನಿಗಳು ಕೇಳ್ತಿರೋ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕಾಗಿಯೇ ಒಂದು ಪತ್ರಿಕಾಗೋಷ್ಟಿ ನಡೆಸಿದ್ದರು. ಅಲ್ಲಿ ಈಕೆ "ಮಾನ್ವಿತಾ ಕಾಮತ್ ಅವರದ್ದು ಲವ್ ಮ್ಯಾರೇಜಾ? ಅಥವಾ ಅರೇಂಜಾ?" ಎಂಬ ಅತಿ ದೊಡ್ಡ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಈ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ನಟಿ ಮಾನ್ವಿತಾ ಕಾಮತ್‌ ಮದುವೆಯಾಗ್ತಿರುವ ಹುಡುಗನ ಹೆಸರು ಅರುಣ್ ಕುಮಾರ್. ಅರುಣ್ ಒಬ್ಬ ಐಟಿ ಪ್ರೊಫೆಶನಲ್ ಮತ್ತು ಮ್ಯೂಸಿಕ್ ಪ್ರೊಡ್ಯೂಸರ್ ಆಗಿದ್ದು, ಇವರಿಗೆ ಚಿತ್ರರಂಗದ ಯಾವುದೇ ನಂಟಿಲ್ಲ, ಹಾಗೆಯೇ ಸಿನಿಮಾ ಇಂಡಸ್ಟ್ರೀಗೆ ಬರುವ ಆಸೆಯೂ ಇಲ್ಲವಂತೆ. ಮನ್ವಿತಾ ತಮ್ಮದು ಪಕ್ಕಾ ಅರೇಂಜ್ಡ್ ಮ್ಯಾರೇಜ್‌. ಕೆಲವು ತಿಂಗಳ ಹಿಂದೆ ಮನ್ವಿತಾ ತಾಯಿ ತೀರಿಕೊಳ್ಳುವುದಕ್ಕೂ ಮುನ್ನ ತನ್ನ ಮದುವೆ ಅರುಣ್ ಜೊತೆಗೆ ಮಾಡಬೇಕೆಂದು ಮಾತನಾಡಿದ್ದು.  ಆತನನ್ನೇ ತಾನು ಮದುವೆಯಾಗ್ತಿದ್ದು, ಇದು ಲವ್ ಮ್ಯಾರೇಜ್ ಅಲ್ಲ ಎಂದು ನಟಿ ಮಾನ್ವಿತಾ ಕಾಮತ್ ಸ್ಪಷ್ಟನೆ ಕೊಟ್ಟಿದ್ದಾರೆ.


ಇದನ್ನೂ ಓದಿ: Sonali Bendre: "ಆ ಹಾಡು ಹಿಟ್ ಆಗದೆಯಿದ್ದರೇ ಚಿತ್ರರಂಗವನ್ನೇ ಬಿಟ್ಟು ಬಿಡಬೇಕೆಂದು ನಿರ್ಧರಿಸಿದ್ದೆ": ಬಿ-ಟೌನ್‌ ನಟಿ ಹೀಗಂದಿದ್ಯೇಕೆ?


ಮಾನ್ವಿತಾ ಹಾಗೂ ಅರುಣ್ ಕುಮಾರ್ ಜೋಡಿ ಇದೇ ಮೇ 1 ರಂದು ಚಿಕ್ಕಮಗಳೂರು ಜಿಲ್ಲೆಯ ಕಳಸದ ವೆಂಕಟರಮಣ ದೇವಸ್ಥಾನದಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ಮದುವೆಯಾಗುತ್ತಿದೆ. ಇನ್ನು ಏಪ್ರಿಲ್ 29ರಂದು ಮೆಹೆಂದಿ ಶಾಸ್ತ್ರ, 30ಕ್ಕೆ ಅರಿಶಿನ ಶಾಸ್ತ್ರ ಮತ್ತು ಮೇ 1ಕ್ಕೆ ಮದುವೆ ಮುಹೂರ್ತ ನೆರವೇರಲಿದೆ. ಇವರ ಮದುವೆ ಕಾರ್ಯಕ್ರಮವು ಕೊಂಕಣಿ ಸಂಪ್ರದಾಯಲ್ಲಿ ನೆರವೇರಲಿದೆ. ಕಳಸದ ಬಳಿಯಿರುವ ಬೈನೆಕಾಡು ಹೋಮ್ ಸ್ಟೇನಲ್ಲಿ ಮೆಹಂದಿ ಮತ್ತು ಹಳದಿ ಶಾಸ್ತ್ರ ನಡೆಯಲಿದೆ ಎಂದು ಮಾನ್ವಿತಾ ತಮ್ಮ ಮದುವೆ ಸಮಾರಂಭದ ವಿವರಗಳನ್ನು ಬಿಚ್ಚಿಟ್ಟರು.


ಮಾನ್ವಿತಾ ಕಾಮತ್‌ಗೆ ನಿಮ್ಮ ಫ್ಯೂಚರ್ ಪ್ಲಾನ್ ಏನು? ಎಂದು ಪ್ರಶ್ನೆಗೆ, "ನಾನು ಮದುವೆಯ ನಂತರ ನಟನೆ ಮುಂದುವರೆಸುವುದಾಗಿ ಮಾನ್ವಿತಾ ತಿಳಿಸಿದ್ದಾರೆ. ನನ್ನ ಪ್ರೊಫೆಶನಲ್ ಮತ್ತು ಪರ್ಸನಲ್ ಲೈಫನ್ನು ಬೇರೆಯಾಗಿ ಇಡುತ್ತೇನೆ. ಚಿತ್ರರಂಗದಿಂದ ದೂರವಿರುವುದಿಲ್ಲ. ಅರುಣ್‌ಗೂ ಇದು ಒಪ್ಪಿಗೆ ಇದೆ" ಎಂದು ತಿಳಿಸಿದ್ದಾರೆ. ನಟಿ ಮನ್ವಿತಾ ಈ ಹಿಂದೆ ಯುವ ದಸರಾ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ್ದು, ಆ ಸಂದರ್ಭದಲ್ಲಿ ವೇದಿಕೆ ಮೇಲೆ ಮಾತನಾಡುತ್ತಾ ನಾನು ಮೈಸೂರಿನ ಹುಡುಗನನ್ನೇ ಮದುವೆಯಾಗ್ತೀನಿ ಎಂದಿದ್ದರಂತೆ. ಸದ್ಯ ವಿಧಿಯೇ ನಿರ್ಧರಿಸಿದಂತೆ ಮೈಸೂರಿನ ಅರುಣ್ ಕುಮಾರ್ ನ್ನೇ ಮದುವೆಯಾಗುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.