Sudeep Max First Look Out: ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟರಲ್ಲಿ ಕಿಚ್ಚ ಸುದೀಪ್, ಅದ್ಭುತ ನಟನಾ ಕೌಶಲ್ಯದ ಹೊರತಾಗಿ, ಕಿಚ್ಚ ಕನ್ನಡ ಚಿತ್ರರಂಗದ ಫಿಟ್ ನಟರಲ್ಲಿ ಒಬ್ಬರು. ಸದ್ಯ ಈ ನಟ ಮುಂಬರುವ ಮ್ಯಾಕ್ಸ್‌ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಕಿಚ್ಚ ಸುದೀಪ್‌ ಬಿಗ್ ಬಾಸ್ ರಿಯಾಲಿಟಿ ಶೋ ನಡುವೆಯೂ ‘ಮ್ಯಾಕ್ಸ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣಕ್ಕೆ ಸಾಥ್ ನೀಡಿದ್ದು, ಇದೀಗ ಚಿತ್ರದಲ್ಲಿನ ಲುಕ್ ಹೇಗಿದೆ ಎಂಬುದನ್ನ ಕೂಡ ರಿವೀಲ್ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು.. ಬಾದ್‌ಶಾ ಸುದೀಪ್‌ ಸೋಷಿಯಲ್‌ ಮಿಡಿಯಾದಲ್ಲಿ ಕುತೂಹಲಕಾರಿ ಪೋಸ್ಟ್‌ ಹಂಚಿಕೊಂಡಿದ್ದು, ಸಖತ್ ರಗಡ್ ಲುಕ್‌ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ ಚಿತ್ರದ ಕಿಚ್ಚನ ಕ್ಲೈಮ್ಯಾಕ್ಸ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ಅದರಲ್ಲಿ ಚಿತ್ರದ ಕ್ಲೈಮ್ಯಾಕ್ಸ್‌ಗೆ ತಯಾರಿ ನಡೆಸುತ್ತಿರುವುದನ್ನು ಕಾಣಬಹುದು. ಮಗ್ ಶಾಟ್‌ನಲ್ಲಿ ನಟ ಸೂಪರ್ ಹಾಟ್ ಆಗಿ ಕಾಣಿಸಿಕೊಂಡಿದನ್ನು ಇವರು ಕ್ಯಾಪ್ಶನ್‌ನಲ್ಲಿ ಬರೆದಿದ್ದಾರೆ.
ಪೋಸ್ಟ್ ಬಹಳಷ್ಟು ಬಝ್ ಅನ್ನು ಸೃಷ್ಟಿಸಿದೆ ಮತ್ತು ನೆಟಿಜನ್‌ಗಳು ಕಾಮೆಂಟ್ ವಿಭಾಗವನ್ನು ಮಹಾಕಾವ್ಯ ಪ್ರತಿಕ್ರಿಯೆಗಳೊಂದಿಗೆ ತುಂಬಿದ್ದಾರೆ. 


ಮೊದಲ ವಾರ 100 ಕೋಟಿ ಕ್ಲಬ್‌ ಸೇರಿದ ಕಾಟೇರ ಚಿತ್ರ: ವಿದೇಶದಲ್ಲೂ ಡಿಬಾಸ್‌ ಹವಾ!


ಕಾಲಿವುಡ್‌ನ ಖ್ಯಾತ ಡೈರೆಕ್ಟರ್‌ ವಿಜಯ್ ಕಾರ್ತಿಕೇಯ ನಿರ್ದೇಶದ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ನಟಿಸಿದ್ದು, ವಿಭಿನ್ನ ಕಥೆಯಲ್ಲಿ ಸುದೀಪ್ ಜೀವತುಂಬಿದ್ದಾರೆ. ಮ್ಯಾಕ್ಸ್‌ ಚಿತ್ರದಲ್ಲಿ ದೊಡ್ಡ ತಾರಾಂಗಣವೇ ಇರಲಿದ್ದು, ಇದರಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್‌, ಕಾಮರಾಜ್, ಸುಕೃತಾ ವಾಗ್ಲೆ ಸೇರಿದಂತೆ ಹಲವರು ನಟಿಸಿದ್ದಾರೆ. ಇದು ಸಾಹಸಮಯ ಚಿತ್ರವಾಗಿದ್ದು ಮತ್ತು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪ್ಪುಲಿ ಎಸ್ ಥಾನು  ಬೆಂಬಲಿಸಿದ್ದಾರೆ.
 


ಮ್ಯಾಕ್ಸ್‌ ಸಿನಿಮಾಗೆ ಮ್ಯೂಸಿಕ್‌ ಕಂಪೋಸರ್ ಬಿ ಅಜನೀಶ್ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ.‌ ಇನ್ನೂ ‘ಮ್ಯಾಕ್ಸ್’ ಚಿತ್ರದ ಟೈಟಲ್ ಟೀಸರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ವಿಕ್ರಾಂತ್ ರೋಣ ಸಿನಿಮಾದ ನಂತರ ‘ಮ್ಯಾಕ್ಸ್’ ಚಿತ್ರದ ಮೂಲಕ ಸುದೀಪ್ ಬರುತ್ತಿದ್ದು,ಈ  ಚಿತ್ರದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಸಿನಿಮಾದ ರಿಲೀಸ್‌ ಅಪ್‌ಡೇಟ್‌ಗಾಗಿ ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.