Max 1st Day Box Office Collection: ಮ್ಯಾಕ್ಸ್ ಸಿನಿಮಾ ಮೊದಲ ದಿನವೇ ದಾಖಲೆಯ ಕಲೆಕ್ಷನ್... ಗಲ್ಲಾಪೆಟ್ಟಿಗೆಯಲ್ಲಿ ಕಲೆಹಾಕಿದ್ದು ಎಷ್ಟು ಕೋಟಿ ?
Max First Day Box Office Collection: ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಮ್ಯಾಕ್ಸ್ ಸಿನಿಮಾ ಬುಧವಾರ ರಿಲೀಸ್ ಆಗಿದೆ. ಮ್ಯಾಕ್ಸ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಶುಭಾರಂಭ ಮಾಡಿದೆ.
Max Box Office Collection: ಸುದೀಪ್ ನಟನೆಯ ಮ್ಯಾಕ್ಸ್ ಕ್ರಿಸ್‌ಮಸ್ ದಿನದಂದೇ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಮೊದಲ ದಿನ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಮ್ಯಾಕ್ಸ್ ಈ ವರ್ಷದಲ್ಲಿ ಮೊದಲ ದಿನ ಅತಿ ಹೆಚ್ಚು ಬಾಕ್ಸ್ ಆಫಿಸ್ ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಎನಿಸಿಕೊಂಡಿದೆ.
ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಮ್ಯಾಕ್ಸ್ ಮೊದಲ ದಿನದ ಕಲೆಕ್ಷನ್ 8.50 ಕೋಟಿ ರೂಪಾಯಿ. ಕೆಲ ದಿನಗಳ ಹಿಂದೆ ಬಿಡುಗಡೆ ಆದ ಉಪೇಂದ್ರ ಅವರ ಯುಐ ಸಿನಿಮಾ ಮೊದಲ ದಿನ 6.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಮ್ಯಾಕ್ಸ್ ಕನ್ನಡ, ತಮಿಳು ಮತ್ತು ತೆಲುಗು ಮೂರು ಭಾಷೆಗಳಲ್ಲಿ ರಿಲೀಸ್ ಆಗಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ.
ಇದನ್ನೂ ಓದಿ : ಸಮಂತಾ ರುತ್ ಪ್ರಭು ಪ್ರೆಗ್ನೆನ್ಸಿ ಫೋಟೋಸ್ ವೈರಲ್.. ಬೇಬಿ ಬಂಪ್ ಕಂಡು ಫ್ಯಾನ್ಸ್ ಶಾಕ್!!
ಸುದೀಪ್ ಮಾಸ್ ಅವತಾರದ ಜೊತೆಗೆ ಕ್ರಿಸ್‌ಮಸ್ ರಜೆ ಪ್ಲಸ್ ಪಾಯಿಂಟ್ ಆಗಿದೆ. ಎರಡನೇ ದಿನದ ಕಲೆಕ್ಷನ್ ಮೊದಲ ದಿನದ ಕಲೆಕ್ಷನ್ ಕೂಡ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮೊದಲ ದಿನದ 8.50 ಕೋಟಿ ರೂಪಾಯಿ ಕಲೆಕ್ಷನ್‌ನಲ್ಲಿ ಸುಮಾರು 82% ಕಲೆಕ್ಷನ್ ಕರ್ನಾಟಕದಲ್ಲಾಗಿದ್ದು, ಉಳಿದ 18% ಕಲೆಕ್ಷನ್ ಪರಭಾಷೆಗಳಲ್ಲಿ ಆಗಿದೆ.
ಮ್ಯಾಕ್ಸ್ ಸಿನಿಮಾವನ್ನು ತಮಿಳಿನ ಜನಪ್ರಿಯ ನಿರ್ಮಾಪಕ ಕಳಯಪುಲಿ ಎಸ್ ಥನು ನಿರ್ಮಾಣ ಮಾಡಿದ್ದಾರೆ. ಸುದೀಪ್ ಸಹ ನಿರ್ಮಾಣ ಮ್ಯಾಕ್ಸ್‌ಗಿದೆ. ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ, ತೆಲುಗು ನಟ ಸುನಿಲ್, ಶರತ್ ಲೋಹಿತಾಶ್ವ, ಉಗ್ರಂ ಮಂಜು ಸಿನಿಮಾದಲ್ಲಿ ಅಬ್ಬರಿಸಿದ್ದಾರೆ.
ಇದನ್ನೂ ಓದಿ : 1 ಚಿತ್ರಕ್ಕೆ 200 ಕೋಟಿ.. ಕನ್ನಡದ ಈ ಪ್ರಖ್ಯಾತ ನಟನೇ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.