Bigg Boss 16: ಹಿಂದಿ ಬಿಗ್‌ ಬಾಸ್‌ ಸೀಸನ್  16ರಲ್ಲಿ  ಎಂಸಿ ಸ್ಟಾನ್  ಟ್ರೋಫಿ ಗೆದ್ದಿದ್ದರು. ಇದರ ಬೆನ್ನಲೇ  ಸ್ಟಾನ್ ಅವರು ಭಾರತದಾದ್ಯಂತ ಲೈವ್ ಕನ್ಸರ್ಟ್‌ಗಳನ್ನು ಮಾಡುವುದಾಗಿ ತಿಳಿಸಿದ್ದರು ಇವರು ಮೂಲತಃ ರ‍್ಯಾ ಪರ್‌ ಸಿಂಗರ್‌ ಆಗಿದ್ದು , ಇವರ ಹಾಡಿಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.  ಹಾಗೆಯೇ  ಇತ್ತೀಚೆಗೆ ಹೈದರಾಬಾದ್‌ನಲ್ಲಿ ಪ್ರದರ್ಶನ ನೀಡುತ್ತಿದ್ದರು ದಿಢೀರನೆ  ಸಂಗೀತ ಕಾರ್ಯಕ್ರಮವನ್ನು ನಿಲ್ಲಿಸಿದ್ದರು. 


COMMERCIAL BREAK
SCROLL TO CONTINUE READING

ಇವರ ಹಾಡಿಗೆ ಒಬ್ಬ ಅಭಿಮಾನಿ ತೀರಾ ಉತ್ಸುಕನಾಗಿ ಕುಣಿಯುವ ಭರದಲ್ಲಿ ಕೆಳಗೆ ಬಿದ್ದನು.. ಅವನಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸ್ಟಾನ್   ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಿದ್ದರು. ಸಂಗೀತ ನಿಲ್ಲಿಸಿ ಅಭಿಮಾನಿಯ ಕುಶಲ ಕ್ಷೇಮ ವಿಚಾರಿಸಿ ಅವನನ್ನು ಮೇಲೆತ್ತಲು ಸಹಾಯ ಮಾಡಿದನು.ಅವರು ಕಾರ್ಯಕ್ರಮ ನಿಲ್ಲಿಸುತ್ತಿದ್ದಂತೆ  ಅಭಿಮಾನಿಗಳು ಒಮ್ಮಿಂದೊಮ್ಮಲೇ ಗದ್ದಲ ಶುರು ಮಾಡಿದ್ದಾರೆ. ಬಳಿಕ ಇವರ ಈ ಕಾರ್ಯ ಗಮನಿಸಿ  ಎಲ್ಲರೂ ಶ್ಲಾಘಿಸಿದ್ದಾರೆ.. ಈ ವೀಡಿಯೋದಲ್ಲಿ ಅವರ ಮಾನವೀಯ ಗುಣಗಳನ್ನು ಕಾಣಬಹುದಾಗಿದೆ. 


ಇದನ್ನೂ ಓದಿ: Naresh-Pavithra Lokesh: ಅದ್ಧೂರಿಯಾಗಿ 3ನೇ ಮದುವೆಯಾದ ಪವಿತ್ರ, ನರೇಶ್‌ಗೆ 4ನೇ ಮದುವೆ ಸಂಭ್ರಮ..!


ವೈಯಕ್ತಿಕ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕ್ಲಾಸ್‌ ತೆಗೆದುಕೊಂಡ ಕಿರಿಕ್‌ ಕೀರ್ತಿ ..!


ಇವರ ಈ  ಮಾನವೀಯ ಗುಣಕ್ಕೆ ನೆಟಿಜನ್‌ ಫುಲ್‌ ಫಿಧ ಆಗಿದ್ದಾರೆ. 2021 ರಲ್ಲಿ, ಟ್ರಾವಿಸ್ ಸ್ಕಾಟ್ ಅವರ ಸಂಗೀತ  ಕಾರ್ಯಕ್ರಮದಲ್ಲಿ  ಸಮಯದಲ್ಲಿ ಆಸ್ಟ್ರೋವರ್ಲ್ಡ್ ಉತ್ಸವದಲ್ಲಿ ಮಾರಣಾಂತಿಕ ಅಪಘಾತ ಸಂಭವಿಸಿತು, ಗೋಷ್ಠಿಯಲ್ಲಿ ಕಾಲ್ತುಳಿತದ ನಂತರ 10 ಜನರು ಪ್ರಾಣ ಕಳೆದುಕೊಂಡರು. ಅಭಿಮಾನಿಗಳು ಸಹಾಯಕ್ಕಾಗಿ ಕೂಗಿದಾಗ ಮತ್ತು ಪ್ರದರ್ಶನವನ್ನು ನಿಲ್ಲಿಸುವಂತೆ ವಿನಂತಿಸಿದಾಗಲೂ ಅಮೇರಿಕನ್ ರಾಪರ್ ಕಾರ್ಯಕ್ರಮವನ್ನು ಮುಂದುವರೆಸಿದರು. "ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುವ ಆಸ್ಟ್ರೋವರ್ಲ್ಡ್ ದುರಂತದ ಬಲಿಪಶುಗಳನ್ನು ನಾನು ಯಾವಾಗಲೂ ಗೌರವಿಸುತ್ತೇನೆ" ಆದ್ದರಿಂದ ಬೇಗನೆ ಕಾರ್ಯಕ್ರಮ ನಿಲ್ಲಿಸಿದ್ದೇವು ಎಂದರು..