ಮುಂಬೈ: ರಿಯಾ ಚಕ್ರವರ್ತಿ (Rhea Chakraborty) ಪರ ವಕೀಲ ಸತೀಶ್ ಮಾನಶಿಂಧೆ ಶನಿವಾರ ನಟಿ ಪರವಾಗಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಹೇಳಿಕೆಯಲ್ಲಿ ಅವರು ಮಾಧ್ಯಮದ ಒಂದು ಸಮೂಹದ ಮೂಲಕ ರಿಯಾ ವಿರುದ್ಧ ಹಬ್ಬಿಸಲಾಗಿರುವ ಊಹಾಪೋಹಗಳು ತೊಂದರೆ ಸಾಕಷ್ಟು ಕಷ್ಟಕರವಾಗಿವೆ. ಈ ಹೇಳಿಕೆಯಲ್ಲಿ ಮಾನಶಿಂಧೆ, "ಸುಶಾಂತ್ ಸಿಂಗ್ ರಜಪೂತ ಸಾವಿಗೆ ಸಂಬಂಧಿಸಿದಂತೆ ಏಮ್ಸ್ ವೈದ್ಯರ ತಂಡದ ವತಿಯಿಂದ ಜಾರಿಗೊಳಿಸಲಾಗಿರುವ ಹೇಳಿಕೆಯನ್ನು ನೋಡಿದ್ದೇನೆ. ಈ ಅಧಿಕೃತ ದಾಖಲೆಗಳು ಕೇವಲ ಸಿಬಿಐ ಹಾಗೂ ಏಮ್ಸ್ ಬಳಿ ಮಾತ್ರ ಇವೆ. ತನಿಖೆ ಪೂರ್ಣಗೊಂಡ ಬಳಿಕ ಈ ದಾಖಲೆಗಳನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗುವುದು. ಸಿಬಿಐ ಈ ಕುರಿತು ಹೇಳಿಕೆ ನೀಡುವ ನೀಡಲಿದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Sushant Case: ತನ್ನ ಅಂತಿಮ ವರದಿ ಸಲ್ಲಿಸಿದ AIIMS, ಮರ್ಡರ್ ಅಲ್ಲ ಆತ್ಮಹತ್ಯೆಗೆ ಶರಣಾಗಿದ್ದ ನಟ ಎಂದ ಮೂಲಗಳು


'ಯಾವುದೇ ಸಂದರ್ಭದಲ್ಲೂ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಾವು ಯಾವಾಗಲೂ ರಿಯಾ ಚಕ್ರವರ್ತಿ ಪರವಾಗಿ ಹೇಳಿದ್ದೇವೆ. ಮಾಧ್ಯಮಗಳ ಗುಂಪೊಂದು ರಿಯಾ ವಿರುದ್ಧದ ಹಬ್ಬಿಸಿರುವ ಊಹಾಪೋಹಗಳು ಸಾಕಷ್ಟು ಚೇಷ್ಟೆಯ ಮತ್ತು ಗೊಂದಲದ ಸೃಷ್ಟಿಸುವ ಸಂಗತಿಯಾಗಿವೆ. ನಾವು ಸತ್ಯಕ್ಕೆ ಮಾತ್ರ ಬದ್ಧರಾಗಿದ್ದೇವೆ. ಸತ್ಯಮೇವ ಜಯತೆ. '  ಎಂದು ಮಾನಸಿಂಧೆ ಹೇಳಿದ್ದಾರೆ.


ಇದನ್ನು ಓದಿ- Rakul Preet Singh ಅರ್ಜಿ ಆಧರಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೋಟಿಸ್


ಮಾಧ್ಯಮಗಳು ಹಬ್ಭಿಸಿರುವ ಕೆಲ ಅಸಂತೃಪ್ತಿಕರ ವರದಿಗಳ ಹಿನ್ನೆಲೆ ಅವರ ಈ ಹೇಳಿಕೆ ಹೊರಬಂದಿದೆ.  ಸುಶಾಂತ್ ಸಿಂಗ್ ರಾಜ್ಪುತ್ ಅವರ ಹತ್ಯೆಯಾಗಿರುವ ಸಾಧ್ಯತೆಗಳನ್ನು ಏಮ್ಸ್ ನ ಫಾರೆನ್ಸಿಕ್ ತಂಡ ಅಲ್ಲಗಳೆದಿದೆ ಎಂಬುದರ ಹಿನ್ನೆಲೆ ಬಂದ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ. ಏಮ್ಸ್ ತನ್ನ ಒಂದು ವರದಿಯನ್ನು ಸಿಬಿಐಗೆ ಸಲ್ಲಿಸಿದೆ. ಆದರೆ, ಏಜೆನ್ಸಿ ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.