ಮುಂಬಯಿ/ಹರಿದ್ವಾರ : ಬಾಲಿವುಡ್ ನಟಿ ಮತ್ತು ನಿರ್ಮಾಪಕಿ ಅನುಷ್ಕಾ ಶರ್ಮಾ (Anushka Sharma) ಮತ್ತು  ಟೀಮ್ ಇಂಡಿಯಾ (Team India) ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಕುಟುಂಬಕ್ಕೆ ಹೊಸ ಅತಿಥಿಯ ಸೇರ್ಪಡೆಯಾಗಿದೆ. ಅನುಷ್ಕಾ ಶರ್ಮಾ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.  ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.  ಕ್ರಿಕೆಟ್ ಲೋಕ, ಬಾಲಿವುಡ್ ಮತ್ತು ಅಪಾರ ಅಭಿಮಾನಿ ವರ್ಗದಿಂದ ಶುಭಾಶಯಗಳ ಮಹಾಪೂರ ಹರಿದಿದೆ.


COMMERCIAL BREAK
SCROLL TO CONTINUE READING

ವಿರುಷ್ಕಾ ಮಗುವಿಗೆ ನಾಮಕರಣ ಮಾಡುವುದು ಇವರೇ.:
ತಂದೆ, ತಾಯಿ ಸೆಲೆಬ್ರಿಟಿ ಆದರೇನಂತೆ. ವಿರುಷ್ಕಾ (Virushka) ಮಗಳಿಗೆ ನಾಮಕರಣ ಮಾಡೋದು ಹರಿದ್ವಾರದ ಓರ್ವ ಸಂತ. ಹರಿದ್ವಾರದ ಆ ಸಂತನ ಹೆಸರು ಮಹಾರಾಜ್ ಅನಂತ ಬಾಬ (Maharaj Ananth Baba). ಮೂಲಗಳಿಂದ  ಈ ಮಾಹಿತಿ ಗೊತ್ತಾಗಿದೆ. ಈ ಸಂತನ ಆಶೀರ್ವಾದ, ಸಲಹೆ ಸೂಚನೆಗಳಿಲ್ಲದೆ ಅನುಷ್ಕಾ ಶರ್ಮಾ (Anushka Sharma) ಕುಟುಂಬ ಏನನ್ನೂ ಮಾಡುವುದಿಲ್ಲ.


ಇದನ್ನೂ ಓದಿ :  Video:ವಿರುಷ್ಕಾ ದಂಪತಿಯ ಮುದ್ದಾದ ಮಗಳ ಮೊದಲ ಝಲಕ್ ಹಂಚಿಕೊಂಡ ವಿರಾಟ್ ಸಹೋದರ


ಆ ಸಿದ್ದ ಪುರುಷನ ವಿಶೇಷತೆಗಳೇನು? :
ಮಹರಾಜಅನಂತ ಬಾಬಾ ಅವರ ಆಶ್ರಮ ಹರಿದ್ವಾರದಲ್ಲಿದೆ (Haridwara). ಅನಂತ ಧಾಮ ಎಂದು ಅದನ್ನು ಕರೆಯಲಾಗುತ್ತಿದೆ.  ಮನುಕುಲದ ಉದ್ದಾರಕ್ಕಾಗಿ ನಮ್ಮನ್ನು ಸಮರ್ಪಿಸಿಕೊಂಡಿದ್ದೇವೆ ಎಂದು ಆಶ್ರಮದ ವೆಬ್ ಸೈಟ್ ಹೇಳುತ್ತದೆ. 


ಅನಂತ ಬಾಬಾ ಆಶೀರ್ವಾದ, ಸಲಹೆ ಸೂಚನೆಗಳಿಲ್ಲದೆ ವಿರುಷ್ಕಾ ಫ್ಯಾಮಿಲಿ ಯಾವುದೇ ಕೆಲಸ ಮಾಡುವುದಿಲ್ಲ. ಅನುಷ್ಕಾ ಬಾಲಿವುಡ್(Bollywood) ಪ್ರವೇಶಕ್ಕೆ ಮುನ್ನ ಬಾಬಾ ಆಶ್ರಮಕ್ಕೆ ಯಾವಾಗಲೂ ಹೋಗಿ ಬರುತ್ತಿದ್ದರು. ಬಾಲಿವುಡ್ ಪ್ರವೇಶದ ಬಳಿಕ ಅವರ ಭೇಟಿ ರಹಸ್ಯವಾಗಿರುತ್ತಿತ್ತು.  ಅನುಷ್ಕಾ ತಾಯಿ ಬಾಬಾ ಅವರ ಪರಮ ಭಕ್ತೆ, ಬಾಬಾ ಸಲಹೆ ಸೂಚನೆ ಬಳಿಕವೇ ವಿರುಷ್ಕಾ ಮದುವೆ ನೆರವೇರಿತ್ತು. ವಿರುಷ್ಕಾ ದಂಪತಿ ಕೂಡಾ ಬಾಬಾ ಆಶ್ರಮಕ್ಕೆ (Baba Ashram) ಭೇಟಿ ನೀಡಿದ್ದರು. 


ಇದನ್ನೂ ಓದಿ : SocialMediaದಲ್ಲಿ ಮತ್ತೆ ಎದ್ದಿದೆ Virushka ಅಲೆ


ಈಗ ವಿರುಷ್ಕಾ ಕುಟುಂಬಕ್ಕೆ ಹೊಸಅತಿಥಿಯ ಆಗಮನವಾಗಿದೆ.  ಆ ಮುದ್ದು ಮಗುವಿನ ಹೆಸರೇನಿರಬೇಕು. ಹುಟ್ಟುವಾಗಲೇ ಸೆಲೆಬ್ರಿಟಿಯಾಗಿರುವ ಈ ಮುದ್ದು ಮಗುವಿಗೆ ಹೆಸರು ಅಂತಿಮಗೊಳಿಸುವುದು ಕೂಡಾ ಅನಂತ ಬಾಬಾ ಎಂದು ಹೇಳಲಾಗಿದೆ. ಅನಂತ ಬಾಬ ಸೂಚಿಸಿದ ಹೆಸರು ಮಗುವಿಗೆ ನಾಮಕರಣ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.