Megastar Chiranjeevi Workout Video: ಹಲವು ಸ್ಟಾರ್‌ ನಟರಿಗೆ ಎಷ್ಟೇ ವಯಸ್ಸಾದರೂ, ಇನ್ನೂ ಯಂಗ್‌ ಆಂಡ್‌ ಫಿಟ್‌ ಆಗಿ ಕಾಣುತ್ತಿರುತ್ತಾರೆ. ಕೆಲವು  60 ವರ್ಷ ದಾಟಿದ ಸ್ಟಾರ್‌ಗಳ ಫಿಟ್ನೆಸ್ ಬಗ್ಗೆ ಅಭಿಮಾನಿಗಳಿಗೆ ಸಹಜವಾಗಿ ಕುತೂಹಲವಿದ್ದು, ಇಂತಹವ ಸಾಲಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಕೂಡ ಒಬ್ಬರು. ಸುಮಾರು ನಾಲ್ಕು ದಶಕಗಳಿಂದ ಚಿರಂಜೀವಿ ತಮ್ಮ ಫ್ಯಾನ್ಸ್‌ಗಳನ್ನು ರಂಜಿಸುತ್ತಿದ್ದು, ಈ ನಟನ ಸಿನಿಮಾ ನೋಡುವುದಕ್ಕೆ ತೆಲುಗು ಮಂದಿಗೆ ಥಿಯೇಟರ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ, ರಾಜಕೀಯಕ್ಕೆ ಎಂಟ್ರಿ ಕೊಟ್ಟು ಮತ್ತೆ ಚಿತ್ರರಂಗಕ್ಕೆ ಹಿಂತಿರುಗಿದ ಬಳಿಕ ಕ್ರೇಜ್ ಕೊಂಚ ತಗ್ಗಿದ್ದರೂ, ಮೆಗಾ ಕಮ್‌ಬ್ಯಾಕ್‌ಗೆ ಎದುರು ಕಸರತ್ತು ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಮೆಗಾಸ್ಟಾರ್‌ ಚಿರಂಜೀವಿ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಸದ್ಯ ಹೊಸ ಸಿನಿಮಾಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.'ವಿಶ್ವಂಭರ' ಅನ್ನುವ ಫ್ಯಾಂಟಸಿ ಚಿತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಜಿಮ್‌ನಲ್ಲಿ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಿದ್ದಾರೆ. ಈ ನಟ ತಮ್ಮ 68 ವಯಸ್ಸಿನಲ್ಲಿಯೂ ಸಖತ್ ವರ್ಕ್‌ಔಟ್‌ ಮಾಡುತ್ತಿರುವುದನ್ನು ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದು, ಸದ್ಯ ಈ ಸ್ಟಾರ್‌ ನಟ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.   


ಇದನ್ನೂ ಓದಿ: ಕಡಲೆಕಾಯಿ, ಸಿಗರೇಟ್ ಮಾರುತ್ತ 33 ವರ್ಷ ಕಳೆದ ಈ ಸೂಪರ್‌ಸ್ಟಾರ್ ಇಂದು 200 ಕೋಟಿ ಒಡೆಯ!


ಟಾಲಿವುಡ್‌ ಸ್ಟಾರ್‌ ನಟ ಚಿರಂಜೀವಿ ಸದ್ಯ 'ವಿಶ್ವಂಭರ' ಸಿನಿಮಾದಿಂದ ಮೆಗಾ ಸಕ್ಸಸ್‌ ನೋಡಲು  ಕಷ್ಟ ಪಡುತ್ತಿದ್ದು, ಅದಕ್ಕಾಗಿ ಗಂಟೆಗಟ್ಟಲೆ ಜಿಮ್‌ನಲ್ಲಿ ಬೆವರು ಸುರಿಸುತ್ತಿದ್ದಾರೆ. ಅವರ ವರ್ಕ್‌ಔಟ್ ವಿಡಿಯೋ ನೋಡಿ ಯುವಕರೇ ಗಾಬರಿ ಬಿದ್ದಿದ್ದಾರೆ. ಚಿರಂಜೀವಿಯ ದೈಹಿಕ ಹಾಗೂ ಮಾನಸಿಕ ಸ್ಥೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ನಟ ಪ್ರತಿದಿನ ವರ್ಕ್‌ಔಟ್ ಮಾಡುತ್ತಿದ್ದು,ಡಯೆಟ್ ಜೊತೆಗೆ ಜಿಮ್‌ನಲ್ಲಿ ಕಸರತ್ತು ಮಾಡುವುದನ್ನು ಮರೆಯುವುದಿಲ್ಲ. ಈ ನಟ ಬೆಳಗ್ಗೆ 7 ಗಂಟೆಗೆ ಶೂಟಿಂಗ್ ಇದ್ದರೂ, ನಾಲ್ಕು ಗಂಟೆಗೆ ಎದ್ದು 6 ಗಂಟೆಯವರೆಗೂ ವರ್ಕ್‌ಔಟ್ ಮಾಡುತ್ತಾರೆ. ಆ ಬಳಿಕವೇ ಸಿನಿಮಾ ಸೆಟ್ಟಿಗೆ ಹೋಗುತ್ತಾರೆ. 



ಪ್ರತಿ ಬಾರಿ ಚಿರಂಜೀವಿ ಹೊಸ ಸಿನಿಮಾ ಒಪ್ಪಿಕೊಂಡಾಗಲೂ ಜಿಮ್‌ನಲ್ಲಿ ಫಿಟ್ ಆದ ಬಳಿಕ ಸೆಟ್ಟಿಗೆ ಹೋಗುತ್ತಾರೆ. ಈ ನಟ ಒತ್ತಡವನ್ನು ತೆಗೆದುಕೊಳ್ಳುವುದಕ್ಕೆ ಇಷ್ಟ ಪಡದೆಯಿದ್ದು, ಹೀಗಾಗಿ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ತಮ್ಮ ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ, ದೈಹಿಕ ಆರೋಗ್ಯ ಕೂಡ ಅದ್ಭುತವಾಗಿರುತ್ತೆ ಅನ್ನೋದು ಅವರ ನಂಬಿಕೆಯಾಗಿದೆ. ಹಾಗೇ ಜಿಮ್‌ನಲ್ಲಿ ದೇಹಕ್ಕೂ ಅಷ್ಟೇ ಕಸರತ್ತು ನೀಡುತ್ತಾರೆ.  


ಇದನ್ನೂ ಓದಿ: Rajinikanth Salary: ಅತಿಥಿ ಪಾತ್ರಕ್ಕೂ ಕೋಟಿಗಟ್ಟಲೆ.. ಲಾಲ್ ಸಲಾಂಗಾಗಿ ರಜನಿಕಾಂತ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?


ವಿಶ್ವಂಭರದ ಒಂದು ಶೆಡ್ಯೂಲ್ ಮುಗಿಸಿ ಇದೀಗ ಹೈದರಾಬಾದ್‌ನಲ್ಲಿ ತನ್ನ ಮುಂದಿನ ಹಂತವನ್ನು ಪ್ರಾರಂಭಿಸಲು ಸಜ್ಜಾಗಿದೆ. ಗಣನೀಯ ವೆಚ್ಚದಲ್ಲಿ ವಿಶೇಷವಾಗಿ ಸಿನಿಮಾ ಸೆಟ್ ರೆಡಿಯಾಗುತ್ತಿದ್ದು, ಪ್ರೇಕ್ಷಕರನ್ನು ಅದ್ಭುತ ಕ್ಷೇತ್ರದಲ್ಲಿ ಮುಳುಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಫೆಬ್ರವರಿ ಮೊದಲ ವಾರದಲ್ಲಿ ಪ್ರಾರಂಭವಾಗುವ  ವೇಳಾಪಟ್ಟಿಯಲ್ಲಿ ಚಿರಂಜೀವಿ ಚಿತ್ರೀಕರಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಚಿರಂಜೀವಿ ಸೇರಿದಂತೆ ಪ್ರಮುಖ ಪಾತ್ರವರ್ಗವನ್ನು ಒಳಗೊಂಡಿರುವ ದೃಶ್ಯಗಳು ನಿಖರವಾಗಿ ವಿನ್ಯಾಸಗೊಳಿಸಲಾದ ಈ ಸೆಟ್‌ನಲ್ಲಿ ತೆರೆದುಕೊಳ್ಳುತ್ತವೆ.ಈ ಚಿತ್ರವು 2025 ರ ಸಂಕ್ರಾಂತಿಯ ಸಮಯದಲ್ಲಿ ಬಿಡುಗಡೆಯಾಗಲಿದ್ದು, ಇದು ಎಂದೆಂದಿಗೂ ಡೈನಾಮಿಕ್ ಮೆಗಾಸ್ಟಾರ್ ನೇತೃತ್ವದ ಫ್ಯಾಂಟಸಿ ಮತ್ತು ನಗುವಿನ ಜಗತ್ತಿನಲ್ಲಿ ಸಿನಿಮೀಯ ಪ್ರಯಾಣವನ್ನು ಭರವಸೆ ನೀಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.